The Kashmir Files : ಆಸ್ಕರ್ ಗೆ ದೊಬಾ ಸಿನಿಮಾವನ್ನ ಕಳುಹಿಸಿ – ಅನುರಾಗ್ ಕಶ್ಯಪ್ ಗೆ ಅಗ್ನಿಹೋತ್ರಿ ಟಾಂಗ್
ದೇಶಾದ್ಯಂತ ಸಂಚಲನ ಸೃಷ್ಟಿ ಮಾಡಿದ್ದ The Kashmir Files ಸಿನಿಮಾ ದೇಶದ ಜನರನ್ನ ಒಟ್ಟುಗೂಡಿಸಿತ್ತು..
ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿತ್ತು.. ದಶಕಗಳ ಹಿಂದೆ ಜಿಹಾದಿಗಳಿಂದ ಕ್ರೂರವಾಗಿ ಹಿಂಸಾರಾಕ್ಕೆ ಒಳಗಾಗಿದ್ದ , ಕಾಶ್ಮೀರ ಪಂಡಿತರು ಅನುಭವಿಸಿದಂತಹ ಕಷ್ಟಗಳನ್ನ , ಜಿಹಾದಿಗಳ ಕ್ರೂರತ್ವವನ್ನ , ಹೇಗೆ ಕಾಶ್ಮೀರಿ ಪಂಡಿತರು ತಮ್ಮದೇ ನೆಲವನ್ನ ಬಿಟ್ಟು ವಲಸೆ ಬಂದಿದ್ದರೆಂಬುದನ್ನ ಸಿನಿಮಾದಲ್ಲಿ ತೋರಿಸಲಾಗಿತ್ತು..
ಈ ಸಿನಿಮಾವನ್ನ ಜನರು ಮುಗಿಬಿದ್ದು ವೀಕ್ಷಣೆ ಮಾಡಿದ್ದರು.. ಈ ಸಿನಿಮಾಗೆ ಅನೇಕ ರಾಜ್ಯಗಳಲ್ಲಿ ತೆರಿಗೆ ವಿನಾಯ್ತಿಯನ್ನೂ ನೀಡಲಾಗಿತ್ತು.. ನಂತರ ಸಿನಿಮಾ ಒಟಿಟಿಯಲ್ಲೂ ಗೆದ್ದಿತ್ತು.. ಮಿಲಿಯನ್ ಗಟ್ಟಲೆ ವೀವ್ಸ್ ಗಳನ್ನ ಗಳಿಸಿದೆ.. ಈ ಸಿನಿಮಾ ಸುಮಾರು 20 ರಿಂದ 30 ಕೋಟಿ ಬಜೆಟ್ ನಲ್ಲಿ ತಯಾರಾಗಿತ್ತು.. ಆದ್ರೆ ಬಾಕ್ಸ್ ಆಫೀಸ್ ನಲ್ಲಿ 252 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು..
ಅಂದ್ಹಾಗೆ ಬಾಲಿವುಡ್ ನಲ್ಲಿ ಇತ್ತೀಚಿನ ವರ್ಷಗಳಲ್ಲಿ ಇಷ್ಟು ದೊಡ್ಡ ಮಟ್ಟದ ಲಾಭ ಯಾವೊಂದು ಸಿನಿಮಾ ಕೂಡ ಮಾಡಿಲ್ಲ..
ಈ ಸಿನಿಮಾಗೆ ಎಷ್ಟೇ ಮೆಚ್ಚುಗೆ ವ್ಯಕ್ತವಾಯ್ತೋ , ಅಷ್ಟೇ ವಿರೋಧವೂ ವ್ಯಕ್ತವಾಯ್ತು… ಇತ್ತೀಚೆಗೆ ಈ ಸಿನಿಮಾ ವಿಎರುದ್ಧ ಕ್ರೋಶ ಹೊರಹಾಕಿದ್ದ ನಿರ್ದೇಶಕ ಅನುರಾಗ್ ಕಶ್ಯಪ್ ಈ ಸಿನಿಮಾದ ಬದಲಾಗಿ RRR ಸಿನಿಮಾವನ್ನ ಆಸ್ಕರ್ ಗೆ ಕಳುಹಿಸಬೇಕೆಂದಿದ್ದರು..
ಇದಕ್ಕೆ ಈಗ ತಿರುಗೇಟು ನೀಡಿರೋ ದಿ ಕಾಶ್ಮೀರ್ ಫೈಲ್ಸ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರು ಇತ್ತೀಚೆಗೆ ರಿಲೀಸ್ ಆಗಿ ಫ್ಲಾಪ್ ಲಿಸ್ಟ್ ಸೇರಿರುವ ಅನೂಪ್ ಹಾಗೂ ತಾಪ್ಸಿ ನಟನೆಯ ದೊಬಾರಾ ಸಿನಿಮಾವನ್ನ ಆಸ್ಕರ್ ಗೆ ಕಳುಹಿಸುವಂತೆ ವ್ಯಂಗ್ಯವಾಡಿದ್ದಾರೆ.
ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಆಸ್ಕರ್ ಗೆ ಹೋಗುವ ಅರ್ಹತೆ ಇಲ್ಲ ಎಂದು ಹೇಳಿರುವ ಅನುರಾಗ್ ಕಶ್ಯಪ್ ನಿರ್ದೇಶನದ ದೋಬಾರಾ ಸಿನಿಮಾವನ್ನೇ ಕಳುಹಿಸಿ ಎಂದು ಟಾಂಗ್ ಕೊಟ್ಟಿದ್ದಾರೆ.
ಅಂದ್ಹಾಗೆ ಆಗಸ್ಟ್ 19 ಕ್ಕೆ ರಿಲೀಸ್ ಆದ ಅನುರಾಗ್ ಕಶ್ಯಪ್ ನಿರ್ದೇಶನದ, ತಾಪ್ಸಿ ಪನ್ನು ನಟನೆಯ ದೋಬಾರಾ ಸಿನಿಮಾ ಬಿಡುಗಡೆ ಆಗಿದ್ದು, ಬಾಕ್ಸ್ ಆಫೀಸಿನಲ್ಲಿ ಮಕಾಡೆ ಮಲಗಿದೆ. ಥಿಯೇಟರ್ ಖಾಲಿ ಖಾಲಿ ಹೊಡೆಯುತ್ತಿವೆ. ಹಾಗಾಗಿಯೇ ವಿವೇಕ್ ಅಗ್ನಿಹೋತ್ರಿ ಈ ರೀತಿ ವ್ಯಂಗ್ಯಾತ್ಮಕ ಹೇಳಿಕೆ ನೀಡಿದ್ದಾರೆ..