Sita Ramam : ರಶ್ಮಿಕಾ ನಟನೆಯ ಸಿನಿಮಾ ಅಧ್ಬುತ ಎಂದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು…!!!
ರಶ್ಮಿಕಾ ಮುಟ್ಟಿದ್ದೆಲ್ಲಾ ಚಿನ್ನ ಎಂಬಂತಿದೆ.. ಅವರು ಯಾವ ಸಿನಿಮಾ ಮಾಡಿದ್ರೂ ಹಿಟ್… ಆದ್ರೆ ಅವರಿಗೆ ಮೊದಲ ಸೋಲಿನ ರುಚಿ ತೋರಿಸಿದ್ದು ಆಡವಾಳ್ಳು ಮೀಕು ಜೋಹಾರ್ಲು ಸಿನಿಮಾ.. ಅದು ಬಿಟ್ರೆ ರಶ್ಮಿಕಾ ಟಾಲಿವುಡ್ , ಕಾಲಿವುಡ್ , ಮಾಲಿವುಡ್ , ಬಾಲಿವುಡ್ ಎಲ್ಲಾ ಇಂಡಸ್ಟ್ರಿಗಳಲ್ಲಿ ಬ್ಯಾಕ್ ಟು ಬ್ಯಾಕ್ ಸ್ಟಾರ್ ಗಳ ಸಿನಿಮಾಗಳಲ್ಲಿ ಮಿಂಚುತ್ತಿದ್ದಾರೆ.. ಇನ್ನೂ ಹಲವಾರು ಪ್ರಾಜೆಕ್ಟ್ ಗಳು ಅವರ ಬಳಿ ಇದೆ..
ಇತ್ತೀಚೆಗೆ ಅವರ ಅಭಿನಯದ ಸೀತಾ ರಾಮಮ್ ಸಿನಿಮಾ ಸೂಪರ್ ಸಕ್ಸಸ್ ಕಂಡಿದೆ.. ಸಿನಿಮಾ ಥಿಯೇಟರ್ ಗಳಲ್ಲಿ ಭರ್ಜರಿ ಕಲೆಕ್ಷನ್ ಮಾಡಿದ್ದು , ಉತ್ತಮ ರಿವ್ಯೂವ್ ಗಳನ್ನೂ ಪಡೆದಿದೆ..
ಅಂದ್ಹಾಗೆ ಈ ಸಿನಿಮಾವನ್ನ ವೀಕ್ಷಣೆ ಮಾಡಿರುವ ಉಪರಾಷ್ಟ್ರಪತಿಗಳಾದ ವೆಂಕಯ್ಯ ನಾಯ್ಡು ಅವರು ಸಿನಿಮಾವನ್ನ ಅದ್ಭುತ ಎಂದಿದ್ದಾರೆ..
ಸೀತಾರಾಮಂ ಸಿನಿಮಾ ನೋಡಿದೆ. ನಟ-ನಟಿಯರ ಅಭಿನಯ, ತಂತ್ರಜ್ಞರ ಕ್ರಿಯಾಶೀಲ ಕಾರ್ಯ ಜೊತೆಯಾಗಿ ಸುಂದರ ದೃಶ್ಯಕಾವ್ಯ ನಿರ್ಮಾಣವಾಗಿದೆ. ಸಾಧಾರಣ ಪ್ರೇಮಕತೆಗಳ ಮಾದರಿಯಲ್ಲಲ್ಲದೆ, ಪ್ರೇಮಕತೆಗೆ ವೀರ ಸೈನಿಕನ ಭಾವನೆಗಳನ್ನು ಜೋಡಿಸಿ ಅನೇಕ ಭಾವೋದ್ವೇಗಗಳು ಹೊಮ್ಮುವಂತೆ ಮಾಡಿದ ಈ ಸಿನಿಮಾ ಎಲ್ಲರೂ ನೋಡಬೇಕಾದ ಸಿನಿಮಾ” ಎಂದು ಹೊಗಳಿದ್ದಾರೆ
ಆಗಸ್ಟ್ 5ರಂದು ವಿಶ್ವಾದ್ಯಂತ ರಿಲೀಸ್ ಆದ ‘ಸಿತಾರಾಮಂ’ ಸಿನಿಮಾ ಸಾಕಷ್ಟು ವಿವಾದ , ವಿರೋಧಗಳ ನಂತರವೂ ಉತ್ತಮ ರೆಸ್ಪಾನ್ಸ್ ಪಡೆದುಕೊಳ್ತಿದೆ..
ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಕಮಾಲ್ ಮಾಡ್ತಿದೆ… ಸಿನಿಮಾ ಸೂಪರ್ ಹಿಟ್ ಆಗಿದೆ.. ಬಾಕ್ಸ್ ಆಫೀಸ್ ನಲ್ಲಿ ಸಿನಿಮಾ ಅಬ್ಬರಿಸುತ್ತಿದೆ.. ಅರಬ್ ದೇಶಗಳಲ್ಲಿ ಧಾರ್ಮಿಕ ಉದ್ದೇಶಗಳಿಂದ ಬ್ಯಾನ್ ಆದ್ರೂ ಸಹ ಸಿನಿಮಾ ಬೇರೆಲ್ಲಾ ಕಡೆ ಉತ್ತಮ ಪ್ರದರ್ಶನ ಕಾಣ್ತಿದೆ..
ಎರೆಡು ಕಾಲಘಟ್ಟದಲ್ಲಿ ನಡೆಯುವ ಸಿನಿಮಾದಲ್ಲಿ ಭಾರತೀಯ ಸೇನೆ , ಪಾಕಿಸ್ತಾನ ಸೇನೆಯನ್ನ ತೋರಿಸಲಾಗಿದೆ.. ಉಗ್ರರ
ಸಂಚುಗಳು , ಪಾಕ್ ಆಕ್ರಮಿತ ಕಾಶ್ಮೀರದ 1965 ರ ಹಾಗೂ 1985ರ ಕಾಲಘಟ್ಟದ ಸ್ಥಿತಿಗತಿಗಳ ಬಗ್ಗೆ ತೋರಿಸಲಾಗಿದೆ..
ಈ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಪವರ್ ಫುಲ್ ಪಾತ್ರದಲ್ಲಿ ಒಂದು ರೀತಿ ಸೇತುಬಂಧುವಿನ ಪಾತ್ರದಲ್ಲಿ ಕಾಣಿಸಿಕೊಂಡಿದ್ಧಾರೆ..
ಅವರ ಅಫ್ರೀನಾ ಪಾತ್ರಕ್ಕೆ ಅದರದ್ದೇ ಆದ ಗತ್ತಿದೆ.. ಇನ್ನೂ ದುಲ್ಕರ್ ಸಲ್ಮಾನ್ ಅವರ ಅಭಿನಯದ ಬಗ್ಗೆ ಹೇಳೋದೇ ಬೇಡ.. ಮಲಯಾಳಂನ ಸ್ಟಾರ್ ನಟ ದುಲ್ಕರ್ ವಿಭಿನ್ನ ಹಾಗೂ ಒಂದು ತೂಕವುಳ್ಳ ಪ್ರಾಜೆಕ್ಟ್ ಗಳನ್ನೇ ಆಯ್ಕೆ ಮಾಡ್ತಾರೆ.. ಅಂತೆಯೇ ಈ ಸಿನಿಮಾದ ಕಂಟೆಂಟ್ ನಿಜಕ್ಕೂ ಉತ್ತಮವಾಗಿದೆ..ಇನ್ನೂ ಮೃಣಾಲ್ ಠಾಕೂರ್ ಸೀತಾ ಪಾತ್ರಕ್ಕೆ ಅಚ್ಚುಕಟ್ಟಾಗಿ ಜೀವ ತುಂಬಿದ್ದಾರೆ.. ಅವರ ಅಭಿನಯಕ್ಕೆ ಪ್ರೇಕ್ಷಕರು ಫಿದಾ ಆಗಿದ್ದಾರೆ… ಜೊತೆಗೆ ಅವರು ನೃತ್ಯದ ಮೂಲಕವೂ ಅಭಿಮಾನಿಗಳನ್ನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ..,.
ಹನು ರಾಘವಪುಡಿ ಸೀತಾ ರಾಮಂ ಚಿತ್ರವನ್ನು ನಿರ್ದೇಶಿಸಿದ್ದು, ವೈಜಯಂತಿ ಮೂವಿ ನಿರ್ಮಾಣ ಮಾಡಿದ್ದಾರೆ.