Liger : ಲೈಗರ್ ಗೆ ಪೈರೆಸಿ ಕಾಟ್ – ಸಿನಿಮಾ ಆನ್ ಲೈನ್ ನಲ್ಲಿ ಲೀಕ್ ..!!
ಸುಮಾರು 2 ವರ್ಷಗಳಿಂದ ಸಿಕ್ಕಾಪಟ್ಟೆ ಕ್ರೇಜ್ ಹುಟ್ಟುಹಾಕಿದ್ದ ಬಹುನಿರೀಕ್ಷೆಯ ಪ್ಯಾನ್ ಇಂಡಿಯನ್ ಸಿನಿಮಾ ಲೈಗರ್ ಇದೀಗ ಕೊನೆಗೂ ರಿಲೀಸ್ ಆಗಿದೆ..
ವಿಶ್ವಾದ್ಯಂತ ವಿಜಯ್ ದೇವರಕೊಂಡ ನಟನೆ , ಪುರಿ ಜಗನ್ನಾಥ್ ನಿರ್ದೇಶನದ ಸಿನಿಮಾ ತೆಲುಗು , ಹಿಂದಿ , ಕನ್ನಡ , ತಮಿಳು ಮಲಯಾಳಂನಲ್ಲಿ ಬಹಳ ಅದ್ಧೂರಿಯಾಗಿಯೇ ರಿಲೀಸ್ ಆಗಿದೆ..
ಪೂರಿ ಜಗನ್ನಾಥ್ ನಿರ್ದೇಶಿಸಿದ, ಲಿಗರ್ ಪ್ರಮುಖ ಪಾತ್ರಗಳಲ್ಲಿ ವಿಜಯ್ ದೇವರಕೊಂಡ, ಅನನ್ಯ ಪಾಂಡೆ, ರಮ್ಯಾ ಕೃಷ್ಣ ಮತ್ತು ರೋನಿತ್ ರಾಯ್ ನಟಿಸಿದ್ದಾರೆ..
ಸಿನಿಮಾದಲ್ಲಿ ಸಾಕಷ್ಟು ವಿಶೇಷತೆಗಳಿದೆ.. ಸಿನಿಮಾದ ಟ್ರೇಲರ್ ಹಾಡು ಸೆನ್ಷೇಷನ್ ಸೃಷ್ಟಿಸಿದ್ದವು.. ಸಿನಿಮಾತಂಡ ಇಷ್ಟುದಿನಗಳ ಕಾಲ ಭರ್ಜರಿ ಪ್ರಚಾರವನ್ನೇ ನಡೆಸಿದ್ದು ಕೊನೆಗೂ ಸಿನಿಮಾ ರಿಲೀಸ್ ಆಗಿದೆ..
ಬ್ಯಾಕ್ ಟು ಬ್ಯಾಕ್ ಬಾಲಿವುಡ್ ಸಿನಿಮಾಗಳು ಫ್ಲಾಪ್ ಆಘ್ತಿರುವ ಬೆನ್ನಲ್ಲೇ ಮತ್ತೊಂದು ಸೌತ್ ಸಿನಿಮಾ ದಾಖಲೆ ಸೃಷ್ಟಿ ಮಾಡಲು ಹೊರಟಿದೆ.. ಆದ್ರೆ ಫಸ್ಟ್ ಡೇ ಫಸ್ಟ್ ಶೋ ನಂತರ ಸೋಷಿಯಲ್ ಮೀಡಿಯಾ , ಯೂಟ್ಯೂಬರ್ ಗಳು , ವಿಮರ್ಶಕರ ರಿವ್ಯೂವ್ ಗಳು ಹೊರಬಂದಿದ್ದು , ಒಂದು ರೀತಿ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ..
ಇದೆಲ್ಲದರ ನಡುವೆ ಸಿನಿಮಾಗೆ ಮತ್ತೊಂದು ತಲೆ ನೋವು ಎದುರಾಗಿದೆ.. ಪೈರೆಸಿ ಕಾಟ ದುರಿಸುತ್ತಿದೆ.. ಸಿನಿಮಾ ರಿಲೀಸ್ ಆದ ದಿನವೇ ಆನ್ ಲೈನ್ ನಲ್ಲಿ ಲೀಕ್ ಆಗಿದೆ.
HD ಯಲ್ಲಿ ಸಿನಿಮಾ ಲೀಕ್ ಆಗಿರೋದಾಗಿ ಮಾಹಿತಿ ಸಿಕ್ಕಿದೆ.. ತಮಿಳುರಾಕರ್ಸ್, ಫಿಲ್ಮಿಜಿಲ್ಲಾ, ಮೂವಿರುಲ್ಜ್ ಮತ್ತು ಇನ್ನೂ ಹಲವು ವೆಬ್ ಸೈಟ್ ಗಳಲ್ಲಿ ಸಿನಿಮಾ ಲೀಕ್ ಆಗಿದೆ..
ಥಿಯೇಟರ್ ಗಳಲ್ಲಿ ರಿಲೀಸ್ ಆದ ದಿನವೇ ಆನ್ ಲೈನ್ ನಲ್ಲಿ ಸಿನಿಮಾ ಸೋರಿಕೆಯಾಗಿರೋದು ಸಿನಿಮಾಗೆ ದೊಡ್ಡ ಹೊಡೆತ ನೀಡಿದೆ.. ಅಂದ್ಹಾಗೆ ಸಿನಿಮಾ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ.., ಸಿನಿಮಾವನ್ನ ಕೆಲವರು ಸೂಪರ್ ಅಂದ್ರೆ ಕೆಲವರು ಆವರೇಜ್ ಎಂದು ಕರೆದಿದ್ದಾರೆ.. ಇನ್ನೂ ಬಹುತೇಕರು.. ಸಿನಿಮಾ ಆವರೇಜ್ ಸಹ ಇಲ್ಲ ಡಿಸಾಸ್ಟರ್ ಅಂತ ಕರೆಯುತ್ತಿದ್ದಾರೆ…
ಅಂದ್ಹಾಗೆ ಅಮಿರ್ ಖಾನ್ ಅಭಿನಯದ ಲಾಲ್ ಸಿಂಗ್ ಚಡ್ಡಾ ಬೆಂಬಲಿಸಿದಕ್ಕೆ ಅವರ ಸಿನಿಮಾವನ್ನ ಸಹ ಬಹಿಷ್ಕರಿಸಬೇಕೆಂದು ಲೈಗರ್ ಗೂ ಬಾಯ್ಕಾಟ್ ಕರೆ ನೀಡಲಾಗಿತ್ತಾದ್ರೂ ಬಾಯ್ಕಾಟ್ ಎಫೆಕ್ಟ್ ಆಗಿಲ್ಲ.. ಆದ್ರೆ ಪೈರೆಸಿಗೆ ಸಿನಿಮಾ ತುತ್ತಾಗಿದೆ..