Bollywood : ‘ಬಾಲಿವುಡ್ ನಲ್ಲಿ ಸ್ಟಾರ್ ಗಳ ಮಾರಾಟವಾಗ್ತಿದೆ , ಸೌತ್ ನಲ್ಲಿ ಕಥೆ ಹೇಳಲಾಗ್ತಿದೆ’ : ಅನುಪಮ್ ಖೇರ್
ಒಂದು ಕಾಲದಲ್ಲಿ ಭಾರತೀಯ ಸಿನಿಮಾರಂಗ ಅಂದ್ರೆ ಬಾಲಿವುಡ್ ಮಾತ್ರವೇ , ಮಿಕ್ಕೆಲ್ಲಾ ಸಿನಿಮಾರಂಗಗಳು ಲೆಕ್ಕಕ್ಕೆ ಇಲ್ಲ ಎಂಬಂತೆ ಮೆರೆದಿದ್ದ ಬಾಲಿವುಡ್ ಸೌತ್ ಸಿನಿಮಾರಂಗವನ್ನ ಕಡೆಗಣಿಸಿತ್ತು.. ಆದ್ರೆ ಇದೇ ಬಾಕಿವುಡ್ ಸೌತ್ ಸಿನಿಮಾಗಳ ರೀಮೇಕ್ ಮಾಡೋದಕ್ಕೆ ಮಾತ್ರ ಮುಜುಗರ ಪಟ್ಟುಕೊಳ್ತಿರಲಿಲ್ಲ..
ಆದ್ರೆ ಇದೇ ಬಾಲಿವುಡ್ ಪಾಲಿಗೆ ಮುಳುವಾಗಿದ್ದು.. ಅದ್ಯಾವಾಗ ಬಾಲಿವುಡ್ ಬರೀ ರೀಮೇಕ್ ಸಿನಿಮಾಳನ್ನೇ ಮಾಡೋಕೆ ಶುರು ಮಾಡಿತೋ ಆಗಿನಿಂದ ಜನರು ಒರಿಜಿನಾಲಿಟಿ ಕಡೆಗೆ ವಾಲಲು ಆರಂಭಿಸಿದ್ರು.. ಅಂದ್ರೆ ಸೌತ್ ಸಿನಿಮಾಗಳು ಹಿಂದಿಗೆ ಡಬ್ಬಿಂಗ್ ಆಗಕಲು ಶುರುವಾಗಿ ಜನರು ಆ ಕಡೆ ಹೆಚ್ಚು ವಾಲಿದ್ರು…
ಕಡೆಗೆ ವಾಲಲು ಆರಂಭಿಸಿದ್ರು.. ಅಂದ್ರೆ ಸೌತ್ ಸಿನಿಮಾಗಳು ಹಿಂದಿಗೆ ಡಬ್ಬಿಂಗ್ ಆಗಕಲು ಶುರುವಾಗಿ ಜನರು ಆ ಕಡೆ ಹೆಚ್ಚು ವಾಲಿದ್ರು…
ಈ ಹೊತ್ತಲ್ಲೇ ಪ್ಯಾನ್ ಇಂಡಿಯನ್ ಕಿಚ್ಚು ಹೊತ್ತಿಸಿದ್ದು ರಾಜಮೌಳಿ ಅವರ ಬಾಹುಬಲಿ , ಬಾಹುಬಲಿ 2.. ಈ ಸಿನಿಮಾಗಳು ಸೆನ್ಷೇಷನ್ ಕ್ರಿಯೇಟ್ ಮಾಡಿ ಬಾಲಿವುಡ್ ನ ಬೆಚ್ಚಿಸಿತ್ತು.. ಈ ಸಿನಿಮಾದ ಕಲೆಕ್ಷನ್ ಇದುವರೆಗೂ ಯಾರಿಂದಲೂ ಬೀಟ್ ಮಾಡಲಾಗಿಲ್ಲ..
ಇಂಡಿಯನ್ ಸಿನಿಮಾ ಇಂಡಸ್ಟ್ರಿಯಲ್ಲಿ ಹಿಸ್ಟರಿ ಕ್ರಿಯೇಟ್ ಮಾಡಿದ್ದು ಬಾಹುಬಲಿ.. ಆನಂತರ ಒಂದು ರೇಂಜ್ ಗೆ ರೇಂಜ್ ಗೆ ಅಬ್ಬರಿಸಿ ಹಿಂದಿ ಬೆಲ್ಟ್ ನಲ್ಲಿ ಬಾಲಿವುಡ್ ಹೀರೋ ಸಿನಿಮಾಗಳನ್ನ ಡಮ್ಮಿ ಮಾಡಿದ್ದು ಪುಷ್ಪ.. ನಂತರ ಅಬ್ಬರಿಸಿದ್ದ RRR ಆ ನಂತರ ಇಡೀ ದೇಶಾದ್ಯಂತ ಸಂಚಲ ಸೃಷ್ಟಿ ಮಾಡಿದ್ದ ರಾಕಿ ಭಾಯ್.. ಕೆಜಿಎಫ್ 2 ಹವಾ ಯಾವ ಲೆವೆಲ್ ನಲ್ಲಿತ್ತು ಗೊತ್ತೇ ಇದೆ.. ಆ ನಂತರ ಚಾರ್ಲಿ , ವಿಕ್ರಮ್ ಈಗ ವಿಕ್ರಾಂತ್ ರೋಣ ಅಬ್ಬರಿಸುತ್ತಿದೆ..
