Naga Chaitanya : ಸತತ ಸೋಲಿನಿಂದ ಖಿನ್ನತೆಗೆ ಒಳಗಾದ್ರಾ ನಾಗಚೈತನ್ಯ..??
10 ವರ್ಷಗಳ ಕಾಲ ಪ್ರೀತಿಸಿ ಮದುವೆಯಾಗಿದ್ದ ಟಾಲಿವುಡ್ ನ ಸ್ಟಾರ್ ಕಪಲ್ ಸಮಂತಾ ನಾಗಚೈತನ್ಯ ಡಿವೋರ್ಸ್ ಪಡೆದಿದ್ದು ತಮ್ಮ ನಾಲ್ಕು ವರ್ಷಗಳ ದಾಂಪತ್ಯಕ್ಕೆ ಇತಿಶ್ರೀ ಹಾಡಿದ್ದಾರೆ..
ಇವರ ಡಿವೋರ್ಸ್ ಸುದ್ದಿಯಿಂದ ಅಭಿಮಾನಿಗಳು ಸಿಕ್ಕಾಪಟ್ಟೆ ಶಾಕ್ ಆಗಿದ್ದರು.. ಇವರಿಬ್ಬರೂ ಸಹ ಈ ವಿಚಾರವಾಗಿ ಮೌನವಾಗಿದ್ರೂ ನೆಟ್ಟಿಗರು ಸೈಲೆಂಟ್ ಇರಲ್ಲ.. ಈವರೆಗೂ ಇಬ್ಬರ ಅಭಿಮಾನಿಗಳೂ ಪರಸ್ಪರರನ್ನ ಟ್ರೋಲ್ ಮಾಡ್ತಾ ಬಂದಿದ್ದಾರೆ..
ಇಬ್ಬರೂ ಸದ್ಯ ಸಿನಿಮಾರಂಗದಲ್ಲಿ ಬ್ಯುಸಿಯಾಗಿದ್ದಾರೆ.. ಈ ಜೋಡಿ ಮತ್ತೆ ಒಂದಾಗಬೇಕೆಂಬ ಆಶಯ ಅಭಿಮಾನಿಗಳದ್ದು..
ಇಬ್ಬರೂ ಸಿನಿಮಾಗಳಲ್ಲಿ ಬ್ಯುಸಿಯಿದ್ದಾರೆ.. ಆದ್ರೆ ಒಂದೆಡೆ ಸಮಂತಾಗೆ ಇನ್ನೂ ಡಿಮ್ಯಾಂಡ್ ಹೆಚ್ಚಾಗ್ತಿದೆ.. ಸಂಭಾವನೆ ಹೆಚ್ಚಾಗಿದೆ… ಸಕ್ಸಸ್ ಮೇಲೆ ಸಕ್ಸಸ್ ಸಿಗ್ತಿದೆ..
ಅದೇ ಮತ್ತೊಂದೆಡೆ ನಾಗಚೈತನ್ಯಗೆ ಸಾಲು ಸಾಲು ಸೋಲಾಗುತ್ತಿದೆ.. ಹೀಗಾಗಿ ಸಾಲು ಸಾಳು ಸೋಲುಗಳಿಂದ ನಾಗಚಯತನ್ಯ ಖಿನ್ನತೆಗೆ ಒಳಗಾಗಿದ್ದಾರೆ ಎಂಬ ಸುದ್ದಿ ಇದೀಗ ಟಾಳಿವುಡ್ ಅಂಗಳದಲ್ಲಿ ಸದ್ದು ಮಾಡ್ತಿದೆ..
ಲಾಲ್ ಸಿಂಗ್ ಚಡ್ಡಾ ಮೂಲಕ ಬಾಲಿವುಡ್ ಗೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದರು ನಾಗಚೈತನ್ಯ.. ಆದ್ರೆ ಲಾಲ್ ಸಿಂಗ್ ಚಡ್ಡಾ ಫ್ಲಾಪ್ ಆಗಿದೆ.. ಜೋಷ್ ಸಿನಿಮಾ ಮೂಲಕ ಸಿನಿಮಾರಂಗಕ್ಕೆ 2009 ರಲ್ಲಿ ಎಂಟ್ರಿಕೊಟ್ಟ ನಾಗಚೈತನ್ಯ ಸಿನಿಮಾ ಡಸ್ಟ್ರಿಯಲ್ಲಿ 13 ವರ್ಷಗಳನ್ನ ಪೂರೈಸಿದ್ದಾರೆ..
ನಾಗಚೈತನ್ಯ ಸಮಂತಾ ಒಟ್ಟಿಗೆ ನಟಿಸಿದ ಸಿನಿಮಾಗಳೆಲ್ಲವೂ ಹಿಟ್ ಆಗಿವೆ.. ಇವರಿಬ್ಬರ ಕಾಂಬಿನೇಷನ್ ನಲ್ಲಿ ಹಲವು ಸಿನಿಮಾ ಬಾಕ್ಸಾಫೀಸ್ ನಲ್ಲಿ ಗೆದ್ದಿವೆ.
ಆದ್ರೆ ಇತ್ತೀಚೆಗೆ ಥ್ಯಾಂಕ್ ಯು ಹಾಗೂ ಲಾಲ್ ಸಿಂಗ್ ಚಡ್ಡಾ ಸೋತ ನಂತರ ಚೈತನ್ಯ ಕುಗ್ಗಿದ್ದಾರೆ ಎನ್ನುವ ವದಂತಿಗಳಿಂದ ಅಭಿಮಾನಿಗಳು ಕೊಂಚ ಬೇಸರಗೊಂಡಿದ್ದಾರೆ..