Liger : ಸಿನಿಮಾದ ಮೊದಲ ವಿಮರ್ಶೆ ಔಟ್…!! ಸಿನಿಮಾಗೆ ಎಷ್ಟು ಸ್ಟಾರ್..??
ಲೈಗರ್ ಸಿನಿಮಾ ಪ್ರಸ್ತುತ ಭಾರತೀಯ ಸಿನಿಮಾರಂಗದ ಬಹುನಿರೀಕ್ಷೆಯ ಸಿನಿಮಾವಾಗಿದೆ.. ಈ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆಯಿದೆ.. ಸೆನ್ಷೇಷನಲ್ ಸ್ಟಾರ್ ವಿಜಯ್ ದೇವರಕೊಂಡ ಹಾಟ್ ಬ್ಯೂಟಿ ಅನನ್ಯಾ ಪಾಂಡೆ , ರಮ್ಯಾ ಕೃಷ್ಣನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಸಿನಿಮಾದಲ್ಲಿ ಸಾಕಷ್ಟು ವಿಶೇಷತೆಗಳಿವೆ.. ಅಂತರಾಷ್ಟ್ರೀಯ ಮಟ್ಟದಲ್ಲಿ ಸಿನಿಮಾ ಸದ್ದು ಮಾಡ್ತಿದ್ದು ಟ್ರೇಲರ್ ಸಾಕಷ್ಟು ಕ್ರೇಜ್ ಹುಟ್ಟುಹಾಕಿದೆ…
ಸಿನಿಮಾದಲ್ಲಿ ಇಂಟರ್ ನ್ಯಾಷನಲ್ ಫೈಟರ್ ಟೈಸನ್ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.. ಪುರಿ ಜಗನ್ನಾಥ್ ಆಕ್ಷನ್ ಕಟ್ ಹೇಳುತ್ತಿರುವ ಸಿನಿಮಾ ವಿಶ್ವಾದ್ಯಂತ ತೆಲುಗು , ಕನ್ನಡ , ತಮಿಳು , ಹಿಂದಿ , ಮಲಯಾಳಂ ನಲ್ಲಿ ರಿಲೀಸ್ ಆಗಲಿದೆ. ಸಿನಿಮಾ ಆಗಸ್ಟ್ 25 ಕ್ಕೆ ತೆರೆಗೆ ಬರಲಿದ್ದು , ಸೆನ್ಸಾರ್ ಮಂಡಳಿಗೂ ಹೋಗಿ ಬಂದಾಗಿದೆ.. ಅಂದ್ಹಾಗೆ ಸಿನಿಮಾದ ಬಗ್ಗೆ ಮೊದಲ ರಿವ್ಯೂವ್ ಕೂಡ ಸಿಕ್ಕಾಗಿದೆ.
ಸೆನ್ಸಾರ್ ಬೋರ್ಡ್ ಸದಸ್ಯರಾದ ಉಮೈರ್ ಸಂದು ಈ ಚಿತ್ರದ ವಿಮರ್ಶೆ ಮಾಡಿದ್ದು, 3 ಸ್ಟಾರ್ ಕೊಟ್ಟಿದ್ದಾರೆ. “ ಲೈಗರ್ ಸಿನಿಮಾ ಸೀಟಿ ಮಾರ್ ಎಂಟರ್ಟೈನರ್. ಇದು ವಿಜಯ್ ದೇವರಕೊಂಡ ಒನ್ ಮ್ಯಾನ್ ಶೋ… ಪ್ರೇಕ್ಷಕರ ಹೃದಯ ಗೆಲ್ಲುವಲ್ಲಿ ವಿಜಯ್ ದೇವರಕೊಂಡ ಯಶಸ್ವಿಯಾಗಿದ್ದಾರೆ. ಚಿತ್ರದಲ್ಲಿ ಅತ್ಯುತ್ತಮವಾದ ಸಂಟ್ಗಳಿವೆ. ನಿರ್ದೇಶನ ಉತ್ತಮವಾಗಿದೆ. ರಮ್ಯಾ ಕೃಷ್ಣ ವಿಶೇಷವಾದ ಪಾತ್ರ ಸರ್ಪ್ರೈಸ್ ಎನಿಸುತ್ತದೆ ”ಎಂದು ಬರೆದುಕೊಂಡಿದ್ದಾರೆ.
ಅಂದ್ಹಾಗೆ ವಿಜಯ್ ದೇವರಕೊಂಡ ಲೈಗರ್ ಸಿನಿಮಾಗೂ ಬಾಯ್ಕಾಟ್ ಬಿಸಿ ತಟ್ಟುವ ಸಾಧ್ಯತೆ ಇದೆ.. ಈ ಹಿಂದೆ ಸಂದರ್ಶನವೊಂದ್ರಲ್ಲಿ ಲಾಲ್ ಸಿಂಗ್ ಚಡ್ಡಾ ಸಿನಿಮಾವನ್ನ ವಿಜಯ್ ದೇವರಕೊಂಡ ಹೊಗಳಿದ್ದೇ ಈಗ ಈ ಸಿನಿಮಾಗೆ ಮುಳುವಾಗುವ ಸಾಧ್ಯತೆಯಿದೆ…