ಇಂದು ಸ್ಯಾಂಡಲ್ ವುಡ್ ನಲ್ಲಿ ಒಂದು ವಿಶೇಷ ದಿನ.. ಮೂವರು ದಿಗ್ಗಜ ತಾರೆಯರ ಹುಟ್ಟುಹಬ್ಬವಿಂದು…
ಕರುನಾಡ ದಾದಾ ಸಾಹಸ ಸಿಂಹ ವಿಷ್ಣುವರ್ಧನ್ , ಸ್ಟಾರ್ ನಟಿ ಶ್ರುತಿ , ರಿಯಲ್ ಸ್ಟಾರ್ ಹಾಗೂ ಪ್ರಜಾಕೀಯ ರಾಜಕೀಯ ಪಕ್ಷದ ಸಂಸ್ಥಾಪಕ ಉಪೇಂದ್ರ ಅವರ ಹುಟ್ಟಹಬ್ಬ..
ದಿವಂಗತ ವಿಷ್ಣದಾದನ ಭಿಮಾನಿಗಳು ಎಂದಿನಂತೆ ಇಂದೂ ಸಹ ಅರ್ಥಪೂರ್ಣ ರೀತಿಯಲ್ಲಿ ಅವರ ಹುಟ್ಟಹಬ್ಬ ಾಚರಣೆ ಮಾಡುತ್ತಿದ್ದಾರೆ.. ಸುಮರು ದಿನಗಳ ಹಿಂದೆಯಿಂದಲೇ ಯಜಮಾನೋತ್ಸವದ ತಯಾರಿಯಲ್ಲಿ ಅಭಿಮಾನಿಗಳು ತೊಡಗಿದ್ದರು.. ದಾದನ ಕಟೌಟ್ ಗಳು ಸಹ ರೆಡಿಯಾಗಿದ್ದವು.. ಇನ್ನೂ ಆಟೋ ಸ್ಟಾಂಡ್ ಸೇರಿ ಹಲವೆಡೆ ವಿಷ್ಣವರ್ಧನ್ ಅವರ ಅಭಿಮಾನಿಗಳಿಂದು ವಿಶೇಷ ಪೂಜೆ , ಅನ್ನಸಂತರ್ಪಣೆಯಂತಹ ುತ್ತಮ ಕೆಲಸಗಳ ಮೂಲಕ ವಿಷ್ಣವರ್ಧನ್ ಅವರ ಹುಟ್ಟುಹಬ್ಬಾ ಆಚರಿಸಲಿದ್ದಾರೆ..
ಎಲ್ಲೆಡೆ ವಿಷ್ಣುವರ್ಧನ್ ಅವರ ಕಟೌಟ್ ಗಳು ರಾರಾಜಿಸುತ್ತಿವೆ..
ಸೋಷಿಯಲ್ ಮೀಡಿಯಾದಲ್ಲಿ ಹಲವಾರು ತಾರೆಯರು , ಗಣ್ಯರು , ರಾಜಕೀಯ ಮುಖಂಡರು , ವಿಷ್ಣವರ್ಧನ್ ಅವರ ಜನ್ಮದಿನಕ್ಕೆ ಪೋಸ್ಟ್ ಗಳನ್ನ ಹಾಕುತ್ತಾ ವಿಷ್ಣುದಾದ ನೆನಪು ಮಾಡಿಕೊಳ್ತಿದ್ದಾರೆ..
ಉಪೇಂದ್ರ ಅವರ ಬರ್ತ್ ಡೇಗೆ ಅಭಿಮಾನಿಗಳು , ತಾರೆಯರು , ಆಪ್ತರು ಸೋಷಿಯಯಲ್ ಮೀಡಿಯಾ ಮೂಲಕ ಶುಭಾಷಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.,. ಅಲ್ದೇ ಅವರ ಬರ್ತ್ ಡೇ ಪ್ರಯುಕ್ತ ಸೆಪ್ಟೆಂಬರ್ 17 ರಂದು ಬಹುನಿರೀಕ್ಷೆಯ ಬಿಗ್ ಬಜೆಟ್ ಪ್ಯಾನ್ ಇಂಡಿಯಾ ಸಿನಿಮಾ ಕಬ್ಜದ ಟೀಸರ್ ರಿಲೀಸ್ ಆಗಿದ್