Lalsingh Chadda : ಅಂತೂ ಇಂತೂ ಕಷ್ಟ ಪಟ್ಟು 100 ಕೋಟಿ ಕ್ಲಬ್ ಸೇರಿದ ಅಮೀರ್ ಸಿನಿಮಾ..!!
ಅಲ್ಟ್ರಾ ಡಿಸಾಸ್ಟರ್ ಸಿನಿಮಾಗಳ ಲಿಸ್ಟ್ ಸೇರಿರುವ ಬಾಲಿವುಡ್ ಸಿನಿಮಾ , ಮಿಸ್ಟರ್ ಪರ್ಫೆಕ್ಟ್ ಅಮಿರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾಗೆ ಬಾಯ್ಕಾಟ್ ಬಿಸಿ ಯಾವ ಪರಿ ತಟ್ಟಿದೆ ಅನ್ನೋದು ಈಗಾಗಲೇ ಗೊತ್ತಾಗಿದೆ… ಸಿನಿಮಾ ಬಾಯ್ಕಾಟ್ ಟ್ರೆಂಡ್ ನಡುವೆಯೂ 100 ಕೋಟಿ ಕ್ಲಬ್ ಸೇರಿದೆ.. ಆದ್ರೆ ಅಮಿರ್ ಸಿನಿಮಾದ ಅತ್ಯಂತ ಕಳಪೆ ಕಲೆಕ್ಷನ್ ಕೂಡ ಇದೇ ಸಿನಿಮಾದಾಗಿದೆ..
ಆಮೀರ್ ಖಾನ್ ನಟಿಸಿ, ನಿರ್ಮಾಣ ಮಾಡಿರುವ ಲಾಲ್ ಸಿಂಗ್ ಚಡ್ಡಾ, ಕೊನೆಗೂ 100 ಕೋಟಿ ಕ್ಲಬ್ ಸೇರಿದೆ..
ಸಿನಿಮಾ ಬಿಡುಗಡೆ ಮುನ್ನವೇ ಬಾಯ್ಕಾಟ್ ಅಭಿಯಾನ ಶುರುವಾಗಿತ್ತು.. ಹಿಂದೂಪರ ಸಂಘಟನೆಯ ಕಾರ್ಯಕರ್ತರು ಅಮಿರ್ ವಿರುದ್ಧ ಮುಗಿಬಿದ್ದಿದ್ದರು.. ಅಮಿರ್ ಹಿಂದೂ ದೇವರುಗಳಿಗೆ ಅವಮಾನ ಮಾಡಿದ್ದಾರೆ , ಕರೀನಾ ನೆಪೋಟಿಸಮ್ ಕುರಿತಾಗಿ ಮಾತನಾಡ್ತಾ ದುರಹಂಕಾರದ ಹೇಳಿಕೆಗಳನ್ನ ನೀಡಿದ್ದಾರೆ ಎಂದು ಇಬ್ಬರ ಸಿನಿಮಾಗಳನ್ನ ಬಹುತೇಕರು ಬಹಿಷ್ಕರಿಸಲು ನಿರ್ಧರಿಸಿ ಬಾಯ್ಕಾಟ್ ಸಾರಿದ್ದರು..
ಒಟ್ನಲ್ಲಿ ಬಾಲಿವುಡ್ ನಸೀಬ್ ಖರಾಬಾಗಿರೋದಂತೂ ನಿಜ… ಬ್ಯಾಕ್ ಟು ಬ್ಯಾಕ್ ಬರೀ ಫ್ಲಾಪ್ ಸಿನಿಮಾಗಳೇ ಬರುತ್ತಿವೆ.. ಇತ್ತ ರಕ್ಷಾಬಂಧನ ಸಿನಿಮಾ ಕೂಡ ಫ್ಲಾಪ್ ಆಗಿದೆ.. ಅದು ಕೂಡ ಅಕ್ಷಯ್ ಕುಮಾರ್ ರಂತಹ ಸ್ಟಾರ್ ಸಿನಿಮಾ.. ಆದ್ರೆ ಇವೆರೆಡೂ ಸಿನಿಮಾಗಳ ಮುಂದೆ ಸೌತ್ ಸಿನಿಮಾಗಳಾದ ಸೀತಾ ರಾಮಂ , ಕಾರ್ತಿಕೇಯ 2 ಅಬ್ಬರಿಸಿ ಬೊಬ್ಬಿರಿಯುತ್ತಿದ್ದು , ಭರ್ಜರಿ ಕಲೆಕ್ಷನ್ ಮಾಡುತ್ತಿವೆ..