Abhishek Ambareesh : ವಾರಿಯರ್ ಅವತಾರದಲ್ಲಿ ಅಭಿಷೇಕ್ ಅಂಬರೀಶ್
ರಾಕ್ ಲೈನ್ ವೆಂಕಟೇಶ್ ನಿರ್ಮಾಣದ ಸಿನಿಮಾ
ಸಾಲು ಸಾಲು ಸಿನಿಮಾಗಳನ್ನು ಲೈನ್ ನಲ್ಲಿ ಇಟ್ಟಿರುವ ಯಂಗ್ ರೆಬಲ್ ಸ್ಟಾರ್ ಅಭಿಶೇಕ್ ಇಂದು ತಮ್ಮ ಹೊಸ ಸಿನಿಮಾವನ್ನು ಘೋಷಣೆ ಮಾಡಿದ್ದಾರೆ.
ಸಂಸದೆ ಸುಮಲತಾ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಈ ಸಿನಿಮಾ ಮೋಷನ್ ಪೋಸ್ಟರ್ ರಿಲೀಸ್ ಮಾಡಲಾಗಿದೆ.
ಸದ್ಯ ರಿಲೀಸ್ ಆಗಿರುವ ಫಸ್ಟ್ ಲುಕ್ ಪೋಸ್ಟರ್ ನಲ್ಲಿ ಅಭಿಶೇಕ್ ವಾರಿಯರ್ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಹೊಸ ಸಿನಿಮಾವನ್ನು ಮದಗಜ ಖ್ಯಾತಿಯ ಮಹೇಶ್ ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ.
ರಾಕ್ ಲೈನ್ ಪ್ರೊಡಕ್ಷನ್ ಈ ಸಿನಿಮಾವನ್ನು ತಯಾರು ಮಾಡುತ್ತಿದೆ.
ಈಗಾಗಲೇ ಎರಡು ಸಿನಿಮಾಗಳನ್ನು ಘೋಷಣೆ ಮಾಡಿರುವ ರಾಕ್ ಲೈನ್ ಸಂಸ್ಥೆ ಇದೀಗ ಅಭಿಶೇಕ್ ಜೊತೆ ಹೊಸ ಸಿನಿಮಾವನ್ನು ಘೋಷಣೆ ಮಾಡಿದೆ.
ಅಂದಹಾಗೆ ಈ ಸಿನಿಮಾಗೆ ಇನ್ನೂ ಟೈಟಲ್ ಇಟ್ಟಿಲ್ಲ.
ಸದ್ಯಕ್ಕೆ ಎಎ04 ಎಂದು ಪೋಸ್ಟರ್ ರಿಲೀಸ್ ಮಾಡಲಾಗಿದೆ.
ದುನಿಯಾ ಸೂರಿ ನಿರ್ದೇಶನದ ಬ್ಯಾಡ್ ಮ್ಯಾನರ್ಸ್ ಸಿನಿಮಾದ ಬಳಿಕ ಅಭಿಷೇಕ್ ಈ ಸಿನಿಮಾಗೆ ಸೈನ್ ಮಾಡಿದ್ದಾರೆ.