ಈ ವಾರ ಥಿಯೇಟರ್ ಗಳಲ್ಲಿ ಕನ್ನಡ , ತೆಲುಗು , ತಮಿಳು , ಹಿಂದಿ , ಮಲಯಾಳಂ ಭಾಷೆಗಳಲ್ಲಿ ಸಿನಿಮಾಗಳು ಒಟಿಟಿಯಲ್ಲಿ ಹಾಗೂ ಥಿಯೇಟರ್ ಗಳಲ್ಲೂ ರಿಲೀಸ್ ಆಗಿ ಅಬ್ಬರಿಸುತ್ತಿವೆ..
ಅಂದ್ಹಾಗೆ ಈ ಬಾರಿ ಒಟಿಟಿಗೆ ಬಂದ ಸಿನಿಮಾಗಳ ಪಟ್ಟಿ ಇಲ್ಲಿದೆ..
ತೆಲುಗಿನ ಸ್ಟಾರ್ ನಟ ರವಿತೇಜ ನಟನೆಯ ರಾಮಾ ರಾವ್ ಆನ್ ಡ್ಯೂಟಿ ಸಿನಿಮಾ ರಿಲೀಸ್ ಆಗಿದೆ.. ಸೋನಿ ಲಿವ್ ಒಟಿಟಿಯಲ್ಲಿ ಬಿಡುಗಡೆ ಆಗಿದೆ. ಈ ಸಿನಿಮಾವು ಜುಲೈ 29 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ಆದರೆ ಉತ್ತಮ ಪ್ರದರ್ಶನ ಕಾಣುವಲ್ಲಿ ವಿಫಲವಾಗಿತ್ತು.
ತೆಲುಗಿನ ಕೆರೊಸಿನ್ ಸಿನಿಮಾ ಕೂಡ ರಿಲೀಸ್ ಆಗಿದೆ.. ತೆಲುಗಿನ ಆಹಾ ಒಟಿಟಿಯಲ್ಲಿ ಸೆಪ್ಟೆಂಬರ್ 16ರಂದು ಬಿಡುಗಡೆ ಆಗಿದೆ.
ಹಿಂದಿಯ ಹೊಸ ಸಿನಿಮಾ ಜೋಗಿ ನೇರವಾಗಿ ಒಟಿಟಿಯಲ್ಲಿ ರಿಲೀಸ್ ಆಗಿದೆ.. ದೆಹಲಿಯಲ್ಲಿ ನಡೆದ ಸಿಖ್ಖರ ಮಾರಣ ಹೋಮದ ಬಗೆಗಿನ ಕತೆಯಾಧಾರಿತ ಸಿನಿಮಾ ಇದಾಗಿದೆ..
ಇದೊಂದು ನಿಜ ಕತೆ ಎಂದು ಚಿತ್ರತಂಡ ಹೇಳಿಕೊಂಡಿದ್ದು, ಸಿಖ್ಖರ ಮಾರಣಹೋಮದ ಸಂದರ್ಭದಲ್ಲಿ ದೆಹಲಿಯಿಂದ ದೊಡ್ಡ ಸಂಖ್ಯೆಯ ಸಿಖ್ಖರನ್ನು ಪಂಜಾಬ್‌ಗೆ ಸ್ಥಳಾಂತರಿಸಿದ ಕತೆಯನ್ನು ಸಿನಿಮಾದಲ್ಲಿ ತೋರಿಸಲಾಗಿದೆ. ಸಿನಿಮಾದಲ್ಲಿ ದಿಲ್ಜಿತ್ ದುಸ್ಸಾಂಜ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.
ಇನ್ನೂ ಹಿಂದಿಯ ಹಾರರ್ ಥ್ರಿಲ್ಲರ್ ದಹನ್ ವೆಬ್ ಸರಣಿ ಡಿಸ್ನಿ ಹಾಟ್ ಸ್ಟಾರ್ ನಲ್ಲಿ ಸ್ಟ್ರೀಮ್ ಆಗ್ತಿದೆ.. ಸೆಪ್ಟೆಂಬರ್ 16 ರಂದು ಇದು ಒಟಿಟಿಯಲ್ಲಿ ಬಿಡುಗಡೆ ಆಗಿದೆ. ಹಳ್ಳಿಯೊಂದರಲ್ಲಿ ಆತ್ಮವೊಂದು ಅಡಗಿದ್ದು , ಅದರ ಭಯ ಜನರಲ್ಲಿ ಇರುತ್ತೆ.. ಆದರೆ ಅಲ್ಲಿಗೆ ಬರುವ ಜಿಲ್ಲಾಧಿಕಾರಿಯೊಬ್ಬರು ಹಳ್ಳಿಯವರ ಮಾತನ್ನೂ ಲೆಕ್ಕಿಸದೇ ಆತ್ಮವನ್ನ ಬಂಧನ ಮುಕ್ತ ಮಾಡುವ ನಂತರದಿಂದ ಅಸಲಿ ಕಥೆ ಶುರುವಾಗುತ್ತದೆ..
ಇನ್ನೂ ಇಂಗ್ಲಿಷ್ ನಲ್ಲಿ ರಿಲೀಸ್ ಆಗಿರುವ ಸಿನಿಮಾಗಳ ಬಗ್ಗೆ ಮಾತನಾಡುವುದಾದ್ರೆ , ಗ್ಲಿಷ್ ನಲ್ಲಿ ಗುಡ್ ನೈಟ್ ಮಾಮಿ ವೆಬ್ ಸರಣಿ , Netflix ನಲ್ಲಿ ಹಾರ್ಟ್ ಬ್ರೇಕೀಂಗ್ ಹೈ , ಡೂ ರಿವೇಂಜ್ , ಅಟೆನ್ ಶನ್ ಸೇರಿದಂತೆ ಇನ್ನೂ ಸಾಕಷ್ಟು ವೆಬ್ ಸರಣಿ ಸಿನಿಮಾಗಳು ಸ್ಟ್ರೀಮ್ ಆಗುತ್ತಿದೆ..