ಬಾಲಿವುಡ್ ನಲ್ಲಿ ಹೊಸದಾಗಿ ಏನೇ ನ್ಯೂಸ್ ಆದ್ರೂ ಅಲ್ಲಿ ನಟಿ ಕಂಗನಾ ರಣಾವತ್ ಅಭಿಪ್ರಾಯ ಇದ್ದೇ ಇರುತ್ತೆ. ಕಡ್ಡಿ ತುಂಡು ಮಾಡಿದಂತೆ ಮಾತನಾಡುವ ಶೈಲಿಯಿಂದ ಮೆಚ್ಚುಗೆ, ಟೀಕೆ ಎರಡಕ್ಕೂ ಒಳಗಾಗಿದ್ದಾರೆ… ಅಂದ್ಹಾಗೆ ವಿವಾದಕ್ಕೂ ಕಂಗನಾಗೂ ಅದೇನೋ ಅವಿನಾಭಾವ ಸಂಬಂಧವಿದೆ..
ಇದೀಗ ಕಂಗಾನಾ ಫಿಲಂಫೇರ್ ಪ್ರಶಸ್ತಿಗಳ ವಿರುದ್ಧ ಮುಗಿಬಿದ್ದಿದ್ದಾರೆ. ಇದೀಗ ಫಿಲಂಫೇರ್ ವಿರುದ್ಧ ಕೇಸ್ ಹಾಕಲು ನಿರ್ಧರಿಸಿದ್ದಾರೆ.
ನಟಿ ಕಂಗಾನ ರಾಣಾವತ್ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ಸ್ಟೋರಿ ಪ್ರಕಾರ ಫಿಲ್ಮ್ಫೇರ್ ತನ್ನ ಒಂದು ವಿಭಾಗದ ಪ್ರಶಸ್ತಿಗೆ ಕಂಗನಾ ಅವರನ್ನು ನಾಮನಿರ್ದೇಶನ ಮಾಡಿದೆ. ಕಂಗನಾ ನಾಮನಿರ್ದೇಶನದಿಂದ ಅಸಮಾಧಾನಗೊಂಡಿದ್ದಾರೆ.
67ನೇ ಫಿಲ್ಮ್ಫೇರ್ಗಾಗಿ ನಾಮನಿರ್ದೇಶನಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಇದರಲ್ಲಿ ರಣವೀರ್ ಸಿಂಗ್ 83 ಚಿತ್ರದಲ್ಲಿ ಅತ್ಯುತ್ತಮ ನಟನಾಗಿ ನಾಮನಿರ್ದೇಶನಗೊಂಡಿದ್ದಾರೆ ಮತ್ತು ಅತ್ಯುತ್ತಮ ನಟಿ ವಿಭಾಗದಲ್ಲಿ ಕಂಗನಾ ರನೌತ್ ತಲೈವಿ ಚಿತ್ರಕ್ಕಾಗಿ ನಾಮನಿರ್ದೇಶನಗೊಂಡಿದ್ದಾರೆ.
ಫಿಲ್ಮ್ಫೇರ್ನವರು ನನ್ನನ್ನು ನಾಮಿನೇಟ್ ಮಾಡುತ್ತಿರುವುದು ನನಗೆ ಆಶ್ಚರ್ಯ ತಂದಿದೆ. ಆದರೆ ನಾನು ಯಾವುದೇ ಭ್ರಷ್ಟ ಮತ್ತು ಅನೈತಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗಿಯಾಗಲು ಬಯಸುವುದಿಲ್ಲ. ಇದು ನನ್ನ ಘನತೆಗೆ ವಿರುದ್ಧವಾಗಿದೆ, ಆದ್ದರಿಂದ ನಾನು ಫಿಲ್ಮ್ಫೇರ್ ಮೊಕದ್ದಮೆ ಹೂಡಲು ನಿರ್ಧರಿಸಿದ್ದೇನೆ ಎಂದಿದ್ದಾರೆ.
ನಾನು 2014 ರಲ್ಲಿಯೇ ಫಿಲ್ಮ್ಫೇರ್ ನ್ನ ಬ್ಯಾನ್ ಮಾಡಿದ್ದೇನೆ. ಇದು ಭ್ರಷ್ಟ ಮತ್ತು ಅನೈತಿಕ ಪ್ರಶಸ್ತಿ, ಹಾಗಾಗಿ ನಾನು ಅದರ ಭಾಗವಾಗುವುದಿಲ್ಲ. ಫಿಲ್ಮ್ಫೇರ್ನಿಂದ ನನಗೆ ಸಾಕಷ್ಟು ಕರೆಗಳು ಬರುತ್ತಿವೆ ಎಂದು ನಟಿ ಬರೆದಿದ್ದಾರೆ. ಏಕೆಂದರೆ ತಲೈವಿ ಚಿತ್ರಕ್ಕಾಗಿ ಪ್ರಶಸ್ತಿ ಕೊಡಬೇಕೆಂದು ಫಿಲಂಫೇರ್ ಮಂದಿ ಬಯಸುತ್ತಾರೆ ಎಂದು ಬರೆದುಕೊಂಡಿದ್ದಾರೆ.