Trisha Krishnan : ತ್ರಿಶಾ ಕೃಷ್ಣನ್ ರಾಜಕೀಯಕ್ಕೆ ಎಂಟ್ರಿ – ಕಾಂಗ್ರೆಸ್ ‘ಕೈ’ ಹಿಡಿಯುತ್ತಾರಾ ನಟಿ..??
ಕನ್ನಡದ ಪವರ್ ಸೇರಿದಂತೆ , ತೆಲುಗು , ತಮಿಳು , ಹಿಂದಿ ಹೀಗೆ ಬಹುಭಾಷೆಗಳಲ್ಲಿ ಸ್ಟಾರ್ ನಟರ ಜೊತೆಗೆ ತೆರೆ ಹಂಚಿಕೊಂಡು ಸೈ ಎನಿಸಿಕೊಂಡಿರುವ ಸೌತ್ ಇಂಡಿಯಾದ ಸ್ಟಾರ್ ನಟಿ ತ್ರಿಶಾ ಕೃಷ್ಣನ್ ಇದೀಗ ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ..
ರಾಜಕೀಯದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯುತ್ತಿದ್ದಾರೆಂಬ ಸುದ್ದಿ ಭಾರೀ ಸೌಂಡ್ ಮಾಡ್ತಿದೆ.. ಅದ್ರಲ್ಲೂ ತ್ರಿಶಾ ಕಾಂಗ್ರೆಸ್ ಸೇರಲಿದ್ದಾರೆ ಎನ್ನುವ ಚರ್ಚೆ ಜೋರಿದೆ.. ಅಂದ್ಹಾಗೆ ಸಿನಿಮಾ ರಂಗಕ್ಕೂ ರಾಜಕೀಯಕ್ಕೂ ಅದೇನೋ ನಂಟಿದೆ.. ಹಲವು ತಾರೆಯರು ರಾಜಕೀಯಕ್ಕೆ ಧುಮಿಕಿ ಸೋತೋರೂ ಇದ್ದಾರೆ… ಗೆದ್ದವರು ಇದ್ದಾರೆ..
ಅಂದ್ಹಾಗೆ ತಮಿಳು ನಾಡಿನಲ್ಲಿ ಅತೀ ಹೆಚ್ಚು ಬಾರಿ ಮುಖ್ಯಮಂತ್ರಿಗಳು ಆಗಿದ್ದು ಸಿನಿಮಾ ರಂಗದವರೇ.. ಈಗಾಗಲೇ ಅವರು ಕಾಂಗ್ರೆಸ್ ಪಕ್ಷವನ್ನು ಸಂಪರ್ಕಿಸಿದ್ದು, ಮುಂದಿನ ಚುನಾವಣೆಯಲ್ಲಿ ಇದೇ ಪಕ್ಷದಿಂದಲೇ ಸ್ಪರ್ಧಿಸುತ್ತಾರೆ ಎಂದು ಹೇಳಲಾಗುತ್ತಿದೆ.