KL Rahul – Athiya Shetty : ಅತಿ ಶೀಘ್ರದಲ್ಲೇ ಸ್ಟಾರ್ ಜೋಡಿಯ ಮದುವೆ..!!!
ಕನ್ನಡಿದ , ಟೀಮ್ ಇಂಡಿಯಾದ ಸ್ಟಾರ್ ಕ್ರಿಕೆಟಿಗ ಕೆ ಎಲ್ ರಾಹುಲ್ ಹಾಗೂ ಕರ್ನಾಟಕ ಮೂಲದ ಬಾಲಿವುಡ್ ನ ಸ್ಟಾರ್ ನಟ ಸುನಿಲ್ ಶೆಟ್ಟಿ ಪುತ್ರಿ ಆಥಿಯಾ ಶೆಟ್ಟಿ ಅವರ ಪ್ರೇಮ್ ಕಹಾನಿ ಈಗ ಗುಟ್ಟಾಗಿ ಏನೂ ಉಳಿದಿಲ್ಲ..
ಅಂದ್ಹಾಗೆ ಕೆಲ ದಿನಗಳಿಂದಲೂ ಈ ಜೋಡಿ ಶೀಘ್ರದಲ್ಲೇ ಮದುವೆಯಾಗಲಿದೆ ಎಂಬ ಸುದ್ದಿ ಭಾರೀ ಸೌಂಡ್ ಮಾಡ್ತಿದೆ..
ರಾಹುಲ್ ಸದ್ಯ ಜಿಂಬಾಬ್ವೆಯಲ್ಲಿ ತಮ್ಮ ನಾಯಕತ್ವದಲ್ಲಿ ಮೊದಲ ಸರಣಿ ಗೆದ್ದ ನಂತರ ಇದೀಗ ನೇರವಾಗಿ ದುಬೈ ಕಡೆ ಪ್ರಯಾಣ ಬೆಳೆಸಿದ್ದಾರೆ.. ಏಷ್ಯಾ ಕಪ್ ಟೂರ್ನಿಯಲ್ಲಿ ಭಾಗವಹಿಸಲು ದುಬೈಗೆ ಹಾರಿದ್ದಾರೆ.
ಇದೆಲ್ಲದರ ನಡುವೆ ನಟಿ ಆತಿಯಾ ಶೆಟ್ಟಿ ಮತ್ತು ಕೆಎಲ್ ರಾಹುಲ್ ಮದುವೆಯ ಸುದ್ದಿ ಮತ್ತೊಮ್ಮೆ ಬಿಟೌನ್ ಸುತ್ತ ಗಿರಕಿ ಹೊಡೆಯುತ್ತಿದೆ.. ಆದ್ರೆ ಅಧಿಕೃತವಾಗಿ ಈ ಜೋಡಿ ಮದುವೆ ಬಗ್ಗೆ ಖಚಿತಪಡಿಸಿಲ್ಲ..