Liger : ‘ವಿಜಯ್ ದೇವರಕೊಂಡ ಕೊಂಡ ಅಲ್ಲ , ‘ಅನ್ನಾಕೊಂಡ” , ‘ಅವರ ಅಹಂಕಾರದಿಂದಲೇ ಸಿನಿಮಾಗೆ ತೊಂದರೆಯಾಗಿದ್ದು’..!!
ಬೆಟ್ಟದಷ್ಟು ನಿರೀಕ್ಷೆಯೊಂದಿಗೆ ಆಗಸ್ಟ್ 25 ಕ್ಕೆ ರಿಲೀಸ್ ಆದ ಲೈಗರ್ ಸಿನಿಮಾ ರಿಲೀಸ್ ಆದ ದಿನವೇ ಮಕಾಡೆ ಮಲಗಿದೆ… ಬಹುತೇಕರು ಸಿನಿಮಾದ ಬಗ್ಗೆ ನೆಗೆಟಿವ್ ರಿವ್ಯೂವ್ ಕೊಟ್ಟಿದ್ದಾರೆ.. ವಿಜಯದೇವರಕೊಂಡ ಅವರು ಸಿನಿಮಾದಲ್ಲಿ ಹೈಲೇಟ್ ಆದ್ರೂ ಸಿನಿಮಾ ಮ್ಯಾಜಿಕ್ ಮಾಡಿಲ್ಲ… ಸಿನಿಮಾ ಕೆಟ್ಟದಾಗಿ ಅಂತಲೇ ಬಹುತೇಕ ರಿವ್ಯೂವ್ ಬಂದಿದೆ..ಬಾಕ್ಸ್ ಆಫೀಸ್ ನಲ್ಲಿ ಲೈಗರ್ ಕಮಾಲ್ ಮಾಡ್ತಿಲ್ಲ..
ಹಾಗೆ ನೋಡಿದ್ರೆ ಸಿನಿಮಾ ಸೂಪರ್ ಹಿಟ್ ಆಗಲಿದೆ.. ಪುರಿ ಮತ್ತೆ ರೌಡಿ ವಿಜಯ್ ಕಾಂಬಿನೇಷನ್ ಹಿಸ್ಟರಿ ಕ್ರಿಯೇಟ್ ಮಾಡುತ್ತೆ.. ಸಿನಿಮಾ ಸೂಪರ್ ಹಿಟ್ ಲಿಸ್ಟ್ ಸೇರಲಿದೆ ಅಂತೆಲ್ಲಾ ಲೆಕ್ಕಾಚಾರಗಳಿದ್ದವು.. ಬಹುಕೋಟಿ ಬಜೆಟ್ ಸಿನಿಮಾ ಬಾಕ್ಸ್ ಆಫೀಸ್ ಶೇಕ್ ಮಾಡುತ್ತೆ ಎಂಬ ನಿರೀಕ್ಷೆಯಿತ್ತು.. ಆದ್ರೆ ಮೊದಲನೇ ದಿನವೇ ಸಿನಿಮಾ ಡಲ್ ಪ್ರದರ್ಶನ ಕಂಡಿದ್ದು ಎಲ್ಲಾ ಲೆಕ್ಕಾಚಾರಗಳು ತಲೆಕೆಳಗಾಗಿವೆ..
ಸಿನಿಮಾ ವಿಶ್ವಾದ್ಯಂತ ಸುಮಾರು 3000 ಸ್ಕ್ರೀನ್ ಗಳಲ್ಲಿ ರಿಲೀಸ್ ಆಗಿದೆ.. ಕನ್ನಡದ ತೆಲುಗು , ತಮಿಳಿನಲ್ಲಿ ಸಿನಿಮಾ ಬಿಡುಗಡೆಯಾಗಿದೆ…
ಇದೆಲ್ಲದರ ನಡುವೆ ಈ ಸಿನಿಮಾ ಪ್ಲಾಪ್ ಆಗೋದಕ್ಕೆ ಕಾರಣವೇ ವಿಜಯ್ ದೇವರಕೊಂಡ ಅವರ ಅಹಂಕಾರ ಎಂದು ಸಚಿತ್ರಮಂದಿರ ಮಾಲೀಕರೊಬ್ಬರು ಆಕ್ರೋಶ ಹೊರಹಾಕಿದ್ದಾರೆ..
