Bollywood : ಬಾಲಿವುಡ್ ನ ಸೋಲಿಸೋದಕ್ಕೆ ಸೌತ್ ಸಿನಿಮಾರಂಗಕ್ಕೆ ಸಾಧ್ಯವಿಲ್ಲ : ಮಾಧವನ್
ಒಂದು ಕಾಲದಲ್ಲಿ ಭಾರತೀಯ ಸಿನಿಮಾರಂಗ ಅಂದ್ರೆ ಬಾಲಿವುಡ್ ಮಾತ್ರವೇ , ಮಿಕ್ಕೆಲ್ಲಾ ಸಿನಿಮಾರಂಗಗಳು ಲೆಕ್ಕಕ್ಕೆ ಇಲ್ಲ ಎಂಬಂತೆ ಮೆರೆದಿದ್ದ ಬಾಲಿವುಡ್ ಸೌತ್ ಸಿನಿಮಾರಂಗವನ್ನ ಕಡೆಗಣಿಸಿತ್ತು.. ಆದ್ರೆ ಇದೇ ಬಾಕಿವುಡ್ ಸೌತ್ ಸಿನಿಮಾಗಳ ರೀಮೇಕ್ ಮಾಡೋದಕ್ಕೆ ಮಾತ್ರ ಮುಜುಗರ ಪಟ್ಟುಕೊಳ್ತಿರಲಿಲ್ಲ..
ಆದ್ರೆ ಇದೇ ಬಾಲಿವುಡ್ ಪಾಲಿಗೆ ಮುಳುವಾಗಿದ್ದು.. ಅದ್ಯಾವಾಗ ಬಾಲಿವುಡ್ ಬರೀ ರೀಮೇಕ್ ಸಿನಿಮಾಳನ್ನೇ ಮಾಡೋಕೆ ಶುರು ಮಾಡಿತೋ ಆಗಿನಿಂದ ಜನರು ಒರಿಜಿನಾಲಿಟಿ ಕಡೆಗೆ ವಾಲಲು ಆರಂಭಿಸಿದ್ರು.. ಅಂದ್ರೆ ಸೌತ್ ಸಿನಿಮಾಗಳು ಹಿಂದಿಗೆ ಡಬ್ಬಿಂಗ್ ಆಗಕಲು ಶುರುವಾಗಿ ಜನರು ಆ ಕಡೆ ಹೆಚ್ಚು ವಾಲಿದ್ರು…
ಕಡೆಗೆ ವಾಲಲು ಆರಂಭಿಸಿದ್ರು.. ಅಂದ್ರೆ ಸೌತ್ ಸಿನಿಮಾಗಳು ಹಿಂದಿಗೆ ಡಬ್ಬಿಂಗ್ ಆಗಕಲು ಶುರುವಾಗಿ ಜನರು ಆ ಕಡೆ ಹೆಚ್ಚು ವಾಲಿದ್ರು…
ಈ ಹೊತ್ತಲ್ಲೇ ಪ್ಯಾನ್ ಇಂಡಿಯನ್ ಕಿಚ್ಚು ಹೊತ್ತಿಸಿದ್ದು ರಾಜಮೌಳಿ ಅವರ ಬಾಹುಬಲಿ , ಬಾಹುಬಲಿ 2.. ಈ ಸಿನಿಮಾಗಳು ಸೆನ್ಷೇಷನ್ ಕ್ರಿಯೇಟ್ ಮಾಡಿ ಬಾಲಿವುಡ್ ನ ಬೆಚ್ಚಿಸಿತ್ತು.. ಈ ಸಿನಿಮಾದ ಕಲೆಕ್ಷನ್ ಇದುವರೆಗೂ ಯಾರಿಂದಲೂ ಬೀಟ್ ಮಾಡಲಾಗಿಲ್ಲ..
