ಸ್ಯಾಂಡಲ್ ವುಡ್ ನಲ್ಲಿ ಹಲವಾರು ಸಿನಿಮಾಳಲ್ಲಿ ನಟಿಸಿ ಬಣ್ಣದ ಜಗತ್ತಿನಿಂದ ಮಾಯವಾಗಿಬಿಟ್ಟಿದ್ದ ಹಲವಾರು ನಟಿಯರ ಪೈಕಿಯೇ ಒಬ್ಬರು ಆಕಾಶ್ ಸಿನಿಮಾ ಖ್ಯಾತಿಯ ನಟಿ ಆಶಿತಾ…
ರೋಡ್ ರೋಮಿಯೋ , ತವರಿನ ಸಿರಿ ನಂತಹ ಸಾಕಷ್ಟು ಸಿನಿಮಾಗಳಲ್ಲಿ ಇವರು ಬಣ್ಣ ಹಚ್ಚಿದ್ದರು.. ಇಷ್ಟು ದಿನ ಮರೆಯಾಗಿದ್ದ ಶಿಕಾ ಇಗ ಮತ್ತೆ ಸುದ್ದಿಯಲ್ಲಿದ್ದಾರೆ.. ಅವರ ದು ಹೇಳಿಕೆ ಇದೀಗ ಸ್ಯಾಂಡಲ್ ವುಡ್ ನಲ್ಲಿ ಬಿರುಗಾಳಿ ಎಬ್ಬಿಸಿದೆ..
ಹೌದು..! ತಮಗೆ #metoo ಅನುಭವವಾಗಿದ್ದ ಬಗ್ಗೆ ಮಾತನಾಡಿದ್ದಾರೆ ನಟಿ ಆಶಿತಾ.. ಇದೀಗ ಸೋಷಿಯಲ್ ಮೀಡಿಯಾದಲ್ಲಿ ಆಶಿತಾ ಅವರದ್ದೇ ಸುದ್ದಿಯ ಸದ್ದಾಗಿದೆ..
ಬಣ್ಣದ ಜಗತ್ತೇ ಹಾಗೆ ಹೊರಗಿನಿಂದ ಕಲರ್ ಫುಲ್.. ಒಳಗಿನ ಅಸಲಿಯತ್ತೇ ಬೇರೆ… ಅದ್ರಲ್ಲೂ ಎಲ್ಲಾ ಇಂಡಸ್ಟ್ರಿಯಲ್ಲೂ ಕಾಸ್ಟಿಂಗ್ ಕೌಚ್ ಕಾಟ ಇದೆ..
ಇದೇ ರೀತಿ ತಮಗೆ ಕಿರುಕುಳವಾಗಿದ್ದಕ್ಕೆ ಇಂಡಸ್ಟ್ರಿ ಬಿಟ್ಟಿದ್ದು ಎಂದು ಹೇಳಿಕೊಂಡಿದ್ಧಾರೆ.. ಆಶಿತಾ ತಾವು ನಟನೆ ಮಾಡುತ್ತಿದ್ದ ಸಂದರ್ಭದ ದಿನಗಳನ್ನ ನೆನಪು ಮಾಡಿಕೊಳ್ತಾ 2005-2006 ಸಂದರ್ಭದಲ್ಲಿ ಚಿತ್ರರಂಗದಲ್ಲಿ ಕಮರ್ಷಿಯಲ್ ಜಾಸ್ತಿ ಆಯ್ತು. ರಾಜಕೀಯ, ರಿಯಲ್ ಎಸ್ಟೇಟ್ ಮುಂತಾದ ಕ್ಷೇತ್ರಗಳಿಂದ ನಿರ್ಮಾಪಕರು ಬರಲು ಆರಂಭಿಸಿದರು. ಆಗ ಬೇರೆ ಬೇರೆ ರೀತಿಯ ಡಿಮ್ಯಾಂಡ್ ಮಾಡಲು ಶುರು ಮಾಡಿದರು. ಕೆಟ್ಟ ಡಿಮ್ಯಾಂಡ್ ಗಳಿಗೆ ನಾನು ಒಪ್ಪಿಕೊಳ್ಳಲಿಲ್ಲ. ಅದರಿಂದ ಕೆಲವು ಅವಕಾಶ ತಪ್ಪಿಹೋಯ್ತು. ಅಂಥ ಅವಕಾಶ ಕಳೆದುಕೊಂಡಿದ್ದಕ್ಕೆ ನನಗೆ ಒಂಚೂರು ಬೇಸರ ಇಲ್ಲ
ದೊಡ್ಡ ದೊಡ್ಡ ಚಿತ್ರಗಳ ಅವಕಾಶ ಬಂದರೂ ನನಗೆ ಒಪ್ಪಿಕೊಳ್ಳಲು ಸಾಧ್ಯವಾಗಲಿಲ್ಲ. ಅವರು ಕೇಳಿದ್ದನ್ನು ನಾನು ಮಾಡುತ್ತಿರಲಿಲ್ಲ ಎಂಬ ಕಾರಣಕ್ಕೆ ಸೆಟ್ ನಲ್ಲಿ ನನಗೆ ಕಷ್ಟ ಕೊಟ್ಟಿದ್ದಾರೆ. ಟೇಕ್ ಸರಿಯಿದ್ದರೂ ಕೂಡ ರೀಟೇಕ್ ಕೇಳುತ್ತಿದ್ದರು. ಇದನ್ನು ಮಾಡಿದರೆ ಮಾತ್ರ ಚಾನ್ಸ್ ಕೊಡುತ್ತೇವೆ, ಹೆಚ್ಚಿನ ಪೇಮೆಂಟ್ ಕೊಡುತ್ತೇವೆ ಎನ್ನುತ್ತಿದ್ದರು. ಹಾಗಾಗಿ ನನಗೆ ಈ ಕ್ಷೇತ್ರ ಬೇಡ ಎಂದು ಬಿಟ್ಟು ಹೋದೆ ಎಂದಿದ್ದಾರೆ..
ಅಲ್ಲದೇ ಯಶ್ ಹಾಗೂ ರಾಧಿಕಾ ಪಂಡಿತ್ ಅವರ ಸ್ಯಾಂಡಲ್ ವುಡ್ ವೃತ್ತಿ ಬದುಕಿನ ಮೊದಲ ಹೆಜ್ಜೆಯಾದ ಮೊಗ್ಗಿನ ಮನಸ್ಸು ಸಿನಿಮಾದ ಆಫರ್ ಕೂಡ ತಮಗೆ ಸಿಕ್ಕಿತ್ತು ಎಂದು ಆಶಿತಾ ಹೇಳಿಕೊಂಡಿದ್ಧಾರೆ.. ಆದ್ರೆ ವಿದ್ಯಾಭ್ಯಾಸಕ್ಕಾಗಿ ಈ ಆಫರ್ ಒಪ್ಪಲು ಸಾಧ್ಯವಾಗಲಿಲ್ಲ ಎಂದಿದ್ಧಾರೆ..