Sonali Phogat : ಹಿಂದಿ ಬಿಗ್ ಬಾಸ್ ಖ್ಯಾತಿಯ ಹರಿಯಾಣ ಬಿಜೆಪಿ ನಾಯಕಿ ಸೋನಾಲಿ ಫೋಗಟ್ ನಿಧನ
ಹಿಂದಿ ಬಿಗ್ ಬಾಸ್ ಖ್ಯಾತಿಯ ಹರಿಯಾಣ ಬಿಜೆಪಿ ನಾಯಕಿ ಸೋನಾಲಿ ಫೋಗಟ್ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.. ಗೋವಾದಲ್ಲಿ 41 ವರ್ಷದ ಸೋನಾಲಿ ಅವರು ಕೊನೆಯುಸಿರೆಳೆದಿದ್ದಾರೆ…
ಸೋನಾಲಿ ಫೋಗಟ್ 2019 ರ ಹರ್ಯಾಣ ಚುನಾವಣೆಯಲ್ಲಿ ಆದಂಪುರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು, ಆಗಿನ ಕಾಂಗ್ರೆಸ್ ನಾಯಕ ಕುಲದೀಪ್ ಬಿಷ್ಣೋಯ್ ಅವರನ್ನು ಎದುರಿಸಿದ್ದರು.
ಆಕೆ ತನ್ನ ಕೆಲವು ಸಹೋದ್ಯೋಗಿಗಳೊಂದಿಗೆ ಗೋವಾಕ್ಕೆ ತೆರಳಿದ್ದರು. ಅಲ್ಲಿ ಅವರು ಅಸ್ವಸ್ಥಗೊಂಡಿದ್ದಾರೆ,.. ತಯಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.. ಆ ವೇಳೆಗೆ ಅವರು ವಿಧಿವಶರಾಗಿದ್ದರು..
ಹರಿಯಾಣ ಮುಖ್ಯಮಂತ್ರಿ ಎಂಎಲ್ ಖಟ್ಟರ್ ಅವರು ಟ್ವಿಟರ್ ಮೂಲಕ ಸಂತಾಪ ಸೂಚಿಸಿದ್ದಾರೆ. “ಸೋನಾಲಿ ಫೋಗಟ್ ಸಾವಿನ ಬಗ್ಗೆ ತಿಳಿದು ತೀವ್ರ ದುಃಖವಾಯಿತು” ಎಂದು ಅವರು ಬರೆದಿದ್ದಾರೆ.
ಸೋನಾಲಿ ಫೋಗಟ್ ತನ್ನ ಟಿಕ್ ಟಾಕ್ ವೀಡಿಯೊಗಳಿಂದಲೇ ಖ್ಯಾತಿ ಗಳಿಸಿದ್ದರು.. ದೊಡ್ಡ ಮಟ್ಟದಲ್ಲಿ ಫಾಲೋವರ್ಸ್ ಗಳನ್ನೂ ಸಹ ಹೊಂದಿದ್ದರು..
ಎರಡು ವರ್ಷಗಳ ನಂತರ ಬಿಜೆಪಿಗೆ ಸೇರುವ ಮೊದಲು ಅವರು 2006 ರಲ್ಲಿ ಟಿವಿ ನಿರೂಪಕಿಯಾಗಿ ಕಾರ್ಯನಿವರ್ಹಹಿಸಿದ್ದರು..
ಅವರು 2016 ರಲ್ಲಿ ‘ಅಮ್ಮ: ಏಕ್ ಮಾ ಜೋ ಲಾಖೋಂ ಕೆ ಲಿಯೆ ಬಾನಿ ಅಮ್ಮಾ’ ಟಿವಿ ಶೋ ಮೂಲಕ ತಮ್ಮ ನಟನೆಯನ್ನು ಪ್ರಾರಂಭಿಸಿದರು. ಅವರು 2019 ರಲ್ಲಿ ‘ದಿ ಸ್ಟೋರಿ ಆಫ್ ಬದ್ಮಾಶ್ಗಢ’ ವೆಬ್ ಸರಣಿಯ ಭಾಗವಾಗಿದ್ದರು.
ರಿಯಾಲಿಟಿ ಶೋ ಬಿಗ್ ಬಾಸ್ 2020 ರ ಆವೃತ್ತಿಯಲ್ಲೂ ಅವರು ಭಾಗವಹಿಸಿದ್ದರು.
ಅದೇ ವರ್ಷ ಹರಿಯಾಣದ ಹಿಸಾರ್ನಲ್ಲಿ ಸಾರ್ವಜನಿಕವಾಗಿ ಅಧಿಕಾರಿಯೊಬ್ಬರನ್ನು ಥಳಿಸಿ ಸುದ್ದಿಯಾಗಿದ್ದರು. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವೀಡಿಯೊಗಳಲ್ಲಿ, ಸೋನಾಲಿ ಫೋಗಟ್ ತನ್ನ ಪಾದರಕ್ಷೆಯಿಂದ ವ್ಯಕ್ತಿಯನ್ನು ಹೊಡೆಯುತ್ತಿರುವುದು ಕಂಡುಬಂದಿತ್ತು..