ನಂತರ ಲೈಗರ್ ಅಬ್ಬರಿಸುತ್ತೆ ಅಂತಲೇ ಹೇಳಲಾಗಿತ್ತಾಧ್ರೂ ಲೈಗರ್ ನಿರೀಕ್ಷೆ ಹುಸಿಗೊಳಿಸಿದೆ.. ಅಂದ್ಹಾಗೆ ಕಾರ್ತಿಕೇಯ 2 ಈವರೆಗೂ ಬಾಲಿವುಡ್ ಬಾಕ್ಸ್ ಆಫೀಸ್ ನಲ್ಲಿ ಅಬ್ಬರಿಸುತ್ತಿದೆ..
ಬಾಲಿವುಡ್ ನಲ್ಲಿ 2022 ರಲ್ಲಿ ಅಬ್ಬರಿಸಿದ ಸಿನಿಮಾ ಅನ್ನೋಕಿಂತ ಅಬ್ಬರಿಸಿದ ಒಂದೇ ಒಂದು ಬಾಲಿವುಡ್ ಸಿನಿಮಾ ಅಂದ್ರೆ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ.. ಈ ಸಿನಿಮಾ ದೇಶಾದ್ಯಂತ ಜನರನ್ನ ಒಟ್ಟುಗೂಡಿಸಿತ್ತು.. ಒಂದು ದೊಡ್ಡ ಅಲೆಯನ್ನೇ ಸೃಷ್ಟಿಸಿತ್ತು.. 20 ಕೋಟಿ ಬಜೆಟ್ ಸಿನಿಮಾ 250 ಕೋಟಿ ರೂಪಾಯಿ ಕಲೆಕಲ್ಷನ್ ಮಾಡಿ ಹಿಸ್ಟರಿ ಬರೆದಿತ್ತು.. ಈ ಸಿನಿಮಾದಲ್ಲಿ ಅನುಪಮ್ ಖೇರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು..
ಅಂದ್ಹಾಗೆ ನಿಖಿಲ್ ನಟನೆಯ ಕಾರ್ತಿಕೇಯ 2 ಸಿನಿಮಾದಲ್ಲೂ ಒಂದು ವಿಶೇಷ ಪಾತ್ರದಲ್ಲಿ ಅನುಪಮ್ ಖೇರ್ ನಟಿಸಿದ್ದರು.. ಈ ಸಿನಿಮಾ ಬಾಲಿವುಡ್ ನ ಸ್ಟಾರ್ ಗಳ ಸಿನಿಮಾಗಳನ್ನೇ ,ಕಾಡೆ ಮಲಗಿಸಿದೆ… ಇದೇ ಸಿನಿಮಾದ ಸಕ್ಸಸ್ ಪಾರ್ಟಿಯನ್ನೂ ಸಹ ಹಮ್ಮಿಕೊಳ್ಳಲಾಗಿತ್ತು.. ಈ ಕಾರ್ಯಕ್ರಮದಲ್ಲಿ ಅನುಪಮ್ ಖೇರ್ ಸಹ ಭಾಗವಹಿಸಿದ್ದರು.. ಈ ವೇಳೆ ಬಾಲಿವುಡ್ ಹಾಗೂ ಸೌತ್ ಸಿನಿಮಾಗಳ ಬಗ್ಗೆ ಮಾತನಾಡಿದ ಅನುಪಮ್
‘ ಬಾಲಿವುಡ್ ಇಂಡಸ್ಟ್ರಿ ಸ್ಟಾರ್ ಗಳನ್ನ ಮಾರಾಟ ಮಾಡುತ್ತಿದ್ದರೆ, ಸೌತ್ ಅದ್ಬುತವಾಗಿ ಕಥೆ ಹೇಳುತ್ತಿದೆ. ನಾವು ಪ್ರೇಕ್ಷಕರಿಗಾಗಿ ಸಿನಿಮಾ ಮಾಡುತ್ತೇವೆ. ನೀವು ಯಾವ ದಿನ ಅವರನ್ನ ಕೀಳಾಗಿ ನೋಡುತ್ತೀರೋ ಆಗಿನಿಂದಲೇ ಸಮಸ್ಯೆಗಳು ಪ್ರಾರಂಭವಾಗುತ್ತವೆ.
ನಾನು ತೆಲುಗು ಚಿತ್ರಗಳಿಂದ ತುಂಬಾ ಕಲಿತಿದ್ದೇನೆ. ತಮಿಳು ಮತ್ತು ಮಲಯಾಳಂನಲ್ಲಿಯೂ ಸಿನಿಮಾ ಮಾಡಿದ್ದೇನೆ. ಅವರು ಯಾವುದೇ ಇಂಡಸ್ಟ್ರಿ ಅನುಸರಿಸುತ್ತಿಲ್ಲ. ಸೌತ್ ಇಂಡಸ್ಟ್ರಿ ಕಥೆಗಳನ್ನು ಹೇಳಿದರೆ, ಬಾಲಿವುಡ್ ಸ್ಟಾರ್ಗಳನ್ನು ಮಾರಾಟ ಮಾಡುತ್ತದೆ’ ಎಂದು ಹೇಳಿದ್ದಾರೆ.