SIMA 2022 : ‘ಸೈಮಾ’ಗೆ ಆಯ್ಕೆಯಾದ ಕನ್ನಡ ನಟಿಯರ ಪಟ್ಟಿ ರಿವೀಲ್..!!!
ಸೌತ್ ಸಿನಿಮಾರಂಗದ ಪ್ರತಿಷ್ಠಿತ ಪ್ರಶಸ್ತಿ ಸಮಾರಂಭ ಸೈಮಾದ 2022 ರ ಸಾಲಿನ ಸಮಾರಂಭಕ್ಕೆ ಈಗಾಗಲೇ ತಯಾರಿಗಳು ನಡೆಯುತ್ತಿದ್ದು , ಪ್ರಶಸ್ತಿಗಳಿಗೆ ನಾಮಿನೇಟ್ ಆಗಿರುವ ಸಿನಿಮಾಗಳು , ನಟ , ನಟಿಯರು , ಕಲಾವಿದರ ಪಟ್ಟಿ ರಿಲೀಸ್ ಆಗಲಿದೆ…
2022 ರ ಸೈಮಾ ಪಟ್ಟಿ ಹೊರ ಬರಲಿದ್ದು ಎಲ್ಲರೂ ಕಾತರದಿಂದ ಕಾಯ್ತಿದ್ದಾರೆ.. ಅಂದ್ಹಾಗೆ ಈಗಾಗಲೇ ಸೈಮಾಗೆ ನಾಮಿನೇಟ್ ಆಗಿರುವ ಪ್ರಶಸ್ತಿಗಳ ಪಟ್ಟಿ ಕೂಡ ರಿವೀಲ್ ಆಗುತ್ತಿದೆ.
ಇದೀಗ ಸೈಮಾಗೆ ಆಯ್ಕೆಯಾದ ಕನ್ನಡದ ನಟಿಯರ ಪಟ್ಟಿ ರಿಲೀಸ್ ಆಗಿದೆ.. ಈ ಬಾರಿಯ ಸೈಮಾ ಪ್ರಶಸ್ತಿಗೆ ಕನ್ನಡದಿಂದ ಫೇಮಸ್ ಆಗಿ ನ್ಯಾಷನಲರ್ ಕ್ರಶ್ ಆಗಿ ಮೆರೆಯುತ್ತಿರುವ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಹೆಸರು ನಾಮಿನೇಟ್ ಆಗಿದೆ.
ಸದ್ಯಕ್ಕೆ ಕನ್ನಡದಿಂದ ರಶ್ಮಿಕಾ ದೂರವೇ ಉಳಿದಿದ್ದಾರೆ.. ಟಾಲಿವುಡ್ , ಕಾಲಿವುಡ್ , ಬಾಲಿವುಡ್ ನಲ್ಲಿ ಬ್ಯುಸಿಯಾಗಿದ್ದಾರೆ.. ಆದ್ರೆ ಆಶ್ಚರ್ಯ ಅಂದ್ರೆ ರಶ್ಮಿಕಾ ಮಂದಣ್ಣ ನಾಮಿನೇಟ್ ಆಗಿರೋದು ಕನ್ನಡದ ಪೊಗರು ಚಿತ್ರಕ್ಕಾಗಿ..
ಹೌದು..! ಅವರ ಹೆಸರು ಕನ್ನಡದ ಪೊಗರು ಸಿನಿಮಾಗಾಗಿ ನಾಮಿನೇಟ್ ಆಗಿದೆ..
ಇನ್ನೂ ಸೈಮಾಗೆ ರಚಿತಾ ರಾಮ್ ಸಹ ನಾಮಿನೇಟ್ ಗಿದ್ದಾರೆ.. ಅಧಿಕೃತ ಪಟ್ಟಿಯಲ್ಲಿ ರಚಿತಾ ಹೆಸರು ಸೇರಿಕೊಂಡಿದೆ. ರಚಿತಾ ರಾಮ್ ಅಭಿನಯದ ಲವ್ ಯು ರಚ್ಚು ಸಿನಿಮಾಗಾಗಿ ರಚಿತಾ ರಾಮ್ ಹೆಸರು ನಾಮಿನೇಟ್ ಆಗಿದೆ.
ಇನ್ನೂ ಪಟಾಕಿ ಪೋರಿ ಆಶಿಕಾ ರಂನಾಥ್ ಸಹ ಪ್ರಶಸ್ತಿಗಾಗಿ ನಾಮಿನೇಟ್ ಆಗಿದ್ದಾರೆ.. ಮದಗಜ ಸಿನಿಮಾಗಾಗಿ ಆಶಿಕಾರನ್ನ ಪ್ರಶಸ್ತಿಗೆ ನಾಮಿನೇಟ್ ಮಾಡಲಾಗಿದೆ..
ಇನ್ನೂ ನಟಿ ಅಮೃತ ಅಯ್ಯಂಗಾರ್ , ನಿಶ್ವಿತಾ ನಾಯ್ಡು ಸಹ ಸೈಮಾಗೆ ನಾಮಿನೇಟ್ ಆಗಿದ್ದಾರೆ. ಬಡವ ರಾಸ್ಕಲ್ ಚಿತ್ರಕ್ಕಾಗಿ ಅಮೃತಾ ನಾಮಿನೇಟ್ ಆಗಿದ್ರೆ , ಸಖತ್ ಸಿನಿಮಾಗಾಗಿ ನಿಶ್ವಿಕಾ ನಾಯ್ಡು ಆಯ್ಕೆಯಾಗಿದ್ದಾರೆ.. ಹೀಗೆ ಒಟ್ಟು ಐವರು ಕನ್ನಡದ ನಟಿಯರು ಸೈಮಾ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ..