Trisha krishnan : ರಾಜಕೀಯಕ್ಕೆ ತ್ರಿಶಾ…?? ನಟಿಯ ತಾಯಿ ಹೇಳಿದ್ದೇನು..??
ಕನ್ನಡದ ಪವರ್ ಸೇರಿದಂತೆ , ತೆಲುಗು , ತಮಿಳು , ಹಿಂದಿ ಹೀಗೆ ಬಹುಭಾಷೆಗಳಲ್ಲಿ ಸ್ಟಾರ್ ನಟರ ಜೊತೆಗೆ ತೆರೆ ಹಂಚಿಕೊಂಡು ಸೈ ಎನಿಸಿಕೊಂಡಿರುವ ಸೌತ್ ಇಂಡಿಯಾದ ಸ್ಟಾರ್ ನಟಿ ತ್ರಿಶಾ ಕೃಷ್ಣನ್ ಇದೀಗ ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ..
ರಾಜಕೀಯದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯುತ್ತಿದ್ದಾರೆಂಬ ಸುದ್ದಿ ಭಾರೀ ಸೌಂಡ್ ಮಾಡ್ತಿದೆ.. ಅದ್ರಲ್ಲೂ ತ್ರಿಶಾ ಕಾಂಗ್ರೆಸ್ ಸೇರಲಿದ್ದಾರೆ ಎನ್ನುವ ಚರ್ಚೆ ಜೋರಿದೆ.. ಅಂದ್ಹಾಗೆ ಸಿನಿಮಾ ರಂಗಕ್ಕೂ ರಾಜಕೀಯಕ್ಕೂ ಅದೇನೋ ನಂಟಿದೆ.. ಹಲವು ತಾರೆಯರು ರಾಜಕೀಯಕ್ಕೆ ಧುಮಿಕಿ ಸೋತೋರೂ ಇದ್ದಾರೆ… ಗೆದ್ದವರು ಇದ್ದಾರೆ..
ಅಂದ್ಹಾಗೆ ತಮಿಳು ನಾಡಿನಲ್ಲಿ ಅತೀ ಹೆಚ್ಚು ಬಾರಿ ಮುಖ್ಯಮಂತ್ರಿಗಳು ಆಗಿದ್ದು ಸಿನಿಮಾ ರಂಗದವರೇ.. ಈಗಾಗಲೇ ಅವರು ಕಾಂಗ್ರೆಸ್ ಪಕ್ಷವನ್ನು ಸಂಪರ್ಕಿಸಿದ್ದು, ಮುಂದಿನ ಚುನಾವಣೆಯಲ್ಲಿ ಇದೇ ಪಕ್ಷದಿಂದಲೇ ಸ್ಪರ್ಧಿಸುತ್ತಾರೆ ಎಂದು ಹೇಳಲಾಗುತ್ತಿದೆ.
ಇದೀಗ ಬಗ್ಗೆ ನಟಿ ತ್ರಿಶಾ ತಾಯಿ ಅವರು ಮಾತನಾಡಿದ್ದಾರೆ..
ರಾಜಕೀಯಕ್ಕೆ ಎಂಟ್ರಿ ಕೊಡುತ್ತಿರುವ ಬಗ್ಗೆ ತ್ರಿಶಾ ಇದೂವರೆಗೂ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ. ಆದರೆ, ತ್ರಿಶಾ ತಾಯಿ ಉಮಾ ಕೃಷ್ಣನ್ ಈ ಬಗ್ಗೆ ಉತ್ತರಿಸಿದ್ದಾರೆ.. “ ನನ್ನ ಮಗಳು ಯಾವುದೇ ರಾಜಕೀಯ ಪಕ್ಷವನ್ನು ಸೇರುವುದಿಲ್ಲ. ತ್ರಿಶಾ ಸಿನಿಮಾಗಳಲ್ಲಿ ಅಭಿನಯ ಮುಂದುವರೆಸಲಿದ್ದಾರೆ. ತ್ರಿಶಾಗೆ ಯಾವುದೇ ರಾಜಕೀಯ ಹಂಬಲ ಇಲ್ಲ ಎಂದು ಹೇಳುವ ಮೂಲಕ ಗಾಳಿ ಸುದ್ದಿಗಳಿಗೆ ತೆರೆ ಎಳೆದಿದ್ದಾರೆ..
ಪ್ರಸ್ತುತ ತ್ರಿಶಾ ಭಾರತೀಯ ಸಿನಿಮಾರಂಗದ ಬಹುನಿರೀಕ್ಷೆಯ ಬಿಗ್ ಬಜೆಟ್ ಪ್ಯಾನ್ ಇಂಡಿಯನ್ ಸಿನಿಮಾ ಪೊನ್ನಿಯನ್ ಸೆಲ್ವನ್-1 ರಲ್ಲಿ ಬ್ಯುಸಿಯಿದ್ದಾರೆ. ಈ ಸಿನಿಮಾದ ಪಾರ್ಟ್ 2 ಸಹ ಬರಲಿದೆ.. ಅಂದ್ಹಾಗೆ ತ್ರಿಶಾಗೆ ಈಗ 39 ವರ್ಷ.. ಮುಂದಿನ ವರ್ಷ ಅವರು 40 ನೇ ವಸಂತಕ್ಕೆ ಕಾಲಿಡಲಿದ್ದಾರೆ… ನಂತರ ಸಿನಿಮಾರಂಗದಲ್ಲಿ ನಾಯಕಿಯ ಪಾತ್ರಗಳು ಸಿಗುವುದು ಕಡಿಮೆಯಾಗಬಹುದು.. ಮಹಿಳಾ ಪ್ರಧಾನ ಸಿನಿಮಾಗಳಲ್ಲೇ ತ್ರಿಶಾ ಕಾಣಿಸಿಕೊಳ್ಬೇಕು.. ಹೀಗಾಗಿ ರಾಜಕೀಯಕ್ಕೆ ಎಂಟ್ರಿ ಕೊಟ್ಟು ಅಲ್ಲಿ ಹೊಸ ಬದುಕು ಆರಂಭಿಸುತ್ತಾರಾ ಎಂಬೆಲ್ಲಾ ಚರ್ಚೆಗಳು ಜೋರಾಗಿವೆ..