Yash : ಬಾಲಿವುಡ್ ನಲ್ಲೂ ಯಶ್ ನಂಬರ್ 1 , ಹೀಗೆ ಹೇಳಿದ್ದೂ ಕೂಡ ಬಾಲಿವುಡ್ ನಟರೇ..!!
ಇಂದು ಭಾರತದಾದ್ಯಂತ ರಾಕಿ ಭಾಯ್ ಆಗಿಯೇ ಕೋಟ್ಯಾಂತರ ಅಭಿಮಾನಿಗಳ ಹೃದಯ ಗೆದ್ದಿರುವ ಯಶ್ KGF 2 ಮೂಲಕ ಇಂಡಿಯನ್ ಸ್ಟಾರ್ ಆಗಿದ್ದಾರೆ.. ಲವರ್ ಬಾಯ್ ಆಗಿ ಡಿಫರೆಂಟ್ ಮ್ಯಾರಿಸಮ್ , ಡೈಲಾಗ್ಸ್ , ಆಟಿಟ್ಯೂಡ್ ನಿಂದಲೇ ಗುರಿತಿಸಿಕೊಂಡು ಅಭಿಮಾನಿಗಳ ಅಣ್ತಮ್ಮನಾಗಿ , ಕಿರಾತಕನಾಗಿ ಜನರಿಗೆ ಇಷ್ಟವಾಗಿ ರಾಜಾಹುಲಿಯಾಗಿ ಅಬ್ಬರಿಸಿ , ರಾಮಾಚಾರಿಯಾಗಿ ಮೆರೆದ ಯಶ್ ರಾಕಿ ಭಾಯ್ ಆಗಿ ಹವಾ ಸೃಷ್ಟಿಸಿದ್ಧಾರೆ.,.
ಮೊಗ್ಗಿನ ಮನಸ್ಸು ಸಿನಿಮಾ ಮೂಲಕ ಸಿನಿಮಾರಂಗಕ್ಕೆ ಎಂಟ್ರಿಯಾದ ಗಜಕೇಸರಿ , ರಾಜಧಾನಿಯಲ್ಲಿ ಭರ್ಜರಿಯಾಗಿಯೇ ಮಿಂಚಿದರು.. 18 ಸಿನಿಮಾಗಳನ್ನ ಯಶ್ ಈವರೆಗೂ ಮಾಡಿದ್ದಾರೆ.. ಯಶ್ ಅವರ 19 ನೇ ಸಿನಿಮಾದ ಅಪ್ ಡೇಟ್ ಗಾಗಿ ಅಭಿಮಾನಿಗಳು ಜಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ..
ಅಂದ್ಹಾಗೆ ಯಶ್ ಗೆ ಬಾಲಿವುಡ್ ನಿಂದಲೂ ಆಫರ್ ಗಳು ಸಿಗುತ್ತಿವೆ.. ಮುಂದೆ KGF 3 ಬರಬಹುದು ಎಂದೂ ಹೇಳಲಾಗ್ತಿದೆ.. ನರ್ತನ್ ಜೊತೆಗೆ ಸಿನಿಮಾ ಮಾಡ್ತಾರಾ ಅನ್ನೋ ವದಂತಿಯೂ ಇದೆ..
ಇಂಡಿಯಾದಲ್ಲಿ ಯಶ್ ಮೇನಿಯಾ ಹೇಗಿದೆ ಅನ್ನೋದು ಎಲ್ರಿಗೂ ಗೊತ್ತೇ ಇದೆ.. KGF 2 ಸಿನಿಮಾ ಆದ ಮೇಲೆ ಯಶ್ ಗೆ ದೇಶದ ಮೂಲೆ ಮೂಲೆಯಲ್ಲೂ ಅಭಿಮಾನಿಗಳಾಗಿದ್ದಾರೆ…
ಹಿಂದಿ ಸಿನಿಮಾಗಳಿಗೆ ಪ್ರಸ್ತುತ ಸೌತ್ ಸಿನಿಮಾಗಳು ದುಸ್ವಪ್ನದಂತೆ ಕಾಡುತ್ತಿವೆ.. ಹಿಂದೆ ಸೌತ್ ಸಿನಿಮಾಗಳಂದ್ರೆ ಕೇವಲವಾಗಿ ನೋಡ್ತಿದ್ದವರಿಗೆ ಈಗ ಇಂಡಿಯಾದ ಟಾಪ್ 10 ಸಿನಿಮಾಗಳಲ್ಲಿ ಹೆಸರುಳಿಸಿಕೊಳ್ಳಲೂ ಹೆಣಗಾಡುವ ಸ್ಥಿತಿ ನಿರ್ಮಾಣವಾಗಿದೆ..
ಕನ್ನಡ ಅಭಿಮಾನಿಗಳಷ್ಟೇ ಅಲ್ಲ ಇಡೀ ದೇಶಾದ್ಯಂತ ರಾಕಿ ಭಾಯ್ ಅಭಿಮಾನಿಗಳನ್ನ ಸಂಪಾದಿಸಿದ್ದಾರೆ.. ಎಲ್ಲಿ ನೋಡಿದ್ರೂ ರಾಕಿ ಹವಾ ಜೋರಾಗಿದೆ..
ಇದೆಲ್ಲದರ ನಡುವೆ ಬಾಲಿವುಡ್ ನಲ್ಲಿ ಯಶ್ ನಂಬರ್ 1 ಎಂಬ ಹೇಳಿಕೆಯನ್ನ ಬಾಲಿವುಡ್ ನಟರೊಬ್ಬರು ಕೊಟ್ಟಿದ್ದಾರೆ..
ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಶಾಹಿದ್, ಬಾಲಿವುಡ್ ನಲ್ಲಿ ಈ ವರ್ಷ ನಂಬರ್ ಒನ್ ಪಟ್ಟ ಯಾರಿಗೆ ಸಲ್ಲುತ್ತದೆ ಎಂದು ಪ್ರಶ್ನೆ ಮಾಡಿದಾಗ ಹಿಂದೂ ಮುಂದೂ ಯೋಚನೆ ಮಾಡದೇ ಯಶ್ ಹೆಸರನ್ನ ಹೇಳಿದ್ದಾರೆ.
ಈ ಉತ್ತರದಿಂದ ಶಾಕ್ ಆದ ಕರಣ್ ಮತ್ತೊಮ್ಮೆ ಇದೇ ಪ್ರಶ್ನೆ ಮಾಡಿದಾಗಲೂ ಮತ್ತದೇ ಹೆಸರನ್ನ ಹೇಳಿದ ಶಾಹೀದ್ ಯಶ್ ಬಾಲಿವುಡ್ ನ ನಂಬರ್ 1 ನಟ ಎಂದಿದ್ದಾರೆ..