Boycott Liger Trend : ಅಮಿರ್ ಖಾನ್ ಸಿನಿಮಾಗೆ ವಿಜಯ್ ಸಪೋರ್ಟ್ ಮಾಡಿದ್ದೇ ಮುಳುವಾಯ್ತಾ..??
ಬಾಲಿವುಡ್ ನಸೀಬ್ ಖರಾಬ್ ಆಗಿದೆ ನಿಜ.. ಯಾವ ಸಿನಿಮಾ ಬಂದ್ರೂ ಫ್ಲಾಪ್ ಆಗ್ತಿದೆ.. ಬಾಯ್ಕಾಟ್ ಗೆ ಟಾರ್ಗೆಟ್ ಆಗ್ತಿದೆ.. ಸಿನಿಮಾ ಸೋಲ್ತಿದೆ.. ಸೌತ್ ಬಾಲಿವುಡ್ ಮುಂದೆ ಅಬ್ಬರಿಸುತ್ತಿದೆ.. ಮುಂದೆ ಬರುವ ಲ್ಲಾ ಬಾಲಿವುಡ್ ಸಿನಿಮಾಗಳಿಗೂ ಸೋಲಿನ ಭೀತಿ , ಬಾಯ್ಕಾಟ್ ಆತಂಕ ದುರಾಗ್ತಿದೆ..
ಇದೆಲ್ಲದರ ನಡುವೆ ಈಗ ಬಾಲಿವುಡ್ ಸಿನಿಮಾಗಳು ಅದ್ರಲ್ಲೂ ಖಾನ್ ಗಳ ಸಿನಿಮಾಗಳನ್ನ ಬೆಂಬಲಿಸುವ ನಟರ ಸಿನಿಮಾಗಳಿಗೂ ಆತಂಕ ದುರಾಗ್ತಿದೆ.. ಹೌದು.. ವಿಜಯ್ ದೇವರಕೊಂಡ ಪ್ರಸ್ತುತ ಲೈಗರ್ ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ.. ಆಗಸ್ಟ್ 25 ರಂದು ಸಿನಿಮಾ ರೀಲೀಸ್ ಆಗಲಿದೆ..
ಆದ್ರೆ ಇದೀಗ ಪುರಿ ಜಗನ್ನಾಥ್ ನಿರ್ದೇಶನದ ಸಿನಿಮಾಗೂ ಕೂಡ ಬಾಯ್ಕಾಟ್ ಭೀತಿ ಎದುರಾಗಿದೆ.. ಇದಕ್ಕೆ ಕಾರಣ ದೇವರಕೊಂಡ ಅಮಿರ್ ಖಾನ್ ರ ಲಾಲ್ ಸಿಂಗ್ ಚಡ್ಡಾ ಸಿನಿಮಾವನ್ನ ಬೆಂಬಲಿಸಿದ್ದು ಎನ್ನಲಾಗ್ತಿದೆ..
ಈ ಸಿನಿಮಾ ವಿಶ್ವಾದ್ಯಂತ ತೆಲುಗು , ಕನ್ನಡ , ತಮಿಳು , ಹಿಂದಿ , ಮಲಯಾಳಂ ನಲ್ಲಿ ರಿಲೀಸ್ ಆಗಲಿದೆ. ಆದ್ರೆ ಈಗಲಿಂದಲೇ ಬಾಯ್ಕಾಟ್ ಟ್ರೆಂಡ್ ಶುರುವಾಗಿಬಿಟ್ಟಿದೆ. ಅಂದ್ಹಾಗೆ ಲಾಲ್ ಸಿಂಗ್ ಚಡ್ಡಾ ಬೆಂಬಲಿಸಿದ ವಿಜಯ್ ದೇವರಕೊಂಡ ಸಿನಿಮಾ ಬಾಯ್ಕಾಟ್ ಮಾಡಿ ಎಂದು ನೆಟ್ಟಿಗರು ಬಾಯ್ಕಾಟ್ ಗೆ ಕರೆ ಕೊಟ್ಟಿದ್ದಾರೆ.
ಈ ಹಿಂದೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ವಿಜಯ್ ದೇವರಕೊಂಡ, ಸಿನಿಮಾ ಎಂದರೆ ಒಬ್ಬರು ನಟರಿಗೆ ಮಾತ್ರವೇ ಸಂಬಂಧಿಸಿದ್ದಲ್ಲ. ಲಾಲ್ ಸಿಂಗ್ ಚಡ್ಡಾ ಆಮಿರ್ ಖಾನ್ ಒಬ್ಬರಿಗೇ ಸಂಬಂಧಿಸಿದ್ದಲ್ಲ. ಸಿನಿಮಾ ಒಂದು ಸಿನಿಮಾದ ಹಿಂದೆ ಸಾವಿರಾರು ಮಂದಿ ಕೆಲಸ ಮಾಡಿರುತ್ತಾರೆ. ಸಿನಿಮಾ ಒಂದನ್ನು ಬಹಿಷ್ಕರಿಸಿದರೆ ಆ ಎಲ್ಲ ಕುಟುಂಬಗಳಿಗೂ ಸಮಸ್ಯೆ ಆಗುತ್ತದೆ ಎಂದಿದ್ದರು. ಅಲ್ಲದೇ ಸಿನಿಮಾ ಹಾಗೂ ಅಮಿರ್ ಖಾನ್ ಅಭಿನಯವನ್ನ ಶ್ಲಾಘಿಸಿದ್ದರು..
ಇದೇ ಈಗ ಲೈಗರ್ ಸಿನಿಮಾಗೆ ಮುಳುವಾಗುವ ಲಕ್ಷಣ ಕಾಣ್ತಿದೆ..