ಅಂತಾರಾಷ್ಟ್ರೀಯ ಕಂಪನಿ ಡಿಸ್ನಿಯ ಭಾರತೀಯ ಅಂಗವಾದ ಸ್ಟಾರ್ ಸ್ಟುಡಿಯೋಸ್ ನಿರ್ಮಿಸಿರುವ ‘ಬ್ರಹ್ಮಾಸ್ತ್ರ ಪಾರ್ಟ್ ಒನ್ ಶಿವ’ ಚಿತ್ರ ಬಿಡುಗಡೆಯಾದ ಎರಡನೇ ವಾರದಲ್ಲಿ ಕಲೆಕ್ಷನ್ ನಲ್ಲಿ ಭರ್ಜರಿ ಜಿಗಿತ ಕಂಡಿದೆ.
ಮೊದಲ ವಾರದಲ್ಲಿ 172.22 ಕೋಟಿ ಗಳಿಸಿದ ಚಿತ್ರಕ್ಕೆ ಎರಡನೇ ವಾರಾಂತ್ಯವೂ ಭರ್ಜರಿಯಾಗಿಯೇ ಕಾಣುತ್ತಿದೆ. ಎರಡನೇ ವಾರದ ಮೊದಲ ದಿನ ಅಂದರೆ ಎರಡನೇ ಶುಕ್ರವಾರದಂದು ಚಿತ್ರವು 10.6 ಕೋಟಿ ಗಳಿಸಿತು ಮತ್ತು ಈಗ ಶನಿವಾರದ ಆರಂಭಿಕ ಅಂಕಿಅಂಶಗಳ ಪ್ರಕಾರ, ಚಿತ್ರವು ದೇಶೀಯ ಬಾಕ್ಸ್ ಆಫೀಸ್‌ನಲ್ಲಿ 15.50 ಕೋಟಿ ರೂಪಾಯಿ ಗಳಿಸಿದೆ. ಇದರೊಂದಿಗೆ ಚಿತ್ರದ ನಿವ್ವಳ ಕಲೆಕ್ಷನ್ 199.32 ಕೋಟಿ ರೂ.ಗೆ ಏರಿದೆ. ಚಿತ್ರದ ಒಟ್ಟು ಕಲೆಕ್ಷನ್ 200 ಕೋಟಿ ಗಡಿ ದಾಟಿದೆ.
ಬ್ರಹ್ಮಾಸ್ತ್ರ ಪಾರ್ಟ್ 1 ಶಿವ ಚಿತ್ರದ ಗಳಿಕೆ ನಿರಂತರವಾಗಿ ಹೆಚ್ಚುತ್ತಿರುವಂತೆ ತೋರುತ್ತಿದೆ.. ಮತ್ತು ಎರಡನೇ ವಾರದಲ್ಲಿ ಈ ಚಿತ್ರವು ಈ ವರ್ಷ ಇದುವರೆಗೆ ಅತಿ ಹೆಚ್ಚು ಗಳಿಕೆ ಮಾಡಿದ ಹಿಂದಿ ಚಿತ್ರ ಕಾಶ್ಮೀರ್ ಫೈಲ್ಸ್ ದಾಖಲೆಯನ್ನು ಮುರಿಯುವ ನಿರೀಕ್ಷೆಯಿದೆ.
ಈ ವರ್ಷ ಬಿಡುಗಡೆಯಾದ ಹಿಂದಿ ಚಿತ್ರಗಳಲ್ಲಿ ‘ಕಾಶ್ಮೀರ್ ಫೈಲ್ಸ್’ ಚಿತ್ರವು 252.90 ಕೋಟಿ ರೂ.ಗಳ ಅತ್ಯಧಿಕ ಕಲೆಕ್ಷನ್ ಗಳಿಸಿದೆ. ಇದರ ನಂತರ, ಇದುವರೆಗೆ ಕಾರ್ತಿಕ್ ಆರ್ಯನ್ ಅವರ ಚಿತ್ರ ‘ಭೂಲ್ ಭುಲೈಯಾ 2’ 185.92 ಕೋಟಿ ಗಳಿಕೆಯೊಂದಿಗೆ ಎರಡನೇ ಸ್ಥಾನದಲ್ಲಿತ್ತು. ‘ಬ್ರಹ್ಮಾಸ್ತ್ರ ಭಾಗ ಒನ್ ಶಿವ’ ಚಿತ್ರದ ಕಲೆಕ್ಷನ್ ಶನಿವಾರ ಇದನ್ನು ಮೀರಿಸಿದೆ..
ಆದ್ರೆ ಲೆಕ್ಕ ನೋಡಿದ್ರೆ ದಿ ಕಾಶ್ಮೀರ್ ಫೈಲ್ಸ್ ರೆಕಾರ್ಡ್ ಬ್ರೇಕ್ ಮಾಡಿದ್ರೂ ಕಾಶ್ಮೀರ್ ಫೈಲ್ಸ್ ಸಿನಿಮಾವೇ ಗೆದ್ದಂತೆ.. ಕಾರಣ ಇಷ್ಟೇ 20 ಕೋಟಿ ಬಜೆಟ್ ನಲ್ಲಿ ಬಂದು 250 ಕೋಟಿ ಕಲೆಕ್ಷನ್ ಮಾಡಿರೋದು ಇಂಡಸ್ಟ್ರಿಯಲ್ ಹಿಟ್ .. ಇನ್ನೂ ಬ್ರಹ್ಮಾಸ್ತ್ರ 410 ಕೋಟಿ ಬಜೆಟ್ ಸಿನಿಮಾ ಈವರೆಗೂ 200 ಕೋಟಿ ಕಲೆಕ್ಷನ್ ಮಾಡಿದೆ..
ಹೀಗಾಗಿ ಕಾಶ್ಮೀರ್ ಫೈಲ್ಸ್ ರೀತಿ ಹಿಟ್ ಅಂದ್ರೆ ಬ್ರಹ್ಮಾಸ್ತ್ರ ತನ್ನ ಬಜೆಟ್ ನ 4 ರಿಂದ 5 ಪಟ್ಟು ಕಲೆಕ್ಷನ್ ಮಾಡಬೇಕಾಗುತ್ತೆ..