Ponniyan Selvan 1 : ಅಬ್ಬಾ..!!! ಇಷ್ಟು ದುಬಾರಿ ಮೊತ್ತಕ್ಕೆ ಒಟಿಟಿಗೆ ಸೇಲಾಯ್ತಾ ‘ಪೊನ್ನಿಯನ್ ಸೆಲ್ವನ್’..??
ಸ್ಟಾರ್ ನಿರ್ದೇಶಕ ಮಣಿರತ್ನಂ ನಿರ್ದೇಶನದ ಭಾರತೀಯ ಸಿನಿಮಾರಂಗದ ಬಹುನಿರೀಕ್ಷೆಯ ಮಲ್ಟಿ ಸ್ಟಾರ್ ‘ಇಂಡಿಯನ್’ ಸಿನಿಮಾ PS – 1 ಪೊನ್ನಿಯನ್ ಸೆಲ್ವನ್ (Ponniyan selvan 1)…
ಮದ್ರಾಸ್ ಟಾಕೀಸ್ ಜೊತೆಗೆ ಲೈಕಾ ಪ್ರೊಡಕ್ಷನ್ಸ್ ಸಂಸ್ಥೆಯು ಅದ್ಧೂರಿ ಬಜೆಟ್ ನಲ್ಲಿ ನಿರ್ಮಿಸಿರುವ ಪೊನ್ನಿಯನ್ ಸೆಲ್ವನ್ ಚಿತ್ರದಲ್ಲಿ ವಿಕ್ರಮ್, ಜಯಂ ರವಿ, ಕಾರ್ತಿ, ಐಶ್ವರ್ಯ ರೈ ಮತ್ತು ತ್ರಿಶಾ ಮುಖ್ಯ ಭೂಮಿಕೆಯಲ್ಲಿದ್ದಾರೆ.
ಇತ್ತೀಚೆಗೆ ಸಿನಿಮಾದ ಟ್ರೇಲರ್ ರಿಲೀಸ್ ಆಗಿ ಭಾರೀ ಸೌಂಡ್ ಮಾಡಿದೆ..ಟ್ರೇಲರ್ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸೌಂಡ್ ಮಾಡ್ತಿದೆ.. ಐಶ್ವರ್ಯ , ತ್ರಿಶಾ , ಕಾರ್ತಿ , ಚಿಯಾನ್ ವಿಕ್ರಮ್ , ಫಹಾದ್ ಸೇರಿದಂತೆ ಬಹುಭಾಷೆಯ ಸ್ಟಾರ್ ನಟರ ದಂಡೇ ಈ ಸಿನಿಮಾಗೆ ಒಂದಾಗಿರೋದು ಈ ಸಿನಿಮಾದ ಮೇಲಿನ ನಿರೀಕ್ಷೆ ಹೆಚ್ಚಿಸಿದೆ.. ಈ ಸಿನಿಮಾ ಎರೆಡು ಭಾಗಗಳಲ್ಲಿ ಬರಲಿದೆ.. 5 ಭಾಷೆಗಳಲ್ಲಿ ಬರುತ್ತಿದ್ದು , ಐದೂ ಭಾಷೆಗಳಲ್ಲೂ ಸಿನಿಮಾದ ಟ್ರೇಲರ್ ರಿಲೀಸ್ ಆಗಿ ಸೌಂಡ್ ಮಾಡ್ತಿದೆ..
ಅಂದ್ಹಾಗೆ ಸುಮಾರು 500 ಕೋಟಿ ರೂ ಬಜೆಟ್ ನ ಈ ಸಿನಿಮಾ ಬಾಕ್ಸ್ ಆಫೀಸ್ ನಡುಗಿಸೋದ್ರಲ್ಲಿ ಅನುಮಾನವೇ ಇಲ್ಲ ಎನ್ನುತ್ತಿದ್ದಾರೆ ಸಿನಿಮಾ ಪಂಡಿತರು..
ಆದ್ರೆ ಸಿನಿಮಾ ರಿಲೀಸ್ ಗೂ ಮುನ್ನವೇ ಭರ್ಜರಿ ಕಲೆಕ್ಷನ್ ಮಾಡ್ತಿದೆ..