ಇಂಡಿಯನ್ ಸಿನಿಮಾ ಇಂಡಸ್ಟ್ರಿಯಲ್ಲಿ ಹಿಸ್ಟರಿ ಕ್ರಿಯೇಟ್ ಮಾಡಿದ್ದು ಬಾಹುಬಲಿ.. ಆನಂತರ ದು ರೇಂಜ್ ಗೆ ಅಬ್ಬರಿಸಿ ಹಿಂದಿ ಬೆಲ್ಟ್ ನಲ್ಲಿ ಬಾಲಿವುಡ್ ಹೀರೋ ಸಿನಿಮಾಗಳನ್ನ ಡಮ್ಮಿ ಮಾಡಿದ್ದು ಪುಷ್ಪ.. ನಂತರ ಅಬ್ಬರಿಸಿದ್ದ RRR ಆ ನಂತರ ಇಡೀ ದೇಶಾದ್ಯಂತ ಸಂಚಲ ಸೃಷ್ಟಿ ಮಾಡಿದ್ದ ರಾಕಿ ಭಾಯ್.. ಕೆಜಿಎಫ್ 2 ಹವಾ ಯಾವ ಲೆವೆಲ್ ನಲ್ಲಿತ್ತು ಗೊತ್ತೇ ಇದೆ.. ಆ ನಂತರ ಚಾರ್ಲಿ , ವಿಕ್ರಮ್ ಈಗ ವಿಕ್ರಾಂತ್ ರೋಣ ಅಬ್ಬರಿಸುತ್ತಿದೆ..
ಮುಂದೆ ಲೈಗರ್ , ಪುಷ್ಪ 2 ಅಬ್ಬರ , ಸಲಾರ್ , ಆದಿಪುರುಷ್ , ಇಂಡಿಯನ್ 2 , ಪೊನ್ನಿಯನ್ ಸೆಲ್ವನ್ ಭಾಗ 1 , ರಾಜಮೌಳಿಯವರ ಹೊಸ ಸಿನಿಮಾ , ವಿಕ್ರಮ್ ಕೋಬ್ರಾ , ಹೀಗೆ ಸಾಲು ಸಾಲು ಸೌತ್ ಸಿನಿಮಾಗಳ ಆರ್ಭಟ ಜೋರಾಗಿರಲಿದೆ..
ಅಂದ್ಹಾಗೆ ಇತ್ತೀಚೆಗೆ ಗಾಳಿಪಟ 2 , ಸೀತಾ ರಾಮಮ್ ಸಿನಿಮಾಗಳು ಸಕ್ಸಸ್ ಫುಲ್ ಆಗಿ ಪ್ರದರ್ಶನ ಕಾಣ್ತಿವೆ.. ಆದ್ರೆ ಬಾಲಿವುಡ್ ನ ಮಿಸ್ಟರ್ ಪರ್ಫೆಕ್ಟ್ ಅಮಿರ್ ಖಾನ್ ಸಿನಿಮಾ ಲಾಲ್ ಸಿಂಗ್ ಚಡ್ಡಾ , ಕಿಲಾಡಿ ಅಕ್ಷಯ್ ಕುಮಾರ್ ರಕ್ಷಾಬಂಧನ ಸಿನಿಮಾ ಮಕಾಡೆ ಮಲಗಿದ್ದು ಫ್ಲಾಪ್ ಸಾಬೀತಾಗಿವೆ..
