BiggBoss Kannada Ott : ಜಯಶ್ರೀ ಬಗ್ಗೆ ಶಾಕಿಂಗ್ ಭವಿಷ್ಯ…!! ಎರೆಡು ಮದುವೆಯಾಗ್ತಾರೆ ಎಂದ ಆರ್ಯವರ್ಧನ್ ಗುರೂಜಿ..!!
ಬಿಗ್ ಬಾಸ್ ಒಟಿಟಿ ಕನ್ನಡ ಮೊದಲ ಸೀಸನ್ ನಲ್ಲಿ ಇದು 3 ನೇ ವಾರ.. ಗಾಗಲೇ ಇಬ್ಬರು ಎಲಿಮಿನೇಟ್ ಆಗಿದ್ದಾರೆ.. ಇನ್ನಿಬ್ಬರು ಅನಾರೋಗ್ಯದಿಂದಾಗಿ ಮನೆಯಿಂದ ಹೊರನಡೆದಿದ್ದಾರೆ..
ಸ್ಪೂರ್ತಿ , ಕಿರಣ್ ಎಲಿಮಿನೇಟ್ ಆಗಿದ್ದಾರೆ.. ಮನೆಯಲ್ಲಿ ಭಿನ್ನ ವಿಭಿನ್ನ ಕ್ಷೇತ್ರಗಳಿಂದ ಬಂದವರು , ಭಿನ್ನ ವ್ಯಕ್ತಿತ್ವದವರಿದ್ದಾರೆ..
ಈ ಪೈಕಿ ಒಬ್ಬರು ನಟಿ ಹಾಗೂ ಉದ್ಯಮಿ ಜಯಶ್ರೀ… ಅಂದ್ಹಾಗೆ ಆರ್ಯವರ್ಧನ್ ಗುರೂಜಿ ಸಹ ಈ ಸೀಸನ್ ನ ಹೈಲೇಟ್.. ಆರ್ಯವರ್ಧನ್ ಗುರೂಜಿ ಅವರು ಆಗಾಗ ನಾದರೂ ಭವಿಷ್ಯ ನುಡಿಯುತ್ತಿರುತ್ತಾರೆ.. ಇದೀಗ ಜಯಶ್ರೀ ಮದುವೆ ಜೀವನದ ಬಗ್ಗೆ ಶಾಕಿಂಗ್ ಭವಿಷ್ಯ ನುಡಿದಿದ್ದಾರೆ..
ಜಯಶ್ರೀ ಅವರು 2 ಮದುವೆಯಾಗಲಿದ್ದಾರೆ ಎಂದಿದ್ದಾರೆ ಗುರೂಜಿ.. ಈಗಾಗಲೇ ಮದುವೆ ಆದ ವ್ಯಕ್ತಿಯ ಜೊತೆ ರಿಲೇಷನ್ ಶಿಪ್ ನಲ್ಲಿ ಇದ್ದೆ ಎಂದು ಬಿಗ್ ಬಾಸ್ ಮನೆಯಲ್ಲಿ ಜಯಶ್ರೀ ಈ ಹಿಂದೆ ಹೇಳಿಕೊಂಡಿದ್ದರು. ಆದರೂ, ಅವರಿಗೆ ಎರಡು ಮದುವೆ ಆಗುತ್ತವೆ ಎಂದು ಗುರೂಜಿ ಭವಿಷ್ಯ ನುಡಿದಿದ್ದಾರೆ.
ನಿನಗೆ ಎರಡು ಮದುವೆ ಆಗುತ್ತವೆ. ಚೆನ್ನಾಗಿರೋ ಮಕ್ಕಳು ಹುಟ್ಟುತ್ತವೆ. ಮಕ್ಕಳನ್ನು ನೀನು ಚೆನ್ನಾಗಿಯೇ ನೋಡಿಕೊಳ್ಳುತ್ತೀಯ.. ನಿನಗೆ ಹುಟ್ಟಿರುವ ಮಕ್ಕಳು ನಿನಗಿಂತಲೂ ಎತ್ತರವಾಗಿ ಬೆಳೆಯುತ್ತವೆ. ನಿನ್ನ ಮಕ್ಕಳು ಪುಣ್ಯ ಮಾಡಿರುತ್ತವೆ ಎಂದು ಭವಿಷ್ಯ ನುಡಿದಿದ್ದಾರೆ.. ಈ ವೇಳೆ ತಾನು ಮದುವೆ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಎನ್ನುತ್ತಾ ತನ್ನ ಬ್ಯುಸಿನೆಸ್ ಬಗ್ಗೆ ಕೇಳಿದ್ದಾರೆ..
ಇದಕ್ಕೆ ಉತ್ತರಿಸಿರುವ ಆರ್ಯವರ್ಧನ್ ಗುರೂಜಿಗಳು ನಿನಗೆ ಯಾರು ಸಿಗುತ್ತಾರೋ ಅವರನ್ನು ಸರಿಯಾದ ರೀತಿಯಲ್ಲಿ ಬಳಸಿಕೊ ಎಂದಿದ್ದಾರೆ. ಅಷ್ಟೇ ಅಲ್ಲ ಹಿಂದೆ ಸಿನಿಮಾಗಳಲ್ಲಿ ಅದೃಷ್ಟ ಪರೀಕ್ಷೆಗಿಳಿದು ಸೋತಿರುವ ಜಯಶ್ರೀ ಮುಂದೆ ಸಿನಿಮಾಗಳು ಗೆಲ್ಲದೇ ಇದ್ದರೂ ಸಿನಿಮಾ ಮಾಡುತ್ತಾರೆ ಎಂದಿದ್ದಾರೆ.. ಅಲ್ಲದೇ ಅಲ್ಲದೇ, ಜಯಶ್ರೀಗೆ ದುಡ್ಡು ಮುಖ್ಯ ಎಂದು , ನಿನಗೆ ಮೋಸ ಮಾಡುವವರು ಇರುತ್ತಾರೆ ಎಂದು ವಾರ್ನಿಂಗ್ ಕೊಟ್ಟಿದ್ದಾರೆ..