Pavan Kalyan : ‘ಪೋಕಿರಿ’ ಆಯ್ತು ಈಗ ಪವನ್ ಕಲ್ಯಾಣ್ ಜಲ್ಸಾ ಸರದಿ..!! ಥಿಯೇಟರ್ ಗಳಲ್ಲಿ ಜಲ್ಸಾ ರೀ ರಿಲೀಸ್..!!!
ಇತ್ತೀಚೆಗೆ ಸೂಪರ್ ಹಿಟ್ ಸಿನಿಮಾಳನ್ನ ಥಿಯೇಟರ್ ಗಳಲ್ಲಿ ಮರು ಪ್ರಸಾರ ಮಾಡ್ತಿರುವುದು ಒಂದು ರೀತಿ ಟ್ರೆಂಡ್ ಆಗಿ ಬಿಟ್ಟಿದೆ..
ಇತ್ತೀಚೆಗಷ್ಟೇ ಮಹೇಶ್ ಬಾಬು ಅವರ ಬರ್ತ್ ಡೇ ಪ್ರಯುಕ್ತ ಅವರ ಸೂಪರ್ ಹಿಟ್ ಸಿನಿಮಾ ಪೋಕಿರಿಯನ್ನ ಥಿಯೇಟರ್ ಗಳಲ್ಲಿ ರೀ ರಿಲೀಸ್ ಮಾಡಲಾಗಿತ್ತು… ಸಿನಿಮಾದ ವಿಶೇಷ ಪ್ರದರ್ಶನವನ್ನು ಅಮೆರಿಕ ಸೇರಿದಂತೆ ಹಲವೆಡೆ ಆಯೋಜಿಸಲಾಗಿತ್ತು. ಬಂದ ಹಣವನ್ನು ಸಮಾಜ ಸೇವೆಗೆ ಖರ್ಚು ಮಾಡಲಾಗಿತ್ತು.
ಇದೀಗ ಪವನ್ ಕಲ್ಯಾಣ್ ಅವರ ಸಿನಿಮಾದ ಸರದಿ.. ವರ್ಷಗಳ ಹಿಂದೆ ಥಿಯೇಟರ್ ಗಳಲ್ಲಿ ಅಬ್ಬರಿಸಿ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದ್ದ ಜಲ್ಸಾ ಸಿನಿಮಾವನ್ನ ಹಲವೆಡೆ ಅಭಿಮಾನಿಗಳು ರೀ ರಿಲೀಸ್ ಮಾಡಲು ಮುಂದಾಗಿದ್ದಾರೆ..
ಪವನ್ ಕಲ್ಯಾಣ್ ರ ಹಳೆಯ ಸಿನಿಮಾಗಳ ಸ್ಪೆಷಲ್ ಶೋ ಅನ್ನು ಪ್ರಸಾರ ಮಾಡಲಾಗುತ್ತದೆ.. ಪವನ್ ಕಲ್ಯಾಣ್ ನಟನೆಯ ಜಲ್ಸಾ , ತಮ್ಮುಡು ಸಿನಿಮಾಗಳ ವಿಶೇಷ ಶೋ ಅನ್ನು ಹೈದರಾಬಾದ್ ಸೇರಿದಂತೆ ಹಲವು ಕಡೆಗಳಲ್ಲಿ ಪ್ರದರ್ಶಿಸಲಾಗುತ್ತದೆ.
ಆಂಧ್ರ , ತೆಲಂಗಾಣಗಳಲ್ಲಿ , ಪಂಜಾಬ್ ಸೇರಿದಂತೆ ಹಲವು ರಾಜ್ಯಗಳಲ್ಲಿ ಸಿನಿಮಾ ಪ್ರಸಾರವಾಗ್ತಿದೆ.. ಪವನ್ ಕಲ್ಯಾಣ್ ಅಭಿಮಾನಿಗಳು ವಿಶೇಷ ಶೋ ಆಯೋಜನೆ ಮಾಡ್ತಿದ್ದಾರೆ.
ಪವನ್ ಕಲ್ಯಾಣ್ ಸಿನಿಮಾ ರೀ ರಿಲೀಸ್ ಸೆಪ್ಟೆಂಬರ್ 2 ರಂದು ಪವನ್ ಕಲ್ಯಾಣ್ ಅವರ ಹುಟ್ಟುಹಬ್ಬ ಇದ್ದು, ಅದೇ ದಿನ ಹಲವು ಕಡೆಗಳಲ್ಲಿ ಸ್ಪೆಷಲ್ ಶೋಗಳು ನಡೆಯಲಿದೆ. ಅಂದ್ಹಾಗೆ ಹಲವೆಡೆ ಈಗಾಗಲೇ ಥಿಯೇಟರ್ ಗಳ ಮುಂದೆ ಪವನ್ ಕಲಲ್ಯಾಣ್ ಕಟೌಟ್ ಗಳು ರಾರಾಜಿಸುತ್ತಿವೆ..
ಮಲ್ಟಿಪ್ಲೆಕ್ಸ್ ಗಳಲ್ಲಿಯೂ ಸ್ಪೆಷಲ್ ಶೋಗಳು ನಡೆಯಲಿದೆ… ಶೋಗಳಿಗೆ ಟಿಕೆಟ್ ಬುಕಿಂಗ್ ಈಗಾಗಲೇ ಆರಂಭವಾಗಿದೆ..