ವಿಜಯ್ ಸೇತುಪತಿ.. ಕಾಲಿವುಡ್ ನ ಸ್ಟಾರ್ ನಟ… ಹೀರೋ ಆಗಿ ಸಿನಿಮಾಗಳಲ್ಲಿ ಮಿಂಚಿದವರು.. ಹಾಗಂತ ನೆಗೆಟಿವ್ ಶೇಡ್ ಗಳನ್ನ ಮಾಡದೇ ಇರಲಿಲ್ಲ.. ಪ್ರಯೋಗಾತ್ಮಕ ಪಾತ್ರಗಳಿಗೆ ಹೊಂದಿಕೊಂಡರು.. ವಿಲ್ಲನ್ ಆಗಿಯೂ ಮಿಂಚಿದ್ರು.. ವರ್ಸಟೈಲ್ ಟ ವಿಜಯ್ ಸೇತುಪತಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಇದೆ..
ಇತ್ತ ಕನ್ನಡದ ಸೂಪರ್ ಸ್ಟಾರ್ ಅಭಿನಯ ಚಕ್ರವರ್ತಿ ನಟ ಸುದೀಪ್ ಸಹ ಅನೇಕ ಪ್ರಯೋಗಗಳನ್ನ ಮಾಡಿದವರು.. ವಿಲ್ಲನ್ ಆಗಿಯೂ ಮಿಂಚಿದವರು.. ಇದಕ್ಕೆ ಬೆಸ್ಟ್ ಎಕ್ಸಾಂಪಲ್ ಈಗ… ಸುದೀಪ್ ಸಹ ವರ್ಸಟೈಲ್ ಆಕ್ಟರ್… ವಿಜಯ್ ಸೇತುಪತಿ , ಸುದೀಪ್ ಇಬ್ಬರೂ ಸೌತ್ ಇಂಡಿಯಾ ಅಷ್ಟೇ ಅಲ್ದೇ ಬಾಲಿವುಡ್ ನಲ್ಲೂ ಹೆಸರು ಮಾಡಿರುವ ಸೌತ್ ನ ಸ್ಟಾರ್ ನಟರು,..
ಅಂದ್ಹಾಗೆ ಇದೀಗ ಹರಿದಾಡ್ತಿರುವ ಗಾಸಿಪ್ ಥ್ರಿಲ್ ಮೂಡಿಸಿದೆ.. ಅದೇನೆಂದ್ರೆ ಟಾಲಿವುಡ್ ನ ಸಿನಿಮಾವೊಂದ್ರಲ್ಲಿ ವಿಜಯ್ ಸೇತುಪತಿ ಹಾಗೂ ಸುದೀಪ್ ಇಬ್ಬರೂ ಕಾದಾಟ ನಡೆಸಲಿದ್ದಾರೆ ಎನ್ನಲಾಗ್ತಿದೆ.. ಅಂದ್ಹಾಗೆ ಬಹಳ ದಿನಗಳ ಬಳಿಕ ಸುದೀಪ್ ತೆಲುಗು ಸಿನಿಮಾ ಒಂದನ್ನು ಒಪ್ಪಿಕೊಂಡಿದ್ದಾರೆ. ಇನ್ನೂ ವಿಶೇಷವೆಂದರೆ ಈ ಸಿನಿಮಾದಲ್ಲಿ ಸುದೀಪ್ ಪೂರ್ಣ ಪ್ರಮಾಣದ್ಲಿ ನಾಯಕನಾಗಿ ಬಣ್ಣ ಹಚ್ಚುತ್ತಿದ್ದಾರೆ ಎನ್ನಲಾಗ್ತಿದೆ..
ತೆಲುಗಿನಲ್ಲಿ ಸೂಪರ್ ಹಿಟ್ ಆಗಿದ್ದ ರಾಕ್ಷಸುಡು ಸಿನಿಮಾದ ಎರಡನೇ ಭಾಗ ಇದಾಗಿರಲಿದೆಯಂತೆ.. ಈ ಸಿನಿಮಾದ ಮುಖ್ಯ ಪಾತ್ರದಲ್ಲಿ ಸುದೀಪ್ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಇದೇ ಸಿನಿಮಾದಲ್ಲೇ ವಿಜಯ್ ಸೇತುಪತಿ ವಿಲ್ಲನ್ ಅಂತ ಹೇಳಲಾಗ್ತಿದೆ..
2019 ರಲ್ಲಿ ಬಿಡುಗಡೆ ಆಗಿದ್ದ ರಾಕ್ಷಸುಡು ಸಿನಿಮಾ ಸೂಪರ್ ಹಿಟ್ ಆಗಿತ್ತು. ಆ ಸಿನಿಮಾದಲ್ಲಿ ಬೆಲ್ಲಂಕೊಂಡ ಶ್ರೀನಿವಾಸ್ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಈಗ ಅದೇ ಸಿನಿಮಾದ ಎರಡನೇ ಭಾಗ ತಯಾರಾಗುತ್ತಿದ್ದು, ಮುಖ್ಯ ಪಾತ್ರದಲ್ಲಿ ಸುದೀಪ್ ನಟಿಸಲಿದ್ದಾರೆ ಎನ್ನಲಾಗುತ್ತಿದೆ.
ಅಂದ್ಹಾಗೆ ಈ ಸಿನಿಮಾಗೂ ಕೂಡ ರಮೇಶ್ ವರ್ಮಾ ಅವರೇ ಆಕ್ಷನ್ ಕಟ್ ಹೇಳ್ತಿದ್ದಾರೆ.. ಈ ಸಿನಿಮಾಗೆ ಸುದೀಪ್ ಅವರಿಗೆ ಆಫರ್ ಸಿಕ್ಕಿದ್ದು , ಸುದೀಪ್ ಅವರಿಗೆ ಚಿತ್ರಕತೆಯೂ ಇಷ್ಟವಾಗಿ ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎನ್ನಲಾಗಿದೆ.. ಅಂದ್ಹಾಗೆ ಮೂಲಗಳ ಪ್ರಕಾರ ಮಾಲಿವುಡ್ ನಟಿ ಮಾಳವಿಕಾ ಮೋಹನನ್ ಈ ಸಿನಿಮಾದಲ್ಲಿ ಸುದೀಪ್ ಗೆ ನಾಯಕಿಯಾಗಿ ಬಣ್ಣ ಹಚ್ಚಲಿದ್ದಾರೆ ಎನ್ನಲಾಗಿದೆ…