Cobra : ಬಾಯ್ಕಾಟ್ , ಸ್ಪೆಲಿಂಗ್ ಹೇಳಿ , ಯಾವ ಭಾಷೆ ಹೇಳಿ – ವಿಕ್ರಮ್
ಬಾಲಿವುಡ್ ನಲ್ಲಿ ಬಾಯ್ಕಾಟ್ ಹವಾ ಜೋರಾಗಿದೆ.. ಸ್ಟಾರ್ ಗಳ ಸಿನಿಮಾಗಳೂ ಸಹ ಬಾಯ್ಕಾಟ್ ನ ಟಾರ್ಗೆಟ್ ಆಘ್ತಿವೆ.. ಬಾಯ್ಕಾಟ್ ಗೆ ತುತ್ತಾದ ಲಾಲ್ ಸಿಂಗ್ ಚಡ್ಡಾ , ರಕ್ಷಾಬಂಧನ ಸಿನಿಮಾಗಳು ಕೂಡ ಫ್ಲಾಪ್ ಆಗಿವೆ.. ಮುಂದೆ ಬ್ರಹ್ಮಾಸ್ತ್ರ ಇನ್ನೂ ಹಲವು ಸಿನಿಮಾಗಳಿಗೆ ಬಾಯ್ಕಾಟ್ ಕಂಟಕ ಎದುರಾಗುವ ಸಾಧ್ಯತೆಗಳಿವೆ.. ಇದೆಲ್ಲದರ ನಡುವೆ ಕೇವಲ ಬಾಲಿವುಡ್ ಸಿನಿಮಾಗಳಿಗೆ ಮಾತ್ರವೇ ಬಾಯ್ಕಾಟ್ ಭೀತಿ ಶುರುವಾಗಿಲ್ಲ.. ಸೌತ್ ಸಿನಿಮಾಗಳಿಗೂ ಬಾಯ್ಕಾಟ್ ಕಂಟಕೆ ಎದುರಾಗುವ ಚಾನ್ಸಸ್ ಹೆಚ್ಚಿದೆ.. ಇದಕ್ಕೆ ಉದಾಹರಣೆ ವಿಜಯ್ ದೇವರಕೊಂಡ ಅಭಿನಯದ ಬಹುನಿರೀಕ್ಷೆಯ ಪ್ಯಾನ್ ಇಂಡಿಯನ್ ಸಿನಿಮಾ ಲೈಗರ್..
ಹೌದು.. ಲೈಗರ್ ಗೂ ಬಾಯ್ಕಾಟ್ ಕಂಟಕ ಎದುರಾಗುವ ವಿಚಾರ ಗೊತ್ತೇ ಇದೆ.. ಇದೀಗ ಮತ್ತೊಂದು ಸೌತ್ ನ ಬಹುನಿರೀಕ್ಷೆಯ ಪ್ಯಾನ್ ಇಂಡಿಯನ್ ಸಿನಿಮಾ ಸ್ಟಾರ್ ನಟ ಚಿಯಾನ್ ವಿಕ್ರಮ್ ನಟನೆಯ ಕೋಬ್ರಾ ಸಿನಿಮಾ ವಿಶ್ವಾದ್ಯಂತ ರಿಲೀಸ್ ಆಗಿದೆ.. ಈ ಸಿನಿಮಾವೂ ಸಹ ಥಿಯೇಟರ್ ಗಳಲ್ಲಿ ಧೂಳೆಬ್ಬಿಸುತ್ತಿದೆ..
ಆದ್ರೆ ಸಿನಿಮಾದ ಪ್ರಮೋಷನ್ ವೇಳೆ ಈ ಬಾಯ್ ಕಟ್ ಟ್ರೆಂಡ್ ಗೆ ಪ್ರತಿಕ್ರಿಯಿಸುವಂತೆ ತಮಿಳು ಹೀರೋ ಚಿಯಾನ್ ವಿಕ್ರಂ ಅವರನ್ನ ಮಾಧ್ಯಮದವರು ಕೇಳಿದ್ದಾರೆ.. ಆಗ ಉತ್ತರಿಸಿರುವ ಚಿಯಾನ್ ವಿಕ್ರಮ್ ಬಾಯ್ ಕಟ್ ಸ್ಪೆಲಿಂಗ್ ಹೇಳಿ ನನಗೆ ಬಾಯ್ ಗೊತ್ತು, ಗರ್ಲ್ ಗೊತ್ತು ಕ್ಯಾಟ್ ಬಗ್ಗೆ ಚೆನ್ನಾಗಿ ಗೊತ್ತು. ನೀವು ಯಾವುದರ ಬಗ್ಗೆ ಕೇಳುತ್ತಿದ್ದೀರ ಎಂದು ತಮಾಷೆ ಉತ್ತರ ನೀಡಿದ್ದಾರೆ..
ಅಲ್ಲದೇ ಸದ್ಯ ನಾನು ಕೋಬ್ರಾ ಬಗ್ಗೆ ಯೋಚಿಸುತ್ತಿದ್ದೇನೆ. ಬಾಯ್ ಕಟ್ ಎಂದರೇನು? ನೀವು ಯಾವ ಭಾಷೆಯಲ್ಲಿ ಕೇಳುತ್ತೀರಿ? ಸ್ಪೆಲಿಂಗ್ ಒಮ್ಮೆ ಹೇಳಿ. ‘ನನಗೆ ಬಾಯ್ ಗೊತ್ತು, ಗರ್ಲ್ ಗೊತ್ತು ಕ್ಯಾಟ್ ಬಗ್ಗೆ ಚೆನ್ನಾಗಿ ಗೊತ್ತು ಎನ್ನುತ್ತಾ ಎಲ್ಲರನ್ನೂ ನಗಿಸಿದ್ದಾರೆ..
ಅಂದ್ಹಾಗೆ ಕೋಬ್ರಾ ಸಿನಿಮಾದಲ್ಲಿ KGF ಖ್ಯಾತಿಯ ಕರಾವಳಿ ಚೆಲುವೆ ಶ್ರೀನಿಧಿ ಶೆಟ್ಟಿ ನಾಯಕಿಯಾಗಿ ನಟಿಸಿದ್ದಾರೆ. ಇದು ಅವರ ಮೂರನೇ ಸಿನಿಮಾವಾಗಿದೆ.. ಕನ್ನಡದಲ್ಲಿ KGF , KGF 2 ನಂತರ ತಮಿಳಿನ ಇಂಡಸ್ಟ್ರಿಗೆ ಕೋಬ್ರಾ ಚಿತ್ರದ ಮೂಲಕ ಪಾದಾರ್ಪಣೆ ಮಾಡಿದ್ದಾರೆ…