Avatar : 13 ವರ್ಷಗಳ ನಂತರ ಮತ್ತೆ ಥಿಯೇಟರ್ ಗಳಲ್ಲಿ ರಿಲೀಸ್ ಆಗಲಿದೆ ಅವತಾರ್
ಇಡೀ ವಿಶ್ವವೇ ಕಾಯುತ್ತಿರುವ ಮೋಸ್ಟ್ ಆಂಟಿಸಿಪೇಟೆಡ್ ಹಿಸ್ಟರಿ ಕ್ರಿಯೇಟರ್ 3D ಸಿನಿಮಾ Avatar 2 …. ಇಡೀ ವಿಶ್ವಾದ್ಯಂತ ಕಾತರದಿಂದ ಕಾಯ್ತಾಯಿದ್ದಾರೆ.. ಅವತಾರ್ ಭಾಗ ಒಂದು ರಿಲೀಸ್ ಆದ ಬರೋಬ್ಬರಿ 13 ವರ್ಷಗಳ ನಂತರ ಅವತಾರ್ ರಿಲೀಸ್ ಆಗ್ತಿದೆ..
2009ರಲ್ಲಿ ಹಾಲಿವುಡ್ ಲೆಜಂಡರಿ ಡೈರೆಕ್ಟರ್ ಜೇಮ್ಸ್ ಕ್ಯಾಮರೂನ್ ಸೃಷ್ಠಿಸಿದ ಅದ್ಭುತ ದೃಶ್ಯಕಾವ್ಯ ಅವತಾರ್ ಸಿನಿಮಾ.
ಇದರ ಮುಂದುವರಿದ ಭಾಗವೇ ‘ಅವತಾರ್: ದಿ ವೇ ಆಫ್ ವಾಟರ್’. ಚಿತ್ರವು ಡಿಸೆಂಬರ್ 16 ರಂದು ವಿಶ್ವದಾದ್ಯಂತ 160 ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ.
ಚಿತ್ರವು ಡಿಸೆಂಬರ್ 16 ರಂದು ಬಿಡುಗಡೆಯಾಗಲಿದೆ, 2024 ರಲ್ಲಿ ಅವತಾರ್ 3, 2026 ರಲ್ಲಿ ಅವತಾರ್ 4 ಮತ್ತು 2028 ರಲ್ಲಿ ಅವತಾರ್ 5 ಸಿನಿಮಾ ರಿಲೀಸ್ ಆಗಲಿದೆ.
ಇದೀಗ ಅವತಾರ್ 1 ಮತ್ತೆ ಥಿಯೇಟರ್ ಗಳಲ್ಲಿ ರಿಲೀಸ್ ಮಾಡಲು ಸಿನಿಮಾತಂಡ ಮುಂದಾಗಿದೆ.. ಈ ಹಿಂದೆ ಹಲವು ಸಲ ಈ ಸಿನಿಮಾ ಬಿಡುಗಡೆಯಾಗಿದೆ. ಇದೀಗ ಮತ್ತೊಮ್ಮೆ ಸಿನಿಮಾವನ್ನ ರಿಲೀಸ್ ಮಾಡಲು ಒಂದು ಕಾರಣವಿದೆ.. ಸೆಪ್ಟೆಂಬರ್ 13 ಕ್ಕೆ ಸಿನಿಮಾ ರೀ ರಿಲೀಸ್ ಆಗಲಿದೆ..
ಅವತಾರ್ ಗೆ ಹೊಸ ತಂತ್ರಜ್ಞಾನವನ್ನು ಅಳವಡಿಸಿ ಸಿನಿಮಾವನ್ನು ಬಿಡುಗಡೆ ಮಾಡಲಾಗುತ್ತಿದೆ. 4ಕೆ ಹೈ ಡೈನಾಮಿಕ್ ರೇಜ್ ಫಾರ್ಮೆಟ್ನಲ್ಲಿ ಈ ಸಿನಿಮಾವನ್ನು ರಿಲೀಸ್ ಮಾಡಲಾಗುತ್ತಿದೆ.
ಎರಡು ವಾರಗಳು ಮಾತ್ರವೇ ಈ ಸಿನಿಮಾ ಥಿಯೇಟರ್ ಗಳಲ್ಲಿ ಇರಲಿದೆ..