ಲಾಲ್ ಸಿಂಗ್ ಚಡ್ಡಾ ಸಿನಿಮಾ ಸಪೋರ್ಟ್ ಮಾಡಿದ್ದಕ್ಕೆ ಲೈಗರ್ ಸಿನಿಮಾ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಬಾಯ್ ಕಾಟ್ ಅಭಿಯಾನ ಶುರುವಾಗಿತ್ತು. ಈ ಬಗ್ಗೆ ಸಿನಿಮಾ ಪ್ರಚಾರದ ವೇಳೆ ವಿಜಯ್ ಗೆ ಪ್ರಶ್ನೆ ಕೂಡ ಮಾಡಲಾಗಿತ್ತು. ಆ ವೇಳೆ ವಿಜಯ್ ದೇವರಕೊಂಡ ಮತ್ತಷ್ಟು ನೆಟ್ಟಿಗರನ್ನ ರೊಚ್ಚಿಗೇಳಿಸಿದ್ದರು..
ಬಾಯ್ಕಾಟ್ ಮಾಡೋರು ಮಾಡ್ಲಿ ಬಿಡಿ ,,, ನಮ್ಮ ಸಿನಿಮಾ ನೋಡೋದಕ್ಕೆ ಇಷ್ಟ ಇರೋರು ನೋಡಲಿ ಇಲ್ಲದೇ ಇರೋರು ಟಿವಿ , ಮೊಬೈಲ್ ಗೆ ಬಂದಮೇಲೆ ನೋಡಲಿ ಅಷ್ಟೇ ಎಂದಿದ್ದರು.. ಇದೇ ಕಾರಣಕ್ಕೆ ಸಿನಿಮಾಗೆ ಹೊಡೆತ ಬಿದ್ದಿದೆ ಎನ್ನಲಾಗ್ತಿದೆ,.
ಇದೆಲ್ಲದರ ನಡುವೆ ಮುಂಬೈನ ಗೈಟಿ ಗ್ಯಾಲಕ್ಷಿ ಹಾಗೂ ಮರಾಠ ಮಂದಿರ್ ಚಿತ್ರಮಂದಿರದ ಮಾಲೀಕ ಮನೋಜ್ ದೇಸಾಯಿ ವಿಜಯ್ ವಿರುದ್ಧ ತಿರುಗಿಬಿದ್ದಿದ್ದಾರೆ. ವಿಜಯ್ ದೇವರಕೊಂಡ ಅಹಂಕಾರವೇ ಈ ಸೋಲಿಗೆ ಕಾರಣವೆಂದು ಟೀಕಿಸಿದ್ದಾರೆ.
ವಿಜಯ್ ಹೀಗೆ ಅಹಂಕಾರದಿಂದ ಮಾತನಾಡಿದ್ದರಿಂದಲೇ ಹೀಗಾಗಿದೆ. “ವಿಜಯ್ ಕೊಂಡ ಅಲ್ಲ ಅನಕೊಂಡ ಎಂದು ಕಿಡಿಕಾರಿದ್ದಾರೆ.. ಅಹಂಕಾರವಿರೋ ವಿಜಯ್ ದೇವರಕೊಂಡ ಮತ್ತೆ ವಾಪಸ್ ತೆಲುಗು ಹಾಗೂ ತಮಿಳು ಸಿನಿಮಾಗಳನ್ನು ಮಾಡಲಿ. ನಮ್ಮ ಸಿನಿಮಾವನ್ನು ಬಾಯ್ ಕಾಟ್ ಮಾಡಲಿ ಅಂತ ನೀವ್ಯಾಕೆ ಹೇಳುತ್ತಿದ್ದೀರಾ.. ಓಟಿಟಿಯಲ್ಲೂ ಜನರು ಸಿನಿಮಾವನ್ನು ನೋಡುವುದಿಲ್ಲ. ನಿಮ್ಮ ಈ ವರ್ತನೆ ಅಡ್ವಾನ್ಸ್ ಬುಕಿಂಗ್ ಮೇಲೆ ಪರಿಣಾಮ ಬೀರುತ್ತೆ ಎಂದು ಹೇಳಿದ್ದಾರೆ..