Golden Star Ganesh : ನಟಿ ಸ್ವಪ್ನಾ ಪತಿಗೆ ಕೊಟ್ಟ ಮಾತಿನಂತೆಯೇ ಕೆಲಸ ಕೊಡಿಸಿದ ಗಣೇಶ್
ಕಿರುತೆರೆಯಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ನಡೆಸಿಕೊಡುತ್ತಿದ್ದ ಸ್ಮಾರ್ಟ್ ಜೋಡಿ ರಿಯಾಲಿಟಿ ಶೋನ ಫಿನಾಲೆ ಇತ್ತೀಚೆಗೆ ಮುಗಿದಿದೆ..
ಫಿನಾಲೆಯಲ್ಲಿ ಸ್ವಪ್ನ – ಅಶ್ವಿನ್ ಜೋಡಿ ರನ್ನರ್ ಅಪ್ ಆಗುವ ಮೂಲಕ 3 ಲಕ್ಷ ರೂಪಾಯಿ ಗೆದ್ದಿದ್ದಾರೆ.. ಅಂದ್ಹಾಗೆ ಗಣೇಶ್ ಇದೀಗ ಸ್ವಪ್ನಾರಿಗೆ ಕೊಟ್ಟ ಮಾತನ್ನ ಉಳಿಸಿಕೊಂಡಿದ್ದಾರೆ..
ಸ್ವಪ್ನಾ ಪತಿಗೆ ಗಣೇಶ್ ಕೆಲಸ ಕೊಡಿಸಿದ್ದಾರೆ.. ಹಿರಿತೆರೆ ಕಿರುತೆರೆ ಎರಡಲ್ಲೂ ಅಭಿನಯಿಸಿ ಗಮನ ಸೆಳೆದಿರುವ ನಟಿ ಸ್ವಪ್ನಗೆ ಶೋ ಆರಂಭದಲ್ಲಿ ಗಣೇಶ್ ಈ ಭರವಸೆ ನೀಡಿದ್ದರು…
ತಮ್ಮ ಪತಿ ಕೆಲಸಕ್ಕೆ ಹೋಗುವುದಿಲ್ಲ.. 16 ವರ್ಷಗಳಿಂದ ಮನೆಯ ಜವಾಬ್ದಾರಿ ನನ್ನ ಮೇಲೆಯೇ ಇದೆ ಎಂದು ಕಣ್ಣೀರಿಟ್ಟಿದ್ದರು.. ಆಗ ಅವರ ಪತಿಗೆ ಕೆಲಸ ಕೊಡಿಸುವ ಭರವಸೆ ನೀಡಿದ್ದರು ಗಣೇಶ್.. ಆ ಮಾತನ್ನ ಈಗ ಉಳಿಸಿಕೊಂಡಿದ್ದಾರೆ..