ವರ್ಸಟೈಲ್ ನಟ ಡಾಲಿ ಧನಂಜಯ್ ಹೀರೋ , ವಿಲ್ಲನ್ ಎರೆಡೂ ಪಾತ್ರಗಳಲ್ಲೂ ಮಿಂಚಿ ಗೆದ್ದ ನಟ.. ತೆಲುಗಿನಲ್ಲೂ ಮಿಂಚಿರುವ ಡಾಲಿ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ..
ಇತ್ತೀಚೆಗೆ ಡಾಲಿ ಅವರ ಮತ್ತೊಂದು ಸಿನಿಮಾ ಘೋಷಣೆಯಾಗಿದೆ.. ಅದೂ ಸಹ ವಿಜಯ್ ಕಿರಗಂದೂರು ಅರ್ಪಿಸುವ ಕೆ.ಆರ್.ಜಿ ಸ್ಟುಡಿಯೋಸ್ ಲಾಂಛನದಲ್ಲಿ ಸಿನಿಮಾ ಮೂಡಿಬರುತ್ತಿದೆ. ಕಾರ್ತಿಕ್ ಹಾಗೂ ಯೋಗಿ ಜಿ ರಾಜ್ ಸಿನಿಮಾಗೆ ಬಂಡವಾಳ ಹೂಡುತ್ತಿದ್ದಾರೆ..
ಸಿನಿಮಾಗೆ ‘ಉತ್ತರಕಾಂಡ’ ಎಂಬ ಟೈಟಲ್ ಇಡಲಾಗಿದೆ… ಈ ಸಿನಿಮಾಗೆ ಡಾಲಿ ನಾಯಕ.. ಅಂದ್ಹಾಗೆ ಈ ಹಿಂದೆ ಡಾಲಿ KRG ಸ್ಟುಡಿಯೋಸ್ ನಡಿ ನಟಿಸಿದ್ದ ರತ್ನನ್ ಪ್ರಪಂಚ ಸಿನಿಮಾ ಸೂಪರ್ ಹಿಟ್ ಆಗಿತ್ತು..
ಇದೇ ಕಾಂಬಿನೇಷನ್ ನಲ್ಲಿ ಹೊಯ್ಸಳ ಸಿನಿಮಾ ಕೂಡ ಬರುತ್ತಿದೆ.. ಇದೀಗ ಮೂರನೇ ಸಿನಿಮಾ ‘ಉತ್ತರಕಂಡ’ ಘೋಷಣೆಯಾಗಿದೆ..