Namitha : ಅವಳಿ ಗಂಡುಮಕ್ಕಳಿಗೆ ಜನ್ಮ ನೀಡಿದ ನಟಿ ನಮಿತಾ..!!
ಕನ್ನಡ , ತೆಲುಗು , ತಮಿಳು , ಮಲಯಾಳಂ ಹೀಗೆ ಬಹುಭಾಷೆಗಳಲ್ಲಿ ನಟಿಸಿರುವ ನಟಿ ನಮಿತಾ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ… ಅವರಿಗೆ ಅಭಿಮಾನಿಗಳು ಶುಭಾಷಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ..
ಮಕ್ಕಳ ಜೊತೆಗಿನ ಫೋಟೋಗಳನ್ನು ಹಂಚಿಕೊಂಡು ಸಂಭ್ರಮಿಸಿದ್ದಾರೆ. ಈ ಫೋಟೊಗಳು ಸಾಮಾಜಿಕ ಜಾಲತಾಣಲದಲ್ಲಿ ವೈರಲ್ ಆಗಿವೆ.
41 ವರ್ಷದ ನಟಿ ನಮಿತಾ ಪ್ರೆಗ್ನೆನ್ಸಿ ಘೋಷಣೆ ಮಾಡಿದಾಗಿನಿಂದಲೂ ಹಲವು ಬಾರಿ ಬೇಬಿ ಬಂಪ್ ಫೋಟೋ ಶೂಟ್ ಮಾಡಿಸಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು..
ಶ್ರೀಕೃಷ್ಣ ಜನ್ಮಾಷ್ಟಮಿ ದಿನವೇ ನಟಿ ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾರೆ. ನಟಿ ಶುಕ್ರವಾರ ಆಗಸ್ಟ್ 19 ರಂದು ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ಜೊತೆ ಪತಿ, ಪತ್ನಿ ಇಬ್ಬರೂ ಕೂಡ ಮಕ್ಕಳನ್ನೂ ಹಿಡಿದುಕೊಂಡಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ನಮಿತಾ ರಾಜಕೀಯದಲ್ಲೂ ಗುರುತಿಸಿಕೊಂಡಿದ್ದಾರೆ.. ತಮಿಳುನಾಡಿನಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯರಾಗಿದ್ದಾರೆ..
ಕನ್ನಡದಲ್ಲಿ ನೀಲಕಂಠ , ಹೂ ಸಿನಿಮಾಗಳ ಮೂಲಕ ಮಿಂಚಿದ್ದ ನಮಿತಾ ತಮಿಳಿನಲ್ಲಿ ಸಾಕಷ್ಟು ಸಿನಿಮಾಗಳನ್ನ ಮಾಡಿದ್ದಾರೆ..
ನಮಿತಾ ರಾಜಕೀಯದಲ್ಲೂ ಗುರುತಿಸಿಕೊಂಡಿದ್ದಾರೆ.. ತಮಿಳುನಾಡಿನಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯರಾಗಿದ್ದಾರೆ..
ಕನ್ನಡದಲ್ಲಿ ನೀಲಕಂಠ , ಹೂ ಸಿನಿಮಾಗಳ ಮೂಲಕ ಮಿಂಚಿದ್ದ ನಮಿತಾ ತಮಿಳಿನಲ್ಲಿ ಸಾಕಷ್ಟು ಸಿನಿಮಾಗಳನ್ನ ಮಾಡಿದ್ದಾರೆ..