ಹೊಸಬರ ಸಿನಿಮಾಗಳಿರಲಿ , ಸ್ಟಾರ್ ನಟರ ಸಿನಿಮಾಗಳೇ ಇರಲಿ , ಪ್ರೇಕ್ಷಕರ ತೀರ್ಪೇ ಅಂತಿಮ.. ಸಿನಿಮಾದ ಕಂಟೆಂಟ್ ಹಿಡಿಸಿದ್ರೆ ಹೊಸಬರ ಸಿನಿಮಾಗಳನ್ನ ಜನ ಕೈ ಬಿಡೋದಿಲ್ಲ , ಸಿನಿಮಾ ಕಂಟೆಂಟ್ ಇಷ್ಟವಾಗದೇ ಇದ್ರೆ ಸ್ಟಾರ್ ನಟರ ಸಿನಿಮಾಗಳು ಕೂಡ ಸೋಲಿನ ರುಚಿ ಕಂಡಿವೆ..
ಹೀಗೆಯೇ ಒಂದೊಳ್ಳೆ ಪ್ರೇಮ ಕಥೆಯೊಂದಿಗೆ ಪ್ರೇಕ್ಷಕರ ಮುಂದೆ ಬಂದ ಲವ್ 360 ಡಿಗ್ರಿ ಸಿನಿಮಾ ಈಗ ಗೆದ್ದು ಬೀಗಿದೆ..
ಆಗಸ್ಟ್ 19 ರಂದು ರಿಲೀಸ್ ಆಗಿ ಪ್ರೇಕ್ಷಕರ ಮೆಚ್ಚುಗೆ ಪಡೆದುಕೊಂಡಿರುವ ಸಿನಿಮಾ ಲವ್ 360.
ಸಿನಿಮಾ ಪ್ರಿಯರಿಂದ ಫುಲ್ ಮಾರ್ಕ್ಸ್ ಪಡೆದಿರುವ ಲವ್ 360 ಸಿನಿಮಾ ಸಾಕಷ್ಟು ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ.
ಈ ನಡುವೆ ಈ ಸಿನಿಮಾ ತೆಲುಗು ಮತ್ತು ತಮಿಳಿನಲ್ಲಿ ರಿಮೇಕ್ ಆಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಈ ಎರಡು ಭಾಷೆಗಳಲ್ಲಿ ಸಿನಿಮಾವನ್ನು ರಿಮೇಕ್ ಮಾಡಲು ಖ್ಯಾತ ನಿರ್ಮಾಣ ಸಂಸ್ಥೆ ಮುಂದೆ ಬಂದಿದೆ ಎಂದು ಚಿತ್ರತಂಡ ತಿಳಿಸಿದ್ದು, ಇನ್ನಷ್ಟೆ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಾಗಿದೆ.
ಶಶಾಂಕ್ ಅವರು ನಿರ್ದೇಶನದ ಲವ್ 360 ಸಿನಿಮಾ ಮುಗ್ದ ಪ್ರೇಮಕಥೆಯನ್ನು ಹೊಂದಿದೆ.
ಇದರಲ್ಲಿ ರಚನಾ ಇಂದರ್ ಮತ್ತು ಹೊಸ ಹೀರೋ ಪ್ರವೀಣ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಸಿನಿಮಾದ ಜಗವೇ ನೀನು ಗಳತಿಯೇ ಹಾಡು ಸಾಕಷ್ಟು ವೈರಲ್ ಆಗಿದ್ದು, ಲವ್ ಜೊತೆಗೆ ಮರ್ಡರ್ ಮಿಸ್ಟರಿ ಕಥೆಯನ್ನು ಶಶಾಂಕ್ ಅವರು ಸಿನಿಮಾದಲ್ಲಿ ಹೇಳಿದ್ದಾರೆ.
ಈ ಸಿನಿಮಾದಲ್ಲಿ ಕಾವ್ಯಾಶಾಸ್ತ್ರಿ, ಗೋಪಾಲ ದೇಶಪಾಂಡೆ, ಮಸಲ್ ಮಣಿ, ಸುಜಿತ್, ಡ್ಯಾನಿ ಕುಟ್ಟಪ್ಪ ಮುಂತಾದವರು ನಟಿಸಿದ್ದಾರೆ.