Liger …. ಸೆನ್ಷೇಷನಲ್ ಸ್ಟಾರ್… ಟಾಲಿವುಡ್ ನ ರೌಡಿ ಹೀರೋ… ವಿಜಯ್ ದೇವರಕೊಂಡ ನಟನೆ …. ಸೆನ್ಷೇಷನಲ್ ಡೈರೆಕ್ಟರ್ ಪುರಿ ಜಗನ್ನಾಥ್ ಕಾಂಬಿನೇಷನ್ ನ ಬಿಗ್ ಬಜೆಟ್ ಪ್ಯಾನ್ ಇಂಡಿಯಾ ಸಿನಿಮಾ…
ಬೆಟ್ಟದಷ್ಟು ನಿರೀಕ್ಷೆ ಹೊತ್ತು ಬಂದು ಥಿಯೇಟರ್ ಗಳಲ್ಲಿ ಟುಸ್ ಆಗಿದೆ.. ನಿರೀಕ್ಷೆ ಮುಟ್ಟದೇ ಫೇಲ್ ಆಗಿದೆ.. ಬಾಕ್ಸ್ ಆಫೀಸ್ ಶೇಕ್ ಮಾಡದೇ ಇದ್ರು ಪರವಾಗಿಲ್ಲ ಎಂಬಂತೆ ಮೊದಲ ದಿನದ ಕಲೆಕ್ಷನ್ ಇತ್ತಾದ್ರೂ ಸಿನಿಮಾ ಫ್ಲಾಪ್ ಲಿಸ್ಟ್ ಸೇರಿಕೊಂಡಿದೆ..
ಸಿನಿಮಾ ಬಗ್ಗೆ ನೆಗೆಟಿವ್ ರಿವ್ಯೂವ್ ಗಳೇ ಹೆಚ್ಚಾಗಿದೆ.. ಅಂದ್ಹಾಗೆ ಸಿನಿಮಾಗೆ ಅತ್ಯಂತ ಕಳಪೆ IMDB ರೇಟಿಂಗ್ ಸಿಕ್ಕಿದ್ದು , ಇದು ಹುಚ್ಚ ವೆಂಕಟ್ ಸಿನಿಮಾಗಿಂತಲೂ ಕಡಿಮೆಯಿದೆ..
ಈ ವರ್ಷದ ಅಟ್ಟರ್ ಫಾಫ್ ‘ಲಾಲ್ ಸಿಂಗ್ ಚಡ್ಡಾ’ ಮತ್ತು ‘ರಕ್ಷಾ ಬಂಧನ’ ಚಿತ್ರಗಳಿಂತ ಕಡಿಮೆ ರೆಟಿಂಗ್ ಈ ಸಿನಿಮಾಗೆ ಸಿಕ್ಕಿದೆ…
IMDb ನಲ್ಲಿ ಲೈಗರ್ ಕೇವಲ 1.9 ರೇಟಿಂಗ್ ನೀಡಲಾಗಿದೆ. ಈ ವರ್ಷ ಪ್ರೇಕ್ಷಕರ ಮುಂದೆ ಬಂದ ಚಿತ್ರಗಳಲ್ಲೇ ಇದು ಅತ್ಯಂತ ಕಡಿಮೆ ರೇಟಿಂಗ್ .. IMDb ನಲ್ಲಿ, ‘ಲಾಲ್ ಸಿಂಗ್ ಚಡ್ಡಾ’ ಗೆ 5 ರ ರೇಟಿಂಗ್ ಸಿಕ್ಕಿದೆ. ‘ರಕ್ಷಾ ಬಂಧನ’ 4.6 ರ ರೇಟಿಂಗ್ ನ್ನ ಹೊಂದಿದೆ, ‘Shamshera’ 4.9 ಮತ್ತು ‘Dobaara’ ಗೆ 2.9 ರೇಟಿಂಗ್ ಸಿಕ್ಕಿದೆ.
ಈ ರೇಟಿಂಗ್ಗಳನ್ನು ನೋಡಿದ ಕೆಲವರು ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಈ ಚಿತ್ರದಲ್ಲಿ ಅನನ್ಯಾ ಪಾಂಡೆ ನಾಯಕಿಯಾಗಿ ನಟಿಸಿದ್ದಾರೆ. ಮೈಕ್ ಟೈಸನ್, ರಮ್ಯಾ ಕೃಷ್ಣ, ವಿಶು ರೆಡ್ಡಿ, ರೋನಿತ್ ರಾಯ್ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರ ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಿತ್ತು. ಈ ಚಿತ್ರಕ್ಕಾಗಿ ವಿಜಯ್ ಭಾರೀ ಸಂಭಾವನೆ ತೆಗೆದುಕೊಂಡಿದ್ದಾರೆ. ಅಂದಾಜು ರೂ. 35 ಕೋಟಿ ಸಂಭಾವನೆ ಪಡೆದಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಅನನ್ಯಾ ಪಾಂಡೆ ರೂ.3 ಕೋಟಿ, ರೋನಿತ್ ರಾಯ್ ರೂ. 1.5 ಕೋಟಿ, ರಮ್ಯಾ ಕೃಷ್ಣ ಕೋಟಿ ಕೋಟಿ ಸಂಭಾವನೆ ತೆಗೆದುಕೊಂಡಿದ್ದಾರೆ… ಇನ್ನೂ ಈ ಸಿನಿಮಾದ ಮೇನ್ ಹೈಲೇಟ್ ಮೈಕ್ ಟೈಸನ್ ಅವರಿಗೆ ನಟನೆಗಾಗಿ 40 ಕೋಟಿ ರೂ ಸಂಭಾವನೆ ಸಿಕ್ಕಿದೆ ಎನ್ನಲಾಗಿದೆ..