ಹೊಸ ಆರ್ಯವರ್ಧನ್ ಅನೂಪ್ ಭಂಡಾರಿ – ಸ್ಪಷ್ಟನೆ ಕೊಟ್ಟ ವಿಕ್ರಾಂತ್ ರೋಣ ಸಾರಥಿ..!!
ಖ್ಯಾತ ನಟ ಅನಿರುದ್ಧ ಅವರನ್ನ ಜೊತೆ ಜೊತೆಯಲಿ ಧಾರಾವಾಹಿಯಿಂದ ಹೊರಹಾಕಿದ್ದು ಅಧಿಕೃತವಾಗಿದೆ.. ಧಾರಾವಾಹಿ ತಂಡದ ನಿರ್ಧಾರಕ್ಕೆ ಅನೇಕರು ವಿರೋಧ ವ್ಯಕ್ತಪಡಿಸಿದ್ರೆ ಇನ್ನೂ ಅನೇಕರಲ್ಲಿ ಮುಂದೆ ಆರ್ಯವರ್ಧನ್ ಪಾತ್ರ ಮಾಡುವವರು ಯಾರೆಂಬ ಕುತೂಹಲವೇ ಹೆಚ್ಚಾಗಿದೆ.. ಇದೆಲ್ಲದರ ನಡುವೆ ಈ ಪಾತ್ರವನ್ನ ವಿಕ್ರಾಂತ್ ರೋಣ , ರಂಗೀತರಂಗ ಸಿನಿಮಾ ಖ್ಯಾತಿಯ ನಿರ್ದೇಶಕ ಅನೂಪ್ ಭಂಡಾರಿ ಮಾಡಲಿದ್ದಾರೆ ಅನ್ನೋ ಸುದ್ದಿ ಸೌಂಡ್ ಮಾಡಿದ ಬೆನ್ನಲ್ಲೇ ಅನೂಪ್ ಭಂಡಾರಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ..
ಅನೂಪ್ ಮುಖ, ಗಡ್ಡ, ಅವರ ಲುಕ್ ಎಲ್ಲವೂ ಆರ್ಯವರ್ಧನ್ದ ಪಾತ್ರಧಾರಿ ಅನಿರುದ್ಧ ಅವರನ್ನ ಹೋಲುವುದರಿಂದ ಧಾರಾವಾಹಿ ತಂಡವು ಅನೂಪ್ ಅವರನ್ನು ಸಂಪರ್ಕಿಸಿದೆ.. ಧಾರಾವಾಹಿ ತಂಡ ತಮ್ಮನ್ನ ಸಂಪರ್ಕಿಸಿತ್ತು ಎಂಬುದನ್ನ ಅನೂಪ್ ಒಪ್ಪಿಕೊಂಡಿದ್ದಾರೆ ಕೂಡ.. ಆದ್ರೆ ಈ ಪಾತ್ರವನ್ನ ಅವರು ನಿಭಾಯಿಸುವುದಿಲ್ಲ ದೂ ಸಹ ಸ್ಪಷ್ಟನೆಯನ್ನ ನೀಡಿದ್ದಾರೆ..
ಈಗಾಗಲೇ ಹೊಸ ಸಿನಿಮಾ ಮಾಡುವ ತಯಾರಿ ನಡೆಸಿದ್ದೇನೆ. ಇಂತಹ ವೇಳೆಯಲ್ಲಿ ನಾನು ಧಾರಾವಾಹಿ ಒಪ್ಪಿಕೊಂಡರೆ, ನನ್ನ ಚಿತ್ರಕ್ಕೆ ಹಿನ್ನೆಡೆ ಆಗುತ್ತದೆ. ಹಾಗಾಗಿ ನಾನು ಈ ಧಾರಾವಾಹಿಯಲ್ಲಿ ನಟಿಸುವುದಿಲ್ಲ ಎಂದು ಹೇಳಿದ್ದೇನೆ ಎಂದಿದ್ದಾರಂತೆ ಅನೂಪ್ ಭಂಡಾರಿ. ಅಂದ್ಹಾಗೆ ಅನೂಪ್ ಭಂಡಾರಿ ಹಲವು ಸಿನಿಮಾಗಳನ್ನ ಮಾಡಬೇಕಿದೆ.. ಅವರು ಪ್ರಸ್ತುತ ಸಿನಿಮಾಗಳಲ್ಲಿಯೇ ಬ್ಯುಸಿಯಾಗಿರಲಿದ್ದಾರೆ..