Happy Birthday Upendra : ರಿಯಲ್ ಸ್ಟಾರ್ ಗೆ ಅಭಿಮಾನಿಗಳಿಂದ ಶುಭಾಷಯಗಳ ಮಹಾಪೂರ..!!!
ಇಂದು ರಿಯಲ್ ಸ್ಟಾರ್ ಉಪೇಂದ್ರ ವರ ಜನ್ಮದಿನ.. ಹೀಗಾಗಿ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು , ಗಣ್ಯರು ಶುಭಾಷಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ..
ಅಲ್ದೇ ಅವರ ಬರ್ತ್ ಡೇ ಪ್ರಯುಕ್ತ ಸೆಪ್ಟೆಂಬರ್ 17 ರಂದು ಬಹುನಿರೀಕ್ಷೆಯ ಬಿಗ್ ಬಜೆಟ್ ಪ್ಯಾನ್ ಇಂಡಿಯಾ ಸಿನಿಮಾ ಕಬ್ಜದ ಟೀಸರ್ ರಿಲೀಸ್ ಆಗಿದ್ದು , ಟೀಸರ್ ರೋಮಾಂಚನಕಾರಿಯಾಗಿದ್ದು ಜನರಿಂದ ಭರ್ಜರಿ ಮೆಚ್ಚುಗೆ , ಕಮೆಂಟ್ , ಲೈಕ್ಸ್ ವೀವ್ಸ್ ಗಳನ್ನ ಪಡೆಯುತ್ತಿದೆ..
ಉಪೇಂದ್ರ ಅವರು ತಮ್ಮ 54 ನೇ ಹುಟ್ಟಹಬ್ಬವನ್ನ ವಿಶೇಷಞವಾಗಿ ಾಚರಿಸಿಕೊಂಡಿದ್ದಾರೆ.. ಅಭಿಮಾನಿಗಳ ಜೊತೆಗೆ ಮಧ್ಯರಾತ್ರಿ ಬರ್ತ್ ಡೇ ಸೆಲೆಬ್ರೇಟ್ ಮಾಡಿಕೊಂಡಿದ್ದಾರೆ..
ಬೆಂಗಳೂರಿನ ಕತ್ರಿಗುಪ್ಪೆಯಲ್ಲಿನ ಉಪೇಂದ್ರ ಅವರ ನಿವಾಸದ ಬಳಿ ಅಭಿಮಾನಿಗಳು ಮಧ್ಯರಾತ್ರಿಯೇ ಜಮಾಯಿಸಿದ್ದರು.. ಉಪ್ಪಿಗೆ ಅಭಿಮಾನಿಗಳು ಶುಭಕೋರಿದ್ದು , ಅಭಿಮಾನಿಗಳಿಗೆ ಸಿಹಿ ಹಂಚಿ ಉಪೇಂದ್ರ ಸಂಭ್ರಮಿಸಿದ್ದಾರೆ..
ಅಂದ್ಹಾಗೆ ಇಂದು ಡಾ. ವಿಷ್ಣುವರ್ಧನ್ ರ್ಧನ್ ಅವರಿಗೂ ಸಹ ಹುಟ್ಟುಹಬ್ಬ.. ಈ ಪ್ರಯುಕ್ತ ುಪೇಂದ್ರ ವರು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ದಾದನ ಜೊತೆಗಿನ ಫೋಟೋ ಹಂಚಿಕೊಂಡು ಅವರನ್ನ ನೆನೆದಿದ್ದಾರೆ..
ಅಂದ್ಹಾಗೆ ಉಪೇಂದ್ರ ವರು ರಾಜಕಾರಣದಲ್ಲೂ ತೊಡಗಿಸಿಕೊಂಡಿದ್ದಾಋಎ.. ಉತ್ತಮ ಪ್ರಜಾಕೀಯ ಪಕ್ಷದಲ್ಲಿ ತಮ್ಮದೇ ಆದ ಕೆಲ ಸೈದ್ಧಾಂತಿಕಗಳ ಮೂಲಕ ಹಲವು ಅಭಿಮಾನಿಗಳು , ಸಾವಿರಾರು ಅನುಯಾಯಿಗಳನ್ನೂ ಹೊಂದಿದ್ದಾರೆ.. ಸಿನಿಮಾ ವಿಚಾರಕ್ಕೆ ಬರುವುದಾದ್ರೆ ಉಪೇಂದ್ರ ಅವರ ಕಬ್ಜ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ.. ಮತ್ತೊಂದು ಅವರದ್ದೇ ನಿರ್ದೇಶನ ನಟನೆಯ ಸಿನಿಮಾವಾಗಿದೆ ( UI)