ಬೆಟ್ಟದಷ್ಟು ನಿರೀಕ್ಷೆಯೊಂದಿಗೆ ಆಗಸ್ಟ್ 25 ಕ್ಕೆ ರಿಲೀಸ್ ಆದ ಲೈಗರ್ ಸಿನಿಮಾ ರಿಲೀಸ್ ಆದ ದಿನವೇ ಮಕಾಡೆ ಮಲಗಿದೆ… ಬಹುತೇಕರು ಸಿನಿಮಾದ ಬಗ್ಗೆ ನೆಗೆಟಿವ್ ರಿವ್ಯೂವ್ ಕೊಟ್ಟಿದ್ದಾರೆ.. ವಿಜಯದೇವರಕೊಂಡ ಅವರು ಸಿನಿಮಾದಲ್ಲಿ ಹೈಲೇಟ್ ಆದ್ರೂ ಸಿನಿಮಾ ಮ್ಯಾಜಿಕ್ ಮಾಡಿಲ್ಲ… ಸಿನಿಮಾ ಕೆಟ್ಟದಾಗಿ ಅಂತಲೇ ಬಹುತೇಕ ರಿವ್ಯೂವ್ ಬಂದಿದೆ..ಬಾಕ್ಸ್ ಆಫೀಸ್ ನಲ್ಲಿ ಲೈಗರ್ ಕಮಾಲ್ ಮಾಡ್ತಿಲ್ಲ..
ಹಾಗೆ ನೋಡಿದ್ರೆ ಸಿನಿಮಾ ಸೂಪರ್ ಹಿಟ್ ಆಗಲಿದೆ.. ಪುರಿ ಮತ್ತೆ ರೌಡಿ ವಿಜಯ್ ಕಾಂಬಿನೇಷನ್ ಹಿಸ್ಟರಿ ಕ್ರಿಯೇಟ್ ಮಾಡುತ್ತೆ.. ಸಿನಿಮಾ ಸೂಪರ್ ಹಿಟ್ ಲಿಸ್ಟ್ ಸೇರಲಿದೆ ಅಂತೆಲ್ಲಾ ಲೆಕ್ಕಾಚಾರಗಳಿದ್ದವು.. ಬಹುಕೋಟಿ ಬಜೆಟ್ ಸಿನಿಮಾ ಬಾಕ್ಸ್ ಆಫೀಸ್ ಶೇಕ್ ಮಾಡುತ್ತೆ ಎಂಬ ನಿರೀಕ್ಷೆಯಿತ್ತು.. ಆದ್ರೆ ಮೊದಲನೇ ದಿನವೇ ಸಿನಿಮಾ ಡಲ್ ಪ್ರದರ್ಶನ ಕಂಡಿದ್ದು ಎಲ್ಲಾ ಲೆಕ್ಕಾಚಾರಗಳು ತಲೆಕೆಳಗಾಗಿವೆ..
ಸಿನಿಮಾ ವಿಶ್ವಾದ್ಯಂತ ಸುಮಾರು 3000 ಸ್ಕ್ರೀನ್ ಗಳಲ್ಲಿ ರಿಲೀಸ್ ಆಗಿದೆ.. ಕನ್ನಡದ ತೆಲುಗು , ತಮಿಳಿನಲ್ಲಿ ಸಿನಿಮಾ ಬಿಡುಗಡೆಯಾಗಿದೆ…
ಇದೆಲ್ಲದರ ನಡುವೆ ಈ ಸಿನಿಮಾ ಪ್ಲಾಪ್ ಆಗೋದಕ್ಕೆ ಕಾರಣವೇ ವಿಜಯ್ ದೇವರಕೊಂಡ ಅವರ ಅಹಂಕಾರ ಎಂದೂ ಕೂಡ ಹೇಳಲಾಗ್ತಿದೆ..
ಆದ್ರೆ ಈ ಸಿನಿಮಾ ರಿಲೀಸ್ ಗೂ ಮುಂಚೆಯಿಂದಲೇ ವಿಜಯ್ ಗೆ ಬಾಲಿವುಡ್ ನಲ್ಲಿ ಸಿಕ್ಕಾಪಟ್ಟೆ ಕ್ರೇಜ್ ಸೃಷ್ಟಿಯಾಗಿದೆ… ಅವರ ಲುಕ್ಸ್ , ರೌಡಿ ಅವತಾರಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ.. ಅಂದ್ಹಾಗೆ ಲೈಗರ್ ಸಿನಿಮಾ ಬಿಗ್ ಬಜೆಟ್ ಪ್ಯಾನ್ ಇಂಡಿಯಾ ಸಿನಿಮಾ… ಹೀಗಾಗಿಯೇ ಸಹಜವಾಗಿಯೇ ಈ ಸಿನಿಮಾದಲ್ಲಿ ನಟ ನಟಿಯರ ಸಂಭಾವನೆ ಎಷ್ಟಿರಬಹುದೆಂಬ ಚರ್ಚೆಯಾಗ್ತಿರುತ್ತದೆ..
ಮೈಕ್ ಟೈಸನ್, ರಮ್ಯಾ ಕೃಷ್ಣ, ವಿಶು ರೆಡ್ಡಿ, ರೋನಿತ್ ರಾಯ್ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾಗೆ ಮಿಶ್ಮೊರ ಪ್ದರತಿಕ್ಲರಿಯೆ ವ್ಯಕ್ತವಾದ್ರೂ ಸಹ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಪರವಾಗಿಲ್ಲ ಅನ್ನೋ ರೇಂಜ್ ಗೆ ಅಬ್ಬರಿಸಿದೆ..
ಅಂದ್ಹಾಗೆ ಸಿನಿಮಾಗೆ ವಿಜಯ್ ದೇವರಕೊಂಡ ಸುಮಾರು 35 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗ್ತಿದೆ.. ಅನನ್ಯಾ ಪಾಂಡೆಗೆ 3 ಕೋಟಿ ರೂ. ರೋನಿತ್ ರಾಯ್ ಗೆ 1.5 ಕೋಟಿ ರೂ, ರಮ್ಯಾ ಕೃಷ್ಣ 1 ಕೋಟಿ ರೂ ಸಂಭಾವನೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.