Bigg boss Ott : ಎಲಿಮಿನೇಟ್ ಆಗದೇ ನೇರವಾಗಿ ಮನೆಯಿಂದ ಹೊರನಡೆದ ಅರ್ಜುನ್
Bigg boss Ott Kannada ಮೊದಲನೇ ಸೀಸನ್ ಆಗಸ್ಟ್ 1 ರಿಂದ ಶುರುವಾಗಿದ್ದು ನೋಡ ನೋಡ್ತಾ 2 ನೇ ವಾರವೂ ಪೂರೈಸಿದೆ.. ಮೊದಲನೇ ವಾರ ರಾಜಸ್ಥಾನದ ಮಾಡೆಲ್ ಕಿರಣ್ ಮನೆಯಿಂದ ಹೊರ ನಡೆದಿದ್ದರು.. ಇದೀಗ ಎರಡನೇ ವಾರ ಮನೆಗೆ ಗುಡ್ ಬೈ ಹೇಳೋ ಸರದಿ ಯಾರದ್ದು ಎಂಬ ಪ್ರಶ್ನೆಗಳು ಭಾರೀ ಸದ್ದು ಮಾಡಿದ್ದವು.. ಇವುಗಳಿಗೀಗ ತ್ತರ ಸಿಕ್ಕಿದೆ..
ಅಂದ್ಹಾಗೆ 2ನೇ ವಾರ ಮನೆಯಿಂದ ಹೊರ ನಡೆದವರು ಬೇರ್ಯಾರು ಅಲ್ಲ ಮನೆಯಲ್ಲಿ ಹೈಲೇಟ್ ಆಗಿದ್ದ ಅರ್ಜುನ್ ರಮೇಶ್.. ಆದ್ರೆ ಇದು ಎಲ್ಲರಿಗೂ ದೊಡ್ಡ ಶಾಕ್.. ಯಾಕಂದ್ರೆ ಸ್ಪೂರ್ತಿ ಗೌಡ ಅಥವಾ ಅಕ್ಷತಾ ಮನೆಯಿಂದ ಹೊರಬರಲಿದ್ದಾರೆ ಎಂದೇ ಊಹೆ ಮಾಡಲಾಗಿತ್ತು.. ಆದ್ರೆ ಅನಿರೀಕ್ಷಿತ ಹಾಗೂ ಶಾಕಿಂಗ್ ಎಂಬಂತೆ ಅರ್ಜುನ್ ಹೊರಬಂದಿದ್ದು , ಕೆಲ ಕಂಟೆಸ್ಟೆಂಟ್ ಗಳು ಮನೆಯಲ್ಲಿ ಕಣ್ಣೀರಿಟ್ಟಿದ್ದಾರೆ..
ಅರ್ಜುನ್ ಎಲ್ಲರ ಜೊತೆಗೆ ಹೊಂದುಕೊಂಡಿದ್ದರು.. ಚನ್ನಾಗಿದ್ದರು.. ಮೊದಲ ಕ್ಯಾಪ್ಟನ್ ಕೂಡ ಇವರೇ ಆಗಿದ್ದರು.. ಆದ್ರೆ ಕ್ಯಾಪ್ಟನ್ ಶಿಪ್ ನಿಂದಲೇ ಅವರು ಹೊರ ನಡೆಯುವಂತಾಯ್ತು ಎನ್ನಬಹುದು..
ಆಟದಲ್ಲಿ ಕೈಗೆ ಏಟು ಮಾಡಿಕೊಂಡು ನೋವಲ್ಲೇ ಅವರು ದಿನಕಳೆದರು.. ನೋವು ನಿವಾರಣೆ ಆಗದೇ ಇರದ ಕಾರಣಕ್ಕಾಗಿ ಅವರು ಅನಿವಾರ್ಯವಾಗಿ ಮನೆಯಿಂದ ಆಚೆ ಬರಬೇಕಾಗಿದೆ.
ಸತತ ಒಂದು ವಾರದಿಂದ ಕೈಗೆ ನೋವು ಮಾಡಿಕೊಂಡೇ ಆಟದಲ್ಲಿ ಭಾಗಿಯಾಗುತ್ತಿದ್ದ ಅರ್ಜುನ್ ಅವರನ್ನು ಎಲಿಮಿನೇಟ್ ಮಾಡಲಾಗಿಲ್ಲ.. ಬದಲಾಗಿ ನೇರವಾಗಿಯೇ ಮನೆಯಿಂದ ಆಚೆ ಕಳುಹಿಸಲಾಗಿದೆ. ಕೆಲ ಸ್ಪರ್ಧಿಗಳು ಅತ್ತಿದ್ದೂ ಭಾವತಾತ್ಮಕ ವಾತಾವರಣ ನಿರ್ಮಾಣವಾಗಿತ್ತು..