ಸೋಶಿಯಲ್ ಮೀಡಿಯಾದಲ್ಲಿ ಹಾಟ್ ಫಟೋಗಳನ್ನ ಅಪ್ ಲೋಡ್ ಮಾಡ್ತಾ ಬೋಲ್ಡ್ ಆಗಿ ಕಾಣಿಸಿಕೊಳ್ತಾ , ವಿಚಿತ್ರ ವಿಚಿತ್ರ ಬಟ್ಟೆಗಳಿಂದಲೇ ಫೇಮಸ್ ಆಗಿರುವ ಮಾಜಿ ಹಿಂದಿ ಬಿಗ್ ಬಾಸ್ ಸ್ಪರ್ಧಿ ಉರ್ಫಿ ಜಾವೇದ್ ಗೆ ಸುಮಾರು 3 ಮಿಲಿಯನ್ ಫಾಲೋವರ್ಸ್ ಇದ್ದಾರೆ.. ಅಂತೆಯೇ ಅವರ ದ್ವೇಷಿಗಳೂ ಇದ್ದಾರೆ..
ಇತ್ತೀಚೆಗೆ ಉರ್ಫಿ ಸೋಷಿಯಲ್ ಮೀಡಿಯಾದಲ್ಲಿ ಒಬ್ಬಾತನ ಫೋಟೋ ಅಪ್ ಲೋಡ್ ಮಾಡಿ ತಮಗೆ ಬ್ಲಾಕ್ ಮೇಲ್ ಮಾಡುತ್ತಿರೋದಾಗಿ ಹೇಳಿಕೊಂಡಿದ್ದರು.. ಇದೀಗ ಮಧ್ಯರಾತ್ರಿಯಲ್ಲಿ ಉರ್ಫಿಗೆ ಬ್ಲಾಕ್ ಮೇಲಿಂಗ್ ವಿಡಿಯೋ ಕಾಲ್ ಮಾಡಿ ಹೆದರಿಸುತ್ತಿರುವ ಸ್ಕ್ರೀನ್ ಶಾಟ್ ಗಳನ್ನ ಹಂಚಿಕೊಂಡಿದ್ದಾರೆ ಉರ್ಫಿ ಜಾವೇದ್.
ಈ ಹಿಂದೆ ಓಬೇದ್ ಅಫ್ರಿದಿ ಎಂಬಾತ ಮಾಡುತ್ತಿರುವ ಬ್ಲ್ಯಾಕ್ ಮೇಲಿಂಗ್ ಅನ್ನು ಬಹಿರಂಗಪಡಿಸಿದ್ದರು.. ಆದಾಗ್ಯೂ, ಉರ್ಫಿ ಅವರ ಪೋಸ್ಟ್ ನಂತರ, ಪೊಲೀಸರು ಈ ವಿಷಯದಲ್ಲಿ ತಕ್ಷಣ ಕ್ರಮ ಕೈಗೊಂಡರು ಮತ್ತು ಆರೋಪಿಗಳನ್ನು ಬಂಧಿಸಿದರು. ಆದರೆ ಇದಾದ ನಂತರ ಆ ಪೋಸ್ಟ್ ಗಾಗಿ ತನಗೆ ಬೆದರಿಕೆ ಹಾಕಲಾಗುತ್ತಿದೆ ಎಂದು ನಟಿ ಹೇಳಿದ್ದಾರೆ. ಈ ನಡುವೆ ಇದೀಗ ಉರ್ಫಿ ಮತ್ತೊಮ್ಮೆ ಆಘಾತಕಾರಿ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ.