Alia Bhatt : ಬಾಯ್ಕಾಟ್ ಅನ್ನೋರು ನನ್ನ ಸಿನಿಮಾ ನೋಡಲೇಬೇಡಿ : ಆಲಿಯಾ
ಒಂದು ಕಾಲದಲ್ಲಿ ಭಾರತೀಯ ಸಿನಿಮಾರಂಗ ಅಂದ್ರೆ ಬಾಲಿವುಡ್ ಮಾತ್ರವೇ , ಮಿಕ್ಕೆಲ್ಲಾ ಸಿನಿಮಾರಂಗಗಳು ಲೆಕ್ಕಕ್ಕೆ ಇಲ್ಲ ಎಂಬಂತೆ ಮೆರೆದಿದ್ದ ಬಾಲಿವುಡ್ ಸೌತ್ ಸಿನಿಮಾರಂಗವನ್ನ ಕಡೆಗಣಿಸಿತ್ತು.. ಆದ್ರೆ ಇದೇ ಬಾಕಿವುಡ್ ಸೌತ್ ಸಿನಿಮಾಗಳ ರೀಮೇಕ್ ಮಾಡೋದಕ್ಕೆ ಮಾತ್ರ ಮುಜುಗರ ಪಟ್ಟುಕೊಳ್ತಿರಲಿಲ್ಲ..
ಆದ್ರೆ ಇದೇ ಬಾಲಿವುಡ್ ಪಾಲಿಗೆ ಮುಳುವಾಗಿದ್ದು.. ಅದ್ಯಾವಾಗ ಬಾಲಿವುಡ್ ಬರೀ ರೀಮೇಕ್ ಸಿನಿಮಾಳನ್ನೇ ಮಾಡೋಕೆ ಶುರು ಮಾಡಿತೋ ಆಗಿನಿಂದ ಜನರು ಒರಿಜಿನಾಲಿಟಿ ಕಡೆಗೆ ವಾಲಲು ಆರಂಭಿಸಿದ್ರು.. ಅಂದ್ರೆ ಸೌತ್ ಸಿನಿಮಾಗಳು ಹಿಂದಿಗೆ ಡಬ್ಬಿಂಗ್ ಆಗಕಲು ಶುರುವಾಗಿ ಜನರು ಆ ಕಡೆ ಹೆಚ್ಚು ವಾಲಿದ್ರು…
ಸುಶಾಂತ್ ಸಿಂಗ್ ನಿಧನದ ನಂತರವಂತೂ ಬಾಲಿವುಡ್ ನಲ್ಲಿ ನೆಪೋಟಿಸಮ್ , ಬಾಲಿವುಡ್ ಮಾಫಿಯಾ ಹೀಗೆ ಒಂದೊಂದೇ ಸುದ್ದಿ ಸೌಂಡ್ ಮಾಡ್ತಾ ಬಾಲಿವುಡ್ ವಿರುದ್ಧ ಜನ ತಿರುಗಿ ಬೀಳಲು ಆರಂಭಿಸಿದ್ರು.. ಹೀಗೆ ತಿರುಗಿಬಿದ್ದವರಿಗೆ ಟಾರ್ಗೆಟ್ ಆಗಿದ್ದೇ ಸ್ಟಾರ್ ಕಿಡ್ ಗಳು.. ಸ್ಟಾರ್ ಕಿಡ್ಸ್ ಗಳ ಪೈಕಿ ನಟಿ ಆಲಿಯಾ ಭಟ್ ಸಹ ಒಬ್ಬರು..
ಇತ್ತೀಚೆಗೆ ಗರ್ಭಣಿಯಾಗಿರುವುದಾಗಿ ಖಾತ್ರಿಪಡಿಸಿದ್ದಾರೆ ಆಲಿಯಾ… ಅಂದ್ಹಾಗೆ ಆಲಿಯಾ ಭಟ್ ಹಾಗೂ ಪತಿ ರಣಬೀರ್ ಕಪೂರ್ ನಟನೆಯ ಬ್ರಹ್ಮಾಸ್ತ್ರ ಸಿನಿಮಾ ಬಾಲಿವುಡ್ ನ ಬಹುನಿರೀಕ್ಷೆಯ ಸಿನಿಮಾಗಳ ಪೈಕಿ ಒಂದು…
ಈ ಸಿನಿಮಾ ಈಗ ಬಾಲಿವುಡ್ ನ ನಸೀಬ್ ಬದಲಾಯಿಸಬಹುದೇನೋ ಎಂಬ ನಿರೀಕ್ಷೆ ಬಾಲಿವುಡ್ ನಲ್ಲಿ.. ಸಾಲು ಸಾಲು ಸಿನಿಮಾಗಳು ಫ್ಲಾಪ್ ಆಗ್ತಿವೆ.. ಹಿಟ್ ಸ್ಟಾರ್ ಗಳ ಸಿನಿಮಾಗಳು ನೆಲಕಚ್ಚುತ್ತಿವೆ.. ಬಾಕ್ಸ್ ಆಫೀಸ್ ನಲ್ಲಿ ಲಾಲ್ ಸಿಂಗ್ ಚಡ್ಡಾ , ರಕ್ಷಾಬಂಧನದಂತಹ ಬಾಲಿವುಡ್ ಸ್ಟಾರ್ ಗಳ ಸಿನಿಮಾಗಳೇ ಮಕಾಡೆ ಮಲಗಿವೆ..
ಅಂದ್ಹಾಗೆ ಲಾಲ್ ಸಿಂಗ್ ಚಡ್ಡಾ ವಿರುದ್ಧ ಬಾಯ್ಕಾಟ್ ಸಮರ ಜೋರಾಗಿಯೇ ಇತ್ತು.. ಆ ಹೊತ್ತಲ್ಲೇ ಬಾಯ್ಕಾಟ್ ಗೆಲ್ಲಾ ತಲೆ ಕೆಡಿಸಿಕೊಳ್ಬಾರ್ದು . ನೆಪೋಟಿಸಮ್ ಕಿಡ್ ಗಳ ( ಕರೀನಾ ) ಸಿನಿಮಾಗಳನ್ನ ನೋಡಲೇಬೇಡಿ ಎಂದಿದ್ದ ಕರೀನಾ ಮಾತು ಮತ್ತಷ್ಟು ನೆಟ್ಟಿಗರನ್ನ ರೊಚ್ಚಿಗೇಳಿಸಿತ್ತು.. ಇದು ಸಿನಿಮಾಗೆ ಮುಳುವಾಗಿತ್ತು ಕೂಡ..
ಈಗ ಕರೀನಾ ಮಾದರಿಯಲ್ಲೇ ಆಲಿಯಾ ಕೂಡ ಪತ್ತನ್ನ ಮೈಮೇಲೆ ಎಳೆದುಕೊಂಡಿದ್ದಾರೆ.. ಬಾಯ್ಕಾಟ್ ಅನ್ನುವವರು ನನ್ನ ಸಿನಿಮಾವನ್ನ ನೋಡಲೇಬೇಡಿ ಎಂದಿದ್ದಾರೆ… ಇವರ ಹೇಳಿಕೆ ಸೆಪ್ಟೆಂಬರ್ 9 ಕ್ಕೆ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ರಿಲೀಸ್ ಆಗ್ತಿರುವ ಬ್ರಹ್ಮಾಸ್ತ್ರಕ್ಕೆ ದೊಡ್ಡ ಹೊಡೆತವನ್ನೇ ನೀಡಲಿದೆ..
ಬಾಯ್ಕಾಟ್ ಎಂದು ಹೇಳುವವರು ನನ್ನ ಸಿನಿಮಾಗಳನ್ನು ನೋಡುವ ಅಗತ್ಯವಿಲ್ಲ, ನೋಡಬೇಡಿ ಎಂದಿದ್ದಾರೆ ಆಲಿಯಾ ಭಟ್.. ಆಲಿಯಾ ಅವರೇ ತಮ್ಮ ಸಿನಿಮಾವನ್ನು ನೋಡಬೇಡಿ ಎಂದು ಹೇಳಿದ್ದರಿಂದ, ಬ್ರಹ್ಮಾಸ್ತ್ರ ಸಿನಿಮಾವನ್ನು ನೋಡಬೇಡಿ ಎಂದು ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಕಮೆಂಟ್ ಗಳನ್ನ ಮಾಡ್ತಾ ಇದ್ದಾರೆ.. ಒಟ್ನಲ್ಲಿ ಬ್ರಹ್ಮಾಸ್ತ್ರದ ಮೇಲೆ ಆಲಿಯಾ ಹೇಳಿಕೆ ಯಾವ ರೀತಿ ಪರಿಣಾಮ ಬೀರಲಿದೆ ಅನ್ನೋದನ್ನ ಕಾದು ನೋಡ್ಬೇಕಿದೆ..