Liger : ಆವರೇಜ್ ಕೂಡ ಅಲ್ಲ , ಟ್ವಿಟ್ಟರ್ ನಲ್ಲಿ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ..!!!
ಸುಮಾರು 2 ವರ್ಷಗಳಿಂದ ಸಿಕ್ಕಾಪಟ್ಟೆ ಕ್ರೇಜ್ ಹುಟ್ಟುಹಾಕಿದ್ದ ಬಹುನಿರೀಕ್ಷೆಯ ಪ್ಯಾನ್ ಇಂಡಿಯನ್ ಸಿನಿಮಾ ಲೈಗರ್ ಇದೀಗ ಕೊನೆಗೂ ರಿಲೀಸ್ ಆಗಿದೆ..
ವಿಶ್ವಾದ್ಯಂತ ವಿಜಯ್ ದೇವರಕೊಂಡ ನಟನೆ , ಪುರಿ ಜಗನ್ನಾಥ್ ನಿರ್ದೇಶನದ ಸಿನಿಮಾ ತೆಲುಗು , ಹಿಂದಿ , ಕನ್ನಡ , ತಮಿಳು ಮಲಯಾಳಂನಲ್ಲಿ ಬಹಳ ಅದ್ಧೂರಿಯಾಗಿಯೇ ರಿಲೀಸ್ ಆಗಿದೆ..
ಸಿನಿಮಾದಲ್ಲಿ ಸಾಕಷ್ಟು ವಿಶೇಷತೆಗಳಿದೆ.. ಸಿನಿಮಾದ ಟ್ರೇಲರ್ ಹಾಡು ಸೆನ್ಷೇಷನ್ ಸೃಷ್ಟಿಸಿದ್ದವು.. ಸಿನಿಮಾತಂಡ ಇಷ್ಟುದಿನಗಳ ಕಾಲ ಭರ್ಜರಿ ಪ್ರಚಾರವನ್ನೇ ನಡೆಸಿದ್ದು ಕೊನೆಗೂ ಸಿನಿಮಾ ರಿಲೀಸ್ ಆಗಿದೆ..
ಬ್ಯಾಕ್ ಟು ಬ್ಯಾಕ್ ಬಾಲಿವುಡ್ ಸಿನಿಮಾಗಳು ಫ್ಲಾಪ್ ಆಘ್ತಿರುವ ಬೆನ್ನಲ್ಲೇ ಮತ್ತೊಂದು ಸೌತ್ ಸಿನಿಮಾ ದಾಖಲೆ ಸೃಷ್ಟಿ ಮಾಡಲು ಹೊರಟಿದೆ.. ಆದ್ರೆ ಫಸ್ಟ್ ಡೇ ಫಸ್ಟ್ ಶೋ ನಂತರ ಸೋಷಿಯಲ್ ಮೀಡಿಯಾ , ಯೂಟ್ಯೂಬರ್ ಗಳು , ವಿಮರ್ಶಕರ ರಿವ್ಯೂವ್ ಗಳು ಹೊರಬಂದಿದ್ದು , ಒಂದು ರೀತಿ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ..
ಕೆಲವರು ಸಿನಿಮಾ ಸೂಪರ್ ಎಂದ್ರೆ ಇನ್ನೂ ಕೆಲ ಟ್ವಿಟ್ಟರ್ ಬಳಕೆದಾರರು ಸಿನಿಮಾವನ್ನ ಕಟುವಾಗಿ ಬೈದಿದ್ದಾರೆ ಕೂಡ.. ವಿಜಯ್ ದೇವರಕೊಂಡ ಶ್ರಮವನ್ನ ಕಸದ ಬುಟ್ಟಿಗೂ ಹೋಲಿಸಿರುವಂತಹದ್ದು ನಡೆದಿದೆ..
ಇನ್ನೂ ಅನನ್ಯಾ ಪಾಂಡೆ ನಟನೆಯನ್ನೂ ಕೂಡ ಹಲವರು ತೆಗಳಿದ್ದಾರೆ. ವಿಜಯ್ ದೇವರಕೊಂಡ ಬಾಡಿ ಟ್ರಾನ್ಸ್ ಫರ್ಮೇಶನ್ ಹೊರತುಪಡಿಸಿ ಸಿನಿಮಾದಲ್ಲಿ ಇನ್ನೇನೂ ಚೆನ್ನಾಗಿಲ್ಲ. ಅನನ್ಯಾ ಅತ್ಯಂತ ಕೆಟ್ಟದಾಗಿ ನಟಿಸಿದ್ದಾರೆ ಎಂದೆಲ್ಲಾ ಕಮೆಂಟ್ ಮಾಡ್ತಿದ್ದು , ಸಿನಿಮಾವನ್ನ ಆವರೇಜ್ ಎಂದು ಹಲವರು ಕರೆದಿದ್ದಾರೆ..
ಅಷ್ಟೇ ಅಲ್ಲ ಅನೇಕ ಟ್ವಿಟ್ಟರ್ ಬಳಕೆದಾರರು ಸಿನಿಮಾದ ನಿರ್ದೇಶಕ ಪುರಿ ಜಗನ್ನಾಥ್ ಅವರಿಂದಲೇ ಸಿನಿಮಾ ಹಾಳಾಗಿದ್ದು ಅಂತಲೂ ಕಾಮೆಂಟ್ ಗಳನ್ನ ಮಾಡ್ತಿದ್ದಾರೆ..