Shiva 143 Film – ಧೀರೇನ್ ಭಗ್ನಪ್ರೇಮಿ ಅವತಾರಕ್ಕೆ ಜನ ಮೆಚ್ಚುಗೆ …. ಸಿನಿಮಾಗೆ ಪ್ರೇಕ್ಷಕರ ಬಹುಪರಾಕ್..!!
ಅನಿಲ್ ಕುಮಾರ್ ನಿರ್ದೇಶನದ ಶಿವ 143 ಸಿನಿಮಾ ಇಂದು ರಾಜ್ಯದಾದ್ಯಂತ ಅದ್ಧೂರಿಯಾಗಿ ರಿಲೀಸ್ ಆಗಿದೆ.
ಧೀರೇನ್ ರಾಮ್ ಕುಮಾರ್ ಚೊಚ್ಚಲ ಸಿನಿಮಾ ಇದಾಗಿದ್ದು, ಮೊದಲ ಸಿನಿಮಾದಲ್ಲಿಯೇ ಎಲ್ಲರ ಗಮನ ಸೆಳೆದಿದ್ದಾರೆ.
ಈ ಸಿನಿಮಾ ತೆಲುಗಿನ ಆರ್ ಎಕ್ಸ್ 100 ಸಿನಿಮಾದ ರೀಮೇಕ್ ಆಗಿದ್ದು, ಕನ್ನಡದ ನೇಟಿವಿಟಿಗೆ ತಕ್ಕಂತೆ ಚಿತ್ರಕಥೆಯನ್ನ ತಿದ್ದಿದ್ದಾರೆ.
ನಿರ್ದೇಶಕ ಅನಿಲ್ ಕುಮಾರ್ ಅವರು ಚಿತ್ರಕ್ಕೆ ಸಾಧ್ಯವಾದಷ್ಟು ಮಾಸ್ ಹಾಗೂ ಆಕ್ಷನ್ ಇಮೇಜ್ ನೀಡಿದ್ದಾರೆ.
ಧೀರೇನ್ ರಾಮ್ ಕುಮಾರ್ ಮಾಸ್ ಹೀರೋ ಆಗಿ ಭರವಸೆ ಮೂಡಿಸಿದ್ದಾರೆ.
ಫೈಟ್ಸ್, ಡ್ಯಾನ್ಸ್, ಸ್ಕ್ರೀನ್ ಅಪಿಯರೆನ್ಸ್ ಚೆನ್ನಾಗಿದೆ.
ನಟಿ ಮಾನ್ವಿತಾ ತಮ್ಮ ಅಂದ ಚೆಂದವನ್ನು ಸಾಧ್ಯವಾದಷ್ಟು ತೆರೆದಿಟ್ಟಿದ್ದಾರೆ.
ಅವಿನಾಶ್, ಚರಣ್ ರಾಜ್ ಚಿತ್ರದ ದೊಡ್ಡ ಪಿಲ್ಲರ್ ಗಳಾಗಿದ್ದಾರೆ. ಚಿತ್ರ ನೋಡಿದ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.