Sima 2022 : ಪ್ರಶಸ್ತಿಗೆ ನಾಮಿನೇಟ್ ಆದ ಕನ್ನಡದ ನಟರು..!!
ಸೌತ್ ಸಿನಿಮಾರಂಗದ ಪ್ರತಿಷ್ಠಿತ ಪ್ರಶಸ್ತಿ ಸಮಾರಂಭ ಸೈಮಾದ 2022 ರ ಸಾಲಿನ ಸಮಾರಂಭಕ್ಕೆ ಈಗಾಗಲೇ ತಯಾರಿಗಳು ನಡೆಯುತ್ತಿದ್ದು , ಪ್ರಶಸ್ತಿಗಳಿಗೆ ನಾಮಿನೇಟ್ ಆಗಿರುವ ಸಿನಿಮಾಗಳು , ನಟ , ನಟಿಯರು , ಕಲಾವಿದರ ಪಟ್ಟಿ ರಿಲೀಸ್ ಆಗಲಿದೆ…
2022 ರ ಸೈಮಾ ಪಟ್ಟಿ ಹೊರ ಬರಲಿದ್ದು ಎಲ್ಲರೂ ಕಾತರದಿಂದ ಕಾಯ್ತಿದ್ದಾರೆ.. ಅಂದ್ಹಾಗೆ ಈಗಾಗಲೇ ಸೈಮಾಗೆ ನಾಮಿನೇಟ್ ಆಗಿರುವ ಪ್ರಶಸ್ತಿಗಳ ಪಟ್ಟಿ ಕೂಡ ರಿವೀಲ್ ಆಗುತ್ತಿದೆ.
ಇದೀಗ ಸೈಮಾಗೆ ಆಯ್ಕೆಯಾದ ಕನ್ನಡದ ನಟರ ಪಟ್ಟಿ ರಿಲೀಸ್ ಆಗಿದೆ..
ಕನ್ನಡದ ಸ್ಟಾರ್ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸೈಮಾ ಪ್ರಶಸ್ತಿಗೆ ನಾಮಿನೇಟ್ ಆಗಿದ್ದಾರೆ..
ರಾಬರ್ಟ್ ಸಿನಿಮಾದ ನಟನೆಗಾಗಿ ಡಿ ಬಾಸ್ ಹೆಸರು ನಾಮಿನೇಟ್ ಆಗಿದೆ.
ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಯುವರತ್ನ ಸಿನಿಮಾಗಾಗಿ ಪ್ರಶಸ್ತಿಗೆ ನಾಮಿನೇಟ್ ಆಗಿದ್ದಾರೆ..
ಇನ್ನೂ ಸಿನಿಮಾ ಸಿನಿಮಾಗಾಗಿ ಗಣೇಶ್ , ಬಡವ ರಾಸ್ಕಲ್ ಗಾಗಿ ಡಾಲಿ ಧನಂಜಯ ಅವರು ಕೂಡ ಸೈಮಾ ಅವಾರ್ಡ್ 2022 ಗೆ ನಾಮಿನೇಟ್ ಆಗಿದ್ದಾರೆ..
ಭಜರಂಗಿ 2 ಗಾಗಿ ಶಿವಣ್ಣ , ‘ಗರುಡ ಗಮನ ವೃಷಭ ವಾಹನ’ಕ್ಕಾಗಿ ರಿಷಬ್ ಶೆಟ್ಟಿ ಅವರ ಹೆಸರುಗಳೂ ಸಹ ನಾಮಿನೇಟ್ ಲಿಸ್ಟ್ ಸೇರಿವೆ..