ಲೈಗರ್…. ಸೆನ್ಷೇಷನಲ್ ಸ್ಟಾರ್… ಟಾಲಿವುಡ್ ನ ರೌಡಿ ಹೀರೋ… ವಿಜಯ್ ದೇವರಕೊಂಡ ನಟನೆ …. ಸೆನ್ಷೇಷನಲ್ ಡೈರೆಕ್ಟರ್ ಪುರಿ ಜಗನ್ನಾಥ್ ಕಾಂಬಿನೇಷನ್ ನ ಬಿಗ್ ಬಜೆಟ್ ಪ್ಯಾನ್ ಇಂಡಿಯಾ ಸಿನಿಮಾ…
ಬೆಟ್ಟದಷ್ಟು ನಿರೀಕ್ಷೆ ಹೊತ್ತು ಬಂದು ಥಿಯೇಟರ್ ಗಳಲ್ಲಿ ಟುಸ್ ಆಗಿದೆ.. ನಿರೀಕ್ಷೆ ಮುಟ್ಟದೇ ಫೇಲ್ ಆಗಿದೆ.. ಬಾಕ್ಸ್ ಆಫೀಸ್ ಶೇಕ್ ಮಾಡದೇ ಇದ್ರು ಪರವಾಗಿಲ್ಲ ಎಂಬಂತೆ ಮೊದಲ ದಿನದ ಕಲೆಕ್ಷನ್ ಇತ್ತಾದ್ರೂ ಸಿನಿಮಾ ಫ್ಲಾಪ್ ಲಿಸ್ಟ್ ಸೇರಿಕೊಂಡಿದೆ..
ಸಿನಿಮಾ ಬಗ್ಗೆ ನೆಗೆಟಿವ್ ರಿವ್ಯೂವ್ ಗಳೇ ಹೆಚ್ಚಾಗಿದೆ.. ಅಂದ್ಹಾಗೆ ಸಿನಿಮಾಗೆ ಅತ್ಯಂತ ಕಳಪೆ IMDB ರೇಟಿಂಗ್ ಸಿಕ್ಕಿದ್ದು , ಇದು ಹುಚ್ಚ ವೆಂಕಟ್ ಸಿನಿಮಾಗಿಂತಲೂ ಕಡಿಮೆಯಿದೆ..
ಈ ಸಿನಿಮಾದಲ್ಲಿ ಮೇನ್ ಹೈಲೇಟ್ ಅಂದ್ರೆ ಇಂಟರ್ ನ್ಯಾಷನಲ್ ಫೈಟರ್ ಮೈಕ್ ಟೈಸನ್…
ಅವರು ಈ ಸಿನಿಮಾ ಮೂಲಕ ಮೊದಲ ಇಂಡಿಯನ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು..
ಅಂದ್ಹಾಗೆ ಈ ಸಿನಿಮಾಗಾಗಿ ಟೈಸನ್ ಅವರು ತೆಗೆದುಕೊಂಡ ಸಂಭಾವನೆ ಬಗ್ಗೆ ಸಾಕಷ್ಟು ಕುತೂಹಲಗಳಿವೆ.. ಹಾಗೆ ನೋಡಿದ್ರೆ ವಿಜಯ್ ದೇವರಕೊಂಡಗಿಂತಲೂ ಹೆಚ್ಚು ಸಂಭಾವನೆ ಸಿಕ್ಕಿರೋದೇ ಮೈಕ್ ಟೈಸನ್ ಗೆ ಎನ್ನಲಾಗ್ತಿದೆ..
ಈ ಸಿನಿಮಾಗಾಗಿ ವಿಜಯ್ ದೇವರಕೊಂಡ 35 ಕೋಟಿ ರುಪಾಯಿಗಳನ್ನು ಪಡೆದುಕೊಂಡಿರುವುದಾಗಿ ತಿಳಿದುಬಂದಿದೆ.
ಇನ್ನು ಸಿನಿಮಾದಲ್ಲಿ ವಿಜಯ್ ದೇವರಕೊಂಡ ಅವರ ತಾಯಿಯಾಗಿ ನಟಿಸಿದ ರಮ್ಯಾಕೃಷ್ಣ ಅವರು ಒಂದು ಕೋಟಿ ರುಪಾಯಿ ಸಂಭಾವನೆ ಪಡೆದುಕೊಂಡಿದ್ದಾರಂತೆ.
ಕೋಚ್ ಆಗಿ ಕಾಣಿಸಿಕೊಂಡ ರೌನಿತ್ ರಾಯ್ 1.5 ಕೋಟಿ, ಅನನ್ಯ ಪಾಂಡೆ ಮೂರು ಕೋಟಿ, ಮೈಕ್ ಟೈಸನ್ 40 ಕೋಟಿ ರುಪಾಯಿಗಳನ್ನು ಸಂಭಾವನೆಯಾಗಿ ಪಡೆದುಕೊಂಡಿದ್ದಾರೆ ಎಂದು ಟಾಲಿವುಡ್ ಮೂಲಗಳು ತಿಳಿಸಿವೆ.