Bigg Boss Ott : ಸೋನುಗೆ ಈ ವಾರ ಅದೃಷ್ಟ..!! ನಾಮಿನೇಷನ್ ಪ್ರಕ್ರಿಯೆಯಲ್ಲಿ ಸೇಫ್ ಆದ ಸೋನು..!!!
Bigg Boss Ott ಕನ್ನಡದ ಮೊದಲ ಸೀಸನ್ ನಲ್ಲಿ ಭಿನ್ನ ವಿಭಿನ್ನ ಬವ್ಯಕ್ತಿತ್ವದವರು ಬಂದು ಸೇರಿಕೊಂಡಿದ್ದಾರೆ.. ಈಗಾಗಲೇ ಇಬ್ಬರು ಎಲಿಮಿನೇಟ್ ಆಗಿದ್ದು ಇಬ್ಬರು ಗಾಯದ ಸಮಸ್ಯೆಯಿಂದ ಮನೆಯಿಂದ ಹೊರ ಹೋಗಿದ್ದಾರೆ..
ಈ ಮೂಲಕ ನಾಲ್ವರು ಮನೆಯಿಂದ ಹೊರ ಹೋದಂತಾಗಿದೆ.. ಎರೆಡು ವಾರಗಳು ಮುಗಿದು.. ಸ್ಪರ್ಧಿಗಳು ಮೂರನೇ ವಾರದಲ್ಲಿದ್ದಾರೆ..
ಮನೆಯ ಹೈಲೇಟ್ ಟ್ರೋಲಿಗರ ಫೇವರೇಟ್ , ಸೋಷಿಯೊಲ್ ಮೀಡಿಯಾ ಸ್ಟಾರ್ ಸೋನು ಶ್ರೀನಿವಾಸ್ ಗೌಡ ,, ಒಂದಲ್ಲಾ
ಒಂದು ವಿಚಾರಕ್ಕೆ ಗಮನ ಸೆಳೆಯುತ್ತಲೇ ಇದ್ದಾರೆ.. ಸತತವಾಗಿ ಎರಡು ವಾರಗಳ ಕಾಲ ನಾಮಿನೇಟ್ ಆಗಿದ್ದ ಸೋನು ಶ್ರೀನಿವಾಸ್ ಗೌಡ ಈ ವಾರ ನಾಮಿನೇಷನ್ ನಿಂದಲೇ ಬಚಾವ್ ಆಗಿದ್ದಾರೆ.. ಈ ವಾರ ಅದೃಷ್ಟ ಅವರಿಗೆ ಸಾಥ್ ನೀಡಿದೆ..
ನಾಮಿನೇಟ್ ಪ್ರಕ್ರಿಯೆಗಾಗಿ ಬಿಗ್ ಬಾಸ್ ಎರಡು ಬಾಕ್ಸ್ ಕಳುಹಿಸಿದ್ದರು. ಒಂದು ಬಾಕ್ಸ್ ನಲ್ಲಿ ಕಣ್ಣಿನ ಚಿತ್ರ ಮತ್ತೊಂದು ಬಾಕ್ಸ್ ನಲ್ಲಿ ಕನ್ಫೆಷನ್ ರೂಮ್ ಎಂದು ಬರೆಯಲಾಗಿದೆ. ಕಣ್ಣಿನ ಚಿತ್ರ ಇದ್ದವರು ನೇರವಾಗಿ, ಕನ್ಫೆಷನ್ ರೂಮ್ ಅಂತ ಇದ್ದರೆ ಕನ್ಫೆಷನ್ ರೂಮ್ ಗೆ ತೆರಳಿ ನಾಮಿನೇಟ್ ಮಾಡಬೇಕಿತ್ತು.
ಚೈತ್ರಾ, ಜಯಶ್ರೀ, ಆರ್ಯವರ್ಧನ್, ನಂದಿನಿ, ಅಕ್ಷತಾ, ರೂಪೇಶ್, ಸೋಮಣ್ಣ ಸೇರಿದಂತೆ 7 ಜನರು ನಾಮಿನೇಟ್ ಆದರು. ಆದರೆ, ಸೋನು ಶ್ರೀನಿವಾಸ್ ಗೌಡಗೆ ಯಾರೂ ವೋಟ್ ಮಾಡದೇ ಇದ್ದ ಕಾರಣ ಅವರು ಈ ವಾರ ಎಲಿಮಿನೇಷನ್ ನಿಂದ ಬಚಾವ್ ಆಗಿದ್ದಾರೆ..