Ranveer Singh : ನಗ್ನ ಫೋಟೋಶೂಟ್ ಪ್ರಕರಣ – ವಿಚಾರಣೆಗೆ ಹಾಜರಾಗಲು 2 ವಾರಗಳ ಕಾಲಾವಕಾಶ ಕೋರಿದ ನಟ
ಇತ್ತೀಚೆಗೆ ಬಾಲಿವುಡ್ ನ ಸ್ಟಾರ್ ನಟ ರಣವೀರ್ ಪೇಪರ್ ಮ್ಯಾಗಜೀನ್ ಗಾಗಿ ನಗ್ನವಾಗಿ ಫೋಟೋ ಶೂಟ್ಗಾಗಿ ಬೆತ್ತಲೆಯಾಗಿ ಪೋಸ್ ನೀಡಿದ್ದರು.. ಅವರ ಫೋಟೋ ಸೆನ್ಷೇಷನ್ ಸೃಷ್ಟಿಸಿತ್ತು.. ಅನೇಕರು ವಿರೋಧಿಸಿದ್ರೆ , ಅನೇಕರು ಬೆಂಬಲಿಸಿದ್ರು ಸಹ..
ಆದ್ರೆ ಹಲವರು ರಣವೀರ್ ನಗ್ನಾವತಾರ ಕಂಡು ಗರಂ ಆಗಿದ್ದರು.. ವಿರೋಧಿಸಿ ಆಕ್ರೋಶ ಹೊರಹಾಕಿದ್ದರು.. ದೂರು ಕೂಡ ದಾಖಲಿಸಿದ್ದರು..
ಇದೀಗ ನಗ್ನ ಫೋಟೋಶೂಟ್ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗಲು ನಟ ರಣವೀರ್ ಸಿಂಗ್ ಮುಂಬೈ ಪೊಲೀಸರಿಗೆ 2 ವಾರಗಳ ಕಾಲಾವಕಾಶ ಕೋರಿದ್ದಾರೆ. ಈ ಪ್ರಕರಣದಲ್ಲಿ ಮುಂಬೈ ಪೊಲೀಸರು ಆಗಸ್ಟ್ 22 ರಂದು ರಣ್ವವೀರ್ ಅವರನ್ನ ವಿಚಾರಣೆಗೆ ಕರೆದಿದ್ದರು. ಆದರೆ, ಇದುವರೆಗೂ ಪೊಲೀಸರ ಕಡೆಯಿಂದ ಯಾವುದೇ ಹೇಳಿಕೆ ಬಂದಿಲ್ಲ.
ಜುಲೈ 22 ರಂದು ಪೇಪರ್ ಮ್ಯಾಗಜೀನ್ಗಾಗಿ ರಣವೀರ್ ನಗ್ನ ಫೋಟೋಶೂಟ್ ಮಾಡಿಸಿದ್ದರು. ಈ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ ಮುಂಬೈನ ಎನ್ಜಿಒವೊಂದು ರಣವೀರ್ ವಿರುದ್ಧ ಚೆಂಬೂರ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದೆ.
ರಣವೀರ್ ತನ್ನ ನಗ್ನ ಫೋಟೋಗಳಿಂದ ಮಹಿಳೆಯರ ಭಾವನೆಗಳಿಗೆ ಧಕ್ಕೆ ಮತ್ತು ಅವಮಾನ ಮಾಡಿದ್ದಾರೆ ಎಂದು ಎನ್ಜಿಒ ಹೇಳಿತ್ತು. ಹಾಗಾಗಿ ಅವರ ಫೋಟೋವನ್ನು ಟ್ವಿಟರ್ ಮತ್ತು ಇನ್ಸ್ಟಾಗ್ರಾಮ್ನಿಂದ ತೆಗೆದುಹಾಕಬೇಕು. ಈತನನ್ನು ಬಂಧಿಸಬೇಕು ಎಂಬ ಒತ್ತಾಯವೂ ಕೇಳಿಬಂದಿತ್ತು. ರಣವೀರ್ ವಿರುದ್ಧ ಐಪಿಸಿ ಸೆಕ್ಷನ್ 509, 292, 293, ಐಟಿ ಕಾಯ್ದೆಯ ಸೆಕ್ಷನ್ 67 ಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಐಟಿ ಕಾಯ್ದೆಯಲ್ಲಿ ರಣವೀರ್ಗೆ 5 ವರ್ಷ ಶಿಕ್ಷೆ
ದೂರು ದಾಖಲಾದ ನಂತರ ಮುಂಬೈ ಪೊಲೀಸರು 48 ಗಂಟೆಗಳ ಕಾಲಾವಕಾಶ ಕೋರಿದ್ದರು. ಇದಾದ ಬಳಿಕ ರಣವೀರ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಐಪಿಸಿ ಸೆಕ್ಷನ್ 292 ರ ಅಡಿಯಲ್ಲಿ 5 ವರ್ಷ ಮತ್ತು ಸೆಕ್ಷನ್ 293 ರ ಅಡಿಯಲ್ಲಿ 3 ವರ್ಷ ಜೈಲು ಶಿಕ್ಷೆಗೆ ಅವಕಾಶವಿದೆ. ಅದೇ ಸಮಯದಲ್ಲಿ, ಐಟಿ ಕಾಯ್ದೆ 67A ಅಡಿಯಲ್ಲಿ ರಣವೀರ್ಗೆ 5 ವರ್ಷಗಳ ಶಿಕ್ಷೆಯನ್ನು ಸಹ ವಿಧಿಸಬಹುದು.
ನನಗೆ ಬೆತ್ತಲೆಯಾಗುವುದು ಕಷ್ಟವಲ್ಲ..
ಫೋಟೋ ಶೂಟ್ ನಂತರ ಸಂದರ್ಶನವೊಂದರಲ್ಲಿ ಮಾತನಾಡಿದ ರಣವೀರ್ ‘ನಾನು ದೈಹಿಕವಾಗಿ ಬೆತ್ತಲೆಯಾಗುವುದು ತುಂಬಾ ಸುಲಭ. ನನ್ನ ಕೆಲವು ಪ್ರದರ್ಶನಗಳಲ್ಲಿ ನಾನು ಬೆತ್ತಲೆಯಾಗಿದ್ದೇನೆ. ನೀವು ಅದರಲ್ಲಿ ನನ್ನ ಆತ್ಮವನ್ನು ನೋಡಬಹುದು. ಸಾವಿರಾರು ಜನರ ಸಮ್ಮುಖದಲ್ಲಿ ನಾನು ನನ್ನ ಎಲ್ಲಾ ಬಟ್ಟೆಗಳನ್ನು ತೆಗೆಯಬಲ್ಲೆ. ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ ಜನರೆದುರು ತೆಗೆಯುವುದು ಕಷ್ಟ ಎಂದು ಹೇಳಿದ್ದಾರೆ.