Ott ಹಾಗೂ ಥಿಯೇಟರ್ ಗಳಲ್ಲಿ ಈ ವಾರ ರಿಲೀಸ್ ಆದ ತೆಲುಗು ಸಿನಿಮಾಗಳು..!!
ಈ ವಾರ ಸಿನಿರಸಿಕರ ಪಾಲಿಗೆ ಹಬ್ಬ ದ್ರೂ ತಪ್ಪಾಗೋದಿಲ್ಲ.. ಎಲ್ಲಾ ಭಾಷೆಯಲ್ಲೂ ಬಹುನಿರೀಕ್ಷೆಯ ಸಿನಿಮಾಗಳು ರಿಲೀಸ್ ಆಗಿವೆ.. ಸ್ಯಾಂಡಲ್ ವುಡ್ ಅಪ್ಪು ಕೊನೆಯದಾಗಿ ನಟಿಸಿರುವ ಡಾರ್ಲಿಂಗ್ ಕೃಷ್ಣ ನಾಯಕನಾಗಿರುವ ಲಕ್ಕಿ ಮ್ಯಾನ್ ರಿಲೀಸ್ ಆಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ..
ಬಾಲಿವುಡ್ ನಲ್ಲಿ ಬಾಯ್ಕಾಟ್ ನಡುವೆಯೂ ಬ್ರಹ್ಮಾಸ್ತ್ರ ಸಿನಿಮಾ ಬಾಕ್ಸ್ ಆಫೀಸ್ ಶೇಕ್ ಮಾಡ್ತಿದೆ.. ಇದೇ ರೀತಿ ತೆಲುಗು , ತಮಿಳು , ಮಲಯಾಳಂ ನಲ್ಲೂ ಸಿನಿಮಾಗಳು ರಿಲೀಸ್ ಆಗಿವೆ…
ಈ ನಡುವೆ ಈ ವಾರ ಒಟಿಟಿಯಲ್ಲೂ ಹಿಟ್ ಸಿನಿಮಾಗಳು ರಿಲೀಸ್ ಆಗಿವೆ.. ಹೌದು..!! ಒಟಿಟಿಯಲ್ಲೂ ಸಿನಿಮಾಗಳು ರಿಲೀಸ್ ಆಗಿ ಒಳ್ಳೆ ವೀವ್ಸ್ ಆಗ್ತಿದೆ..
ಅಂದ್ಹಾಗೆ ತೆಲುಗಿನಲ್ಲಿ ‘ಸೀತಾರಾಮಂ’ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗಿದೆ.. ಈ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ದು ಪವರ್ ಫುಲ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.. ಈ ಸಿನಿಮಾ ಸೂಪರ್ ಹಿಟ್ ಆಗಿದ್ದು , ಥಿಯೇಟರ್ ಗಳಲ್ಲಿ ಭರ್ಜರಿ ಪ್ರದರ್ಶನ ಕಂಡಿದೆ.. ಸಿನಿಮಾವನ್ನು ಹನು ರಾಘವ್ಪುಡಿ ನಿರ್ದೇಶನ ಮಾಡಿದ್ದಾರೆ.
ಅಂದ್ಹಾಗೆ ಥಿಯೇಟರ್ ಗಳಲ್ಲಿ ಈ ವಾರ ರಿಲೀಸ್ ಆದ ತೆಲುಗು ಸಿನಿಮಾಗಳ ಪಟ್ಟಿ ಇಲ್ಲಿದೆ..
ತೆಲುಗಿನ ಐದು ಸಿನಿಮಾಗಳು ಬಿಡುಗಡೆ ಆಗಿದೆ.. ಶರ್ವಾನಂದ ನಟಿಸಿರುವ ‘ಒಕೆ ಒಕ ಜೀವಿತಂ’ ಸಿನಿಮಾ ತೆರೆಗೆ ಬಂದಿದೆ. ಸಿನಿಮಾದಲ್ಲಿ ಶರ್ವಾನಂದ ಜೊತೆಗೆ ನಾಗಾರ್ಜುನ ಪತ್ನಿ ಅಮಲಾ ಸಹ ನಟಿಸಿದ್ದಾರೆ. ಇದರ ಹೊರತಾಗಿ ‘ಕೊತ್ತ ಕೊತ್ತಗ’ ‘ರಹಸ್ಯ’ ಹೆಸರಿನ ಥ್ರಿಲ್ಲರ್ ಸಿನಿಮಾ ರಿಲೀಸ್ ಆಗಿದೆ..