ಹೌದು..! ಸಿನಿಮಾದ ಒಟಿಟಿ ಹಕ್ಕನ್ನ Amazon Prime Video ಸಂಸ್ಥೆ ಖರೀದಿಸಿದೆ. ಅದು ಕೂಡ ನೂರಾರು ಕೋಟಿಗಳಿಗೆ.. ಮೂಲಗಳ ಪ್ರಕಾರ ಬರೋಬ್ಬರಿ 125 ಕೋಟಿ ರೂಗಳಿಗೆ ಸಿನಿಮಾದ ಒಟಿಟಿ ಹಕ್ಕುಗಳು ಮಾರಾಟವಾಗಿದ್ಯಂತೆ..
ತಮಿಳು, ತೆಲುಗು, ಹಿಂದಿ, ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ ಬರುತ್ತಿರುವ ಚಿತ್ರವು ಸೆಪ್ಟೆಂಬರ್ 30, 2022 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಇದು 10ನೇ ಶತಮಾನದ ಚೋಳ ರಾಜರ ಕಾಲಕ್ಕೆ ಸಂಬಂಧಿಸಿದ ಕಥೆಯಾಗಿದೆ.
ಈ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆ ಇದ್ದು , ಬಾಕ್ಸ್ ಆಫೀಸ್ ನಲ್ಲಿ ಸಿನಿಮಾ ಹೊಸ ದಾಖಲೆ ಬರೆಯುವ ಲೆಕ್ಕಾಚಾರವಿದೆ..
ಬೇಗ ಒಟಿಟಿಯಲ್ಲಿ ಬಿಡುಗಡೆ ಮಾಡುವ ಒಪ್ಪಂದ ಮಾಡಿಕೊಂಡ ಹಿನ್ನೆಲೆ ಸಿನಿಮಾದ ಹಕ್ಕಿಗೆ ಭಾರಿ ಮೊತ್ತವನ್ನು ಅಮೆಜಾನ್ ನೀಡಿದೆ ಎನ್ನಲಾಗುತ್ತಿದೆ. ಅಂದ್ಹಾಗೆ ಪೊನ್ನಿಯನ್ ಸೆಲ್ವನ್ ಎರೆಡೆರೆಡು ಭಾಗಗಳಲ್ಲಿ ಬರುತ್ತಿದೆ.. ಹೀಗಾಗಿ ಒಟಿಟಿಯಲ್ಲಿ ಒಂದು ಭಾಗಕ್ಕೆ ಮಾತ್ರವೇ ಇಷ್ಟು ಮೊತ್ತ ನೀಡುವ ಪ್ಪಂದವಾಗಿದ್ಯಾ..? ಅಥವ ರೆಡೂ ಭಾಗಗಳಿಗೂ ಸೇರಿಸಿ ಒಪ್ಪಂದವಾಗಿದ್ಯಾ ಎಂಬ ವಿಚಾರ ತಿಳಿದಿಲ್ಲ..
ಕಲ್ಕಿ ಕೃಷ್ಣಮೂರ್ತಿಯವರ 1955 ರ ಕಾದಂಬರಿ ಪೊನ್ನಿಯಿನ್ ಸೆಲ್ವನ್ ಆಧಾರಿತ ಚಲನಚಿತ್ರವನ್ನು ಮದ್ರಾಸ್ ಟಾಕೀಸ್ ಮತ್ತು ಲೈಕಾ ಪ್ರೊಡಕ್ಷನ್ಸ್ ಬ್ಯಾನರ್ಗಳ ಅಡಿಯಲ್ಲಿ ನಿರ್ಮಿಸಲಾಗಿದೆ. ಎಆರ್ ರೆಹಮಾನ್ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ.
ಪೊನ್ನಿಯಿನ್ ಸೆಲ್ವನ್ ಮೂಲತಃ ಅದ್ವಿತೀಯ ಚಲನಚಿತ್ರವಾಗಬೇಕೆಂದು ಉದ್ದೇಶಿಸಲಾಗಿತ್ತು, ನಂತರ ಅದನ್ನು ಎರಡು ಭಾಗಗಳಾಗಿ ವಿಭಜಿಸಲಾಯಿತು.
ಚಿತ್ರದ ಮೊದಲ ಭಾಗವು ತಮಿಳು, ಹಿಂದಿ, ತೆಲುಗು, ಮಲಯಾಳಂ ಮತ್ತು ಕನ್ನಡ ಎಂಬ ಐದು ಭಾಷೆಗಳಲ್ಲಿ ಸೆಪ್ಟೆಂಬರ್ 30 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.