ಅಂದ್ಹಾಗೆ ಸಿನಿಮಾಗಳ ಸೋಲಿಗೆ ಪ್ರಮುಖ ಕಾರಣವೂ ಬಾಯ್ಕಟ್ ಟ್ರೆಂಡ್.. ಬಾಲಿವುಡ್ ನ ಯಾವೊಂದು ಸಿನಿಮಾ ಬರಲಿ ಬಾಯ್ಕಾಟ್ ಟ್ರೆಂಡ್ ಆಗ್ತಿದೆ.. ಇದರ ವಿರುದ್ಧ ಅನೇಕ ಬಾಲಿವುಡ್ ನಟ ನಟಿಯರು ಸಿಟ್ಟಾಗಿದ್ದಾರೆ.. ಇದೀಗ ಸೌತ್ ಸ್ಟಾರ್ ಆಗಿ ಬಾಲಿವುಡ್ ನಲ್ಲೂ ಮಿಂಚಿರುವ ನಟ ಮಾಧವನ್ ಶಾಕಿಂಗ್ ಸ್ಟೇಟ್ ಮೆಂಟ್ ನೀಡಿದ್ದಾರೆ…
ದೋಖ ಸಿನಿಮಾದ ಟ್ರೈಲರ್ ರಿಲೀಸ್ಗೆ ಆಗಮಿಸಿ ಬಾಲಿವುಡ್ ಸಿನಿಮಾಗಳ ಸೋಲಿನ ಬಗ್ಗೆ ಮಾತನಾಡಿರುವ ಮಾಧವನ್ , ದಕ್ಷಿಣ ಭಾರತದ ಸಿನಿಮಾಗಳು ಬಾಲಿವುಡ್ ಸಿನಿಮಾಗಳನ್ನು ಮೀರಿಸುತ್ತವೆ ಎನ್ನುವ ಗ್ರಹಿಕೆ ತಪ್ಪು. ದಕ್ಷಿಣದಿಂದ ಬಂದ ಬಾಹುಬಲಿ 1, ಬಾಹುಬಲಿ 2, RRR, ಪುಷ್ಪ , ಕೆಜಿಎಫ್ , ಕೆಜಿಎಫ್ 2 ಮಾತ್ರ ಹಿಂದಿ ಚಲನಚಿತ್ರ ನಟರ ಚಲನಚಿತ್ರಗಳಿಗಿಂತ ಉತ್ತಮವಾಗಿದ್ದು, ಸೂಪರ್ ಹಿಟ್ ಆಗಿವೆ. ಕೇವಲ ಐದಾರು ಚಿತ್ರಗಳು ಹಿಟ್ ಆಗಿದ್ದಕ್ಕೆ ಸೌತ್ ಸಿನಿರಂಗ ಬಾಲಿವುಡ್ ಗೆ ಮಾದರಿ ಅಂತ ಹೇಳಲು ಸಾಧ್ಯವಿಲ್ಲ. ಒಳ್ಳೆಯ ಚಿತ್ರಗಳು ಬಂದರೆ ಬಾಲಿವುಡ್ ಸಿನಿಮಾಗಳು ಹಿಟ್ ಆಗುತ್ತವೆ ಎಂದಿದ್ದಾರೆ..
ಲಾಲ್ ಸಿಂಗ್ ಚಡ್ಡ ಸೋಲಿನ ಬಗ್ಗೆ ಮಾತನಾಡಿರುವ ನಟ ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ವರ್ಕೌಟ್ ಆಗಿಲ್ಲ ಎಂದರೆ, ನಾವೆಲ್ಲರೂ ಹಿಟ್ ಚಿತ್ರಗಳನ್ನು ಮಾತ್ರ ಮಾಡುತ್ತಿದ್ವಿ, ನಾವು ಫ್ಲಾಪ್ ಚಿತ್ರ ಮಾಡುತ್ತಿದ್ದೇವೆ ಎಂದು ಯಾರಿಗೂ ಗೊತ್ತಿರಲ್ಲ. ಎಲ್ಲಾ ಸಿನಿಮಾಗಳನ್ನು ಒಳ್ಳೆಯ ಸಿನಿಮಾ ಎಂದುಕೊಂಡೇ ಕೆಲಸ ಮಾಡುತ್ತೇವೆ.
ಪ್ರೇಕ್ಷಕರಿಗೆ ಉತ್ತಮ ಕಂಟೆಂಟ್ ಇರುವ ಸಿನಿಮಾ ನೀಡಿದರೆ, ಭಾಷೆಯ ಹೊರತಾಗಿಯೂ ಚಿತ್ರಮಂದಿರಗಳಿಗೆ ಹೋಗಿ ಸಿನಿಮಾ ವೀಕ್ಷಿಸುತ್ತಾರೆ. ಕೊರೊನಾ ಬಳಿಕ ಪ್ರೇಕ್ಷಕರ ಆಧ್ಯತೆ ಬದಲಾಗಿದೆ. ಹಿಂದಿ ಸಿನಿಮಾಗಳ ಸೋಲಿಗೆ ಇದೇ ಕಾರಣ ಎಂದಿದ್ದಾರೆ.. ಆದ್ರೆ ಮಾಧವನ್ ಹೇಳಿಕೆಗೆ ಪರ ವಿರೋಧ ವ್ಯಕ್ತವಾಗ್ತಿದೆ..