BiggBoss Kannada Ott : ಉದಯ್ ಸೂರ್ಯ ಎಲಿಮಿನೇಷನ್ ಗೆ ಇದೇ ಕಾರಣನಾ..???
ಬಿಗ್ ಬಾಸ್ ಕನ್ನಡ ಒಟಿಟಿ ಆಗಸ್ಟ್ 1 ಕ್ಕೆ ಆರಂಭವಾಗಿತ್ತು.. ಈಗಾಗಲೇ 3 ನೇ ಎಲಿಮಿನೇಷನ್ ಕೂಡ ಆಗಿದೆ.. ಮೂರನೇ ವಾರ ಉದಯ್ ಸೂರ್ಯ ಮನೆಯಿಂದ ಹೊರ ನಡೆದಿದ್ದಾರೆ..
ಅಂದ್ಹಾಗೆ ಮೂವರು ಎಲಿಮಿನೇಟ್ ಆಗಿದ್ದು ಇನ್ನಿಬ್ಬರು ಇಂಜುರಿಯಾಗಿ ಮನೆಯಿಂದ ಹೊರನಡೆದಿದ್ದಾರೆ.. ಅಂದ್ರೆ ಒಟ್ಟಾರೆ ಐವರು ಈಗಾಗಲೇ ಮನೆಯಿಂದ ಔಟಾಗಿದ್ದಾರೆ..
ಉದಯ್ ಸೂರ್ಯ ಎಲಿಮಿನೇಷನ್ ಗೆ ಅವರ ವರ್ತನೆಯೇ , ಅವರ ನಡವಳಿಕೆಯೇ ಕಾರಣ ಎಂದು ನೆಟ್ಟಿಗರು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಮಾಡ್ತಾಯಿದ್ದಾರೆ..
ಹೌದು , ಅವರು ಹಿಂಬದಿಯಿಂದ ಅಪಿಕೊಳ್ತಾರೆ ಹಾಗೆ ಹೀಗೆ ಅಂತ ಮಹಿಳಾ ಸ್ಪರ್ಧಿಗಳು ಅವರ ಮೇಲೆ ಸಾಕಷ್ಟು ದೂರುಗಳನ್ನ ಪೇರಿಸುತ್ತಲೇ ಬಂದಿದ್ದು ಗೊತ್ತಿದೆ.. ಈ ವಾರ ಅವರು ಎಲಿಮಿನೇಷನ್ ರೌಂಡ್ ಗೆ ಸೆಲೆಕ್ಟ್ ಆಗ್ತಿದ್ದ ಹಾಗೆಯೇ ಅವರೇ ಈ ವಾರ ಮನೆಯಿಂದ ಆಚೆ ಬರಲಿದ್ದಾರೆಂಬ ನಿರೀಕ್ಷೆ ಇತ್ತು.. ಅಂತೆಯೇ ಔಟಾಗಿದ್ದಾರೆ ಸಹ..
ಮೂರನೇ ವಾರದ ಎಲಿಮಿನೇಷನ್ ನಲ್ಲಿ ಉದಯ್ ಸೂರ್ಯ ಹೊರ ಬಂದಿದ್ದಾರೆ.
ಈ ಬಾರಿ ಏಳು ಮಂದಿ ಸ್ಪರ್ಧಿಗಳು ಎಲಿಮಿನೇಷನ್ ಗೆ ನಾಮಿನೇಟ್ ಆಗಿದ್ದರು.
ಈ ಪೈಕಿ ಉದಯ್ ಸೂರ್ಯ ಅತಿ ಕಡಿಮೆ ವೋಟ್ ಗಳನ್ನು ಪಡೆದುಕೊಂಡಿದ್ದಾರೆ.
ಹೀಗಾಗಿ ಅವರು ಇದೀಗ ದೊಡ್ಮನೆಯಿಂದ ಹೊರ ಬಂದಿದ್ದಾರೆ.
ಈ ವಾರ ಉದಯ್ ಸೂರ್ಯ, ರೂಪೇಶ್ ಶೆಟ್ಟಿ, ಅಕ್ಷತಾ, ಆರ್ಯವರ್ಧನ್, ಚೈತ್ರಾ, ಜಯಶ್ರೀ, ಸೋಮಣ್ಣ ಮೇಲೆ ನಾಮಿನೇಷನ್ ತೂಗುಗತ್ತಿ ಇತ್ತು.
ಈ ಪೈಕಿ ಮೊದಲಿಗರಾಗಿ ಆರ್ಯವರ್ಧನ್ ಸೇವ್ ಆದ್ರೆ, ಆ ಬಳಿಕ ರೂಪೇಶ್ ಶೆಟ್ಟಿ, ಸೋಮಣ್ಣ, ಅಕ್ಷತಾ, ಚೈತ್ರಾ, ಜಯ ಶ್ರೀ ಉಳಿದುಕೊಂಡರು. ಉದಯ್ ಸೂರ್ಯ ಎಲಿಮಿನೇಟ್ ಆದರು.