Yash : ರಾಕಿ ಭಾಯ್ ಗೆ ನವಾಜ್ ಜೊತೆಗೆ ನಟಿಸುವಾಸೆಯಂತೆ..!!
ಇಂದು ಭಾರತದಾದ್ಯಂತ ರಾಕಿ ಭಾಯ್ ಆಗಿಯೇ ಕೋಟ್ಯಾಂತರ ಅಭಿಮಾನಿಗಳ ಹೃದಯ ಗೆದ್ದಿರುವ ಯಶ್ KGF 2 ಮೂಲಕ ಇಂಡಿಯನ್ ಸ್ಟಾರ್ ಆಗಿದ್ದಾರೆ.. ಲವರ್ ಬಾಯ್ ಆಗಿ ಡಿಫರೆಂಟ್ ಮ್ಯಾರಿಸಮ್ , ಡೈಲಾಗ್ಸ್ , ಆಟಿಟ್ಯೂಡ್ ನಿಂದಲೇ ಗುರಿತಿಸಿಕೊಂಡು ಅಭಿಮಾನಿಗಳ ಅಣ್ತಮ್ಮನಾಗಿ , ಕಿರಾತಕನಾಗಿ ಜನರಿಗೆ ಇಷ್ಟವಾಗಿ ರಾಜಾಹುಲಿಯಾಗಿ ಅಬ್ಬರಿಸಿ , ರಾಮಾಚಾರಿಯಾಗಿ ಮೆರೆದ ಯಶ್ ರಾಕಿ ಭಾಯ್ ಆಗಿ ಹವಾ ಸೃಷ್ಟಿಸಿದ್ಧಾರೆ.,.
ಮೊಗ್ಗಿನ ಮನಸ್ಸು ಸಿನಿಮಾ ಮೂಲಕ ಸಿನಿಮಾರಂಗಕ್ಕೆ ಎಂಟ್ರಿಯಾದ ಗಜಕೇಸರಿ , ರಾಜಧಾನಿಯಲ್ಲಿ ಭರ್ಜರಿಯಾಗಿಯೇ ಮಿಂಚಿದರು.. 18 ಸಿನಿಮಾಗಳನ್ನ ಯಶ್ ಈವರೆಗೂ ಮಾಡಿದ್ದಾರೆ.. ಯಶ್ ಅವರ 19 ನೇ ಸಿನಿಮಾದ ಅಪ್ ಡೇಟ್ ಗಾಗಿ ಅಭಿಮಾನಿಗಳು ಜಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ..
ಅಂದ್ಹಾಗೆ ಯಶ್ ಗೆ ಬಾಲಿವುಡ್ ನಿಂದಲೂ ಆಫರ್ ಗಳು ಸಿಗುತ್ತಿವೆ.. ಮುಂದೆ KGF 3 ಬರಬಹುದು ಎಂದೂ ಹೇಳಲಾಗ್ತಿದೆ.. ನರ್ತನ್ ಜೊತೆಗೆ ಸಿನಿಮಾ ಮಾಡ್ತಾರಾ ಅನ್ನೋ ವದಂತಿಯೂ ಇದೆ..
ಇಂಡಿಯಾದಲ್ಲಿ ಯಶ್ ಮೇನಿಯಾ ಹೇಗಿದೆ ಅನ್ನೋದು ಎಲ್ರಿಗೂ ಗೊತ್ತೇ ಇದೆ.. KGF 2 ಸಿನಿಮಾ ಆದ ಮೇಲೆ ಯಶ್ ಗೆ ದೇಶದ ಮೂಲೆ ಮೂಲೆಯಲ್ಲೂ ಅಭಿಮಾನಿಗಳಾಗಿದ್ದಾರೆ…
ಹಿಂದಿ ಸಿನಿಮಾಗಳಿಗೆ ಪ್ರಸ್ತುತ ಸೌತ್ ಸಿನಿಮಾಗಳು ದುಸ್ವಪ್ನದಂತೆ ಕಾಡುತ್ತಿವೆ.. ಹಿಂದೆ ಸೌತ್ ಸಿನಿಮಾಗಳಂದ್ರೆ ಕೇವಲವಾಗಿ ನೋಡ್ತಿದ್ದವರಿಗೆ ಈಗ ಇಂಡಿಯಾದ ಟಾಪ್ 10 ಸಿನಿಮಾಗಳಲ್ಲಿ ಹೆಸರುಳಿಸಿಕೊಳ್ಳಲೂ ಹೆಣಗಾಡುವ ಸ್ಥಿತಿ ನಿರ್ಮಾಣವಾಗಿದೆ..
ಕನ್ನಡ ಅಭಿಮಾನಿಗಳಷ್ಟೇ ಅಲ್ಲ ಇಡೀ ದೇಶಾದ್ಯಂತ ರಾಕಿ ಭಾಯ್ ಅಭಿಮಾನಿಗಳನ್ನ ಸಂಪಾದಿಸಿದ್ದಾರೆ.. ಎಲ್ಲಿ ನೋಡಿದ್ರೂ ರಾಕಿ ಹವಾ ಜೋರಾಗಿದೆ..
ಇದೆಲ್ಲದರ ನಡುವೆ ಇತ್ತೀಚೆಗೆ ಯಶ್ ಬಾಲಿವುಡ್ ನಟರೊಬ್ಬರ ಜೊತೆಗೆ ನಟಿಸುವ ಸೆ ವ್ಯಕ್ತಪಡಿಸಿದ್ದಾರೆ.. ಆ ಬಾಲಿವುಡ್ ನಟ ಮತ್ಯಾರೂ ಅಲ್ಲ ನವಾಜ್ ಉದ್ದೀನ್ ಸಿದ್ದಿಕಿ.. ಅಂದ್ಹಾಗೆ ಪ್ರತಿಭಾನ್ವಿತ ಬಾಲಿವುಡ್ ನಟ ನವಾಜುದ್ದೀನ್ KGF 2 ಸಿನಿಮಾದ ಬಗ್ಗೆ ಅಷ್ಟಾಗಿ ಒಳ್ಳೆ ಒಪಿನಿಯನ್ ಹೊಂದಿರಲಿಲ್ಲ.. KGF ನೋಡಿಲ್ಲ , ನೋಡೋದೂ ಇಲ್ಲ ಎಂದಿದ್ದರು..
ಆದ್ರೆ ರಾಕಿಂಗ್ ಸ್ಟಾರ್ ಯಶ್, ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿಯನ್ನ ಹೊಗಳಿದ್ದಾರೆ. ಮತ್ತು ಭವಿಷ್ಯದಲ್ಲಿ ಅವರೊಂದಿಗೆ ಕೆಲಸ ಮಾಡುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ. ಆಗಸ್ಟ್ 20 ರಂದು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸಿದ್ದಿಕಿಯನ್ನ ಹೊಗಳಿದ್ದು , ಅವರೊಂದಿಗೆ ಕೆಲಸ ಮಾಡಲು ಇಷ್ಟಪಡುತ್ತೇನೆ ಎಂದು ಒಪ್ಪಿಕೊಂಡಿದ್ದಾರೆ.
ಬಾಲಿವುಡ್ ಹಂಗಾಮಾಗೆ ನೀಡಿದ ಸಂದರ್ಶನದಲ್ಲಿ, ನೀವು ಯಾವ ಬಾಲಿವುಡ್ ನಟರೊಂದಿಗೆ ಕೆಲಸ ಮಾಡಲು ಬಯಸುತ್ತೀರಿ ಎಂದು ಯಶ್ ಅವರನ್ನ ನಿರೂಪಕರು ಪ್ರಶ್ನೆಕೇಳಿದ್ದಾರೆ.. ಅದಕ್ಕೆ ಉತ್ತರಿಸಿರುವ ಯಶ್ ನವಾಜುದ್ದೀನ್ ಸಿದ್ದಿಕಿ ಒಬ್ಬ ಉತ್ತಮ ಕಲಾವಿದ, ನಾನು ಅವರೊಂದಿಗೆ ಕೆಲಸ ಮಾಡಲು ಬಯಸುತ್ತೇನೆ ಎಂದು ಹೇಳಿದ್ದಾರೆ.