Kanishka Soni : ತನ್ನನ್ನ ತಾನೇ ಮದುವೆಯಾಗಿದ್ದಕ್ಕೆ ಕಾರಣ ಬಿಚ್ಚಟ್ಟ ನಟಿ ಕನಿಷ್ಕಾ..!!!
ವಿದೇಶಗಳಲ್ಲಿ ಈ ಸೋಲೋಗಾಮಿ ಅನ್ನೋ ಟ್ರೆಂಡ್ ಹಳೇದು.. ಕಾಮನ್.. ಆದ್ರೆ ಭಾರತದಲ್ಲಿ ಇದು ಒಂದ್ ರೀತಿ ವಿಲಕ್ಷಣ ಅನ್ಸೋದು ಸಹಜವೇ… ಇಂತವುಗಳನ್ನ ಜನ ಒಪ್ಪುವುದು ಕಡಿಮೆಯೇ..
ಸೋಲೋಗಾಮಿ ಅಂದ್ರೆ ಮತ್ತೊಂದು ಸುಲಭಾರ್ಥದಲ್ಲಿ ತಮ್ಮನ್ನ ತಾವೇ ಮದ್ವೆಯಾಗೋದು ಅಂತ ಅರ್ಥ.. ಭಾರತದಲ್ಲಿ ಗುಜರಾತಿನಲ್ಲಿ ಕ್ಷಮಾ ಬಿಂದು ಎಂಬ ಯುವತಿ ತನ್ನನ್ನ ತಾನೇ ಮದುವೆಯಾಗಿದ್ದಳು.. ಇತ್ತೀಚೆಗೆ ನಟಿ ಕನಿಷ್ಕಾ ಸೋನಿ ತಮ್ಮನ್ನ ತಾವೇ ಮದುವೆಯಾಗಿ ಸುದ್ದಿಯಾಗಿದ್ದರು..
ಹಿಂದಿಯ ದಿಯಾ ಔರ್ ಬಾತಿ ಹಮ್ , ಪವಿತ್ರ ರಿಶ್ತಾ ಸೇರಿದಂತೆ ಹಲವಾರು ಧಾರಾವಾಹಿಗಳಲ್ಲಿ ಕನಿಷ್ಕಾ ನಟಿಸಿದ್ದು , ಇವರು ತಮ್ಮನ್ನ ತಾವೇ ಮದುವೆಯಾಗಿದ್ದಾಗಿ ಘೋಷಿಸಿದ್ದರು.. ಇತ್ತೀಚೆಗೆ ಸಂದರ್ಶನ ನೀಡಿದ್ದು ಈ ಸಂದರ್ಶನದಲ್ಲಿ ತಮ್ಮನ್ನ ತಾವೇ ಮದುವೆಯಾಗಿದ್ದಕ್ಕೆ ಕಾರಣ ಬಿಚ್ಚಿಟ್ಟಿದ್ದಾರೆ..
ನಾನು ಮುಂಬೈಗೆ ಬಂದಾಗಿನಿಂದಲೂ ಹಲವಾರು ಹುಡುಗರು ಪ್ರೊಪೋಸ್ ಮಾಡಿದ್ದಾರೆ. ಸುಮಾರು 1200-1300 ಹುಡುಗರನ್ನು ನಾನು ಈವರೆಗೆ ರಿಜೆಕ್ಟ್ ಮಾಡಿದ್ದೇನೆ. ಈ ಹಿಂದೆ ಕೆಲವು ರಿಲೇಶನ್ ಷಿಪ್ ಗಳಲ್ಲಿ ಇದ್ದೆ. ಆದರೆ ಅವ್ಯಾವುವೂ ಅಡ್ ಜಸ್ಟ್ ಆಗಲಿಲ್ಲ.. ಬಹಳ ಹಿಂಸಾತ್ಮಕವಾದ, ಸಂಬಂಧಗಳಾಗಿದ್ದವು.
ಅಷ್ಟೇ ಅಲ್ಲ ಒಬ್ಬ ಸ್ಟಾರ್ ನಟ ನನ್ನನ್ನು ವಿವಾಹವಾಗುವಂತೆ ಕೇಳಿದ್ದ ಆದರೆ ಎರಡೇ ತಿಂಗಳಲ್ಲಿ ಆತನ ನಿಜ ಬಣ್ಣ ಬಯಲಾಯ್ತು. ಆತನದ್ದು ಬಹಳ ಹಿಂಸಾತ್ಮಕ ಪ್ರವೃತ್ತಿ. ಪ್ರತಿ ಹದಿನೈದು ನಿಮಿಷಕ್ಕೆ ಆತ ಯಾವುದಾದರೂ ಒಂದು ಕಾರಣಕ್ಕೆ ಕೋಪ ಮಾಡಿಕೊಳ್ತಿದ್ದ.. ಒಂದೂವರೆ ವರ್ಷದಲ್ಲಿ ನಾನು ಆ ಸಂಬಂಧದಿಂದ ಹೊರಗೆ ಬಂದೆ ಆದರೆ ಆ ಕೆಟ್ಟ ನೆನಪು ಮಾಸಲು ಐದು ವರ್ಷ ಬೇಕಾಯಿತು ಎಂದು ತಾವು ಹೊಂದಿದ್ದ ರಿಲೀಷನ್ ಶಿಪ್ ಗಳ ಬಗ್ಗೆ ಕಹಿ ಅನುಭವಗಳನ್ನ ಹಂಚಿಕೊಂಡಿದ್ದಾರೆ ಕನಿಷ್ಕಾ..
ಅಷ್ಟೇ ಅಲ್ದೇ , ಒಮ್ಮೆ ಒಂದು ಧಾರಾವಾಹಿಯಿಂದ ನನ್ನನ್ನು ಹೊರಗೆ ಕಳಿಸಿಬಿಟ್ಟಿದ್ದರು. ಶೂಟಿಂಗ್ ಸಮಯದಲ್ಲಿ ನಾನು ನಿರ್ಮಾಪಕನ ರೂಮಿಗೆ ಹೋಗಲು ನಿರಾಕರಿಸಿದ್ದರಿಂದ ನನ್ನನ್ನು ಶೂಟಿಂಗ್ನಿಂದ ಹೊರಗೆ ಕಳಿಸಲಾಯ್ತು. ಇನ್ನೊಮ್ಮೆ 2008 ರಲ್ಲಿ ನಿರ್ಮಾಪಕನೊಬ್ಬ ಕರೆ ಮಾಡಿ ಮನೆಗೆ ಬಾ ನಾನು ನಿನ್ನ ಸೊಂಟ ನೋಡಬೇಕು ಎಂದಿದ್ದ. ನಾನು, ಸಿನಿಮಾದಲ್ಲಿ ಬೇಕಾದರೆ ನನ್ನ ಸೊಂಟದ ಪ್ರದರ್ಶನ ಮಾಡುತ್ತೇನೆ ಎಂದೆ. ಆದರೆ ಆತ ಒಪ್ಪಲಿಲ್ಲ, ಮನೆಗೆ ಬಂದು ತೋರಿಸು ಎಂದ ನಾನು ಆ ಸಿನಿಮಾದಿಂದಲೇ ಹೊರಗೆ ಬಂದೆ. ಆ ನಂತರ ನನಗೆ ಅಕ್ಷಯ್ ಕುಮಾರ್ ಸಿನಿಮಾದಲ್ಲಿ ಐಟಂ ಹಾಡಿನ ಅವಕಾಶ ಬಂತು ಆದರೆ ಅದು ಕೈ ತಪ್ಪಿಹೋಯಿತು. ಬಳಿಕ ತಮಿಳಿನ ಸಿನಿಮಾ ಒಂದರಲ್ಲಿ ಐಟಂ ಡ್ಯಾನ್ಸ್ ಮಾಡಿದೆ ಎಂದು ಸಿನಿಮಾರಂಗದ ಕರಾಳ ಮುಖವಾಡ ಬಿಚ್ಚಿಟ್ಟಿದ್ದಾರೆ ಕನಿಷ್ಕಾ.
ಅಂದ್ಹಾಗೆ ಈ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ಅಧಿಕೃತವಾಗಿ ಮದುವೆಯನ್ನ ಘೋಷಣೆ ಮಾಡುವಾಗ “ನನ್ನನ್ನ ನಾನೇ ಮದುವೆಯಾದೆ.. ನನ್ನ ಎಲ್ಲಾ ಕನಸುಗಳನ್ನ ನಾನೇ ಡೀಡೇರಿಸಿಕೊಂಡಿದ್ದೇನೆ.. ನಾನು ಪ್ರೀತಿಸುವ ಕೈಕ ವ್ಯಕ್ತಿ ನಾನೇ.. ನನ್ನಲ್ಲಿ ಉದ್ಭವಿಸುವ ಎಲ್ಲ ಪ್ರಶ್ನೆಗಳಿಗೆ ಉತ್ತರ ಕೊಡುವುದೂ ಕೂಡ ನಾನೇ. ಪುರುಷನ ಅವಶ್ಯಕತೆ ನನಗೆ ಎಂದಿಗೂ ಬಂದಿಲ್ಲ. ಒಂಟಿಯಾಗಿಯೇ ನಾನು ನಾನು ಈವರೆಗೆ ಖುಷಿಯಾಗಿಯೇ ಇದ್ದೀನಿ. ನಾನು ದೇವತೆ, ಗಟ್ಟಿ ಹಾಗೂ ಶಕ್ತಿಶಾಲಿ ಯುವತಿ. ಶಿವ ಮತ್ತು ಶಕ್ತಿ ಎರಡೂ ನನ್ನಲ್ಲಿದ್ದಾರೆ” ಎಂದು ಬರೆದುಕೊಂಡಿದ್ದರು.