Vashishta Simha : ಕಂಚಿನ ಕಂಠದ ವಸಿಷ್ ಸಿಂಹ ನಟನೆಗೆ ತೆಲುಗು ಸಿನಿ ಪ್ರೇಕ್ಷಕರು ಫಿದಾ..!!
ಕಂಚಿನ ಕಂಠ…. ತೀಕ್ಷಣ ನೋಟ…. ಡೇರಿಂಗ್ ಲುಕ್ ನಿಂದಲೇ ವಷಿಷ್ಠ ಸಿಂಹ ಗಮನ ಸೆಳೆಯುತ್ತಾರೆ… ನಟನೆ ವಿಚಾರದಲ್ಲಿ ದೂಸ್ರಾ ಮಾತಿಲ್ಲ… ವರ್ಸಟೈಲ್ ನಟ… ವಿಲ್ಲನ್ ಆಗಲಿ ಹೀರೋ ಆಗಲಿ ತಮ್ಮ ಮ್ಯಾನರಿಸಮ್ ನಿಂದಲೇ ಎಲ್ಲರನ್ನ ಅಟ್ರ್ಯಾಕ್ಟ್ ಮಾಡ್ತಾರೆ..
ಅಂದ್ಹಾಗೆ ವಸಿಷ್ಠ ಸಿಂಹ ‘ಓದೆಲಾ ರೇಲ್ವೇ ಸ್ಟೇಷನ್’ ಸಿನಿಮಾ ಮೂಲಕ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ.. ಈ ವಿಚಾರ ಈಗಾಗಲೇ ಎಲ್ರಿಗೂ ಗೊತ್ತೇ ಇದೆ. ಈ ಚಿತ್ರ ಈಗ ‘ಆಹಾ’ ಒಟಿಟಿಯಲ್ಲಿ ಬಿಡುಗಡೆಯಾಗಿದ್ದು, ಚಿಟ್ಟೆ ಅಭಿನಯಕ್ಕೆ ತೆಲುಗು ಸಿನಿ ಪ್ರೇಕ್ಷಕ ಫಿದಾ ಆಗಿದ್ದಾರೆ.
ಈ ಸಿನಿಮಾದಲ್ಲಿ ವಸಿಷ್ಠ ಸಿಂಹ, ತಿರುಪತಿ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಧೋಬಿಯಾಗಿ ಮಿಂಚಿದ್ದಾರೆ. ಇದೂವರೆಗೂ ಮಾಡಿರದಂತಹ ವಿಶಿಷ್ಟ ಪಾತ್ರದಲ್ಲಿ ವಸಿಷ್ಠ ಅಮೋಘವಾಗಿ ಅಭಿನಯಿಸಿದ್ದು, ಚೊಚ್ಚಲ ತೆಲುಗು ಸಿನಿಮಾದಲ್ಲಿಯೇ ಸಿಂಹ ಗೆದ್ದಿದ್ದಾರೆ. ಈ ಚಿತ್ರದಲ್ಲಿ ವಸಿಷ್ಠ ನಾಯಕನಾಗಿಯೂ ಹಾಗೂ ಖಳನಾಯಕನಾಗಿ ಅಬ್ಬರಿಸಿದ್ದಾರೆ.
ಅಂದಹಾಗೇ ‘ಓದೆಲಾ ರೇಲ್ವೇ ಸ್ಟೇಷನ್’ ನೈಜ ಘಟನೆಯಾಧಾರಿತ ಚಿತ್ರವಾಗಿದ್ದು, ಖರೀಮ್ ನಗರದಲ್ಲಿ ನಡೆದ ಘಟನೆಯೊಂದನ್ನು ಇಟ್ಟುಕೊಂಡು ಸಿನಿಮಾ ಮಾಡಲಾಗಿದೆ. ಯುವ ನಿರ್ದೇಶಕ ಅಶೋಕ್ ತೇಜ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಹೆಬಾ ಪಟೇಲ್ ವಸಿಷ್ಠನಿಗೆ ಜೋಡಿಯಾಗಿ ನಟಿಸಿದ್ದಾರೆ.
ಗಾಯಕನಾಗಿ ತೆಲುಗು ಚಿತ್ರಕ್ಕೆ ಪರಿಚಿತರಾಗಿದ್ದ ವಸಿಷ್ಠ ಸಿಂಹ ಈಗ ನಾಯಕನಾಗಿ ತೆಲುಗು ಸಿನಿಮಂದಿಯ ಹೃದಯ ಗೆದ್ದಿದ್ದಾರೆ. ಈ ಮೂಲಕ ತೆಲುಗು ನೆಲದಲ್ಲಿ ಗಾಯನದ ಜೊತೆಗೆ ಕಲಾ ಸೇವೆಯನ್ನೂ ಮುಂದುವರೆಸಲಿದ್ದಾರೆ. ಸದ್ಯ ವಸಿಷ್ಠ Love..ಲಿ, ಹೆಡ್ ಬುಷ್, ಸಿಂಬಾ, ತಲ್ವಾರ್ ಪೇಟೆ, ಡೇವಿಲ್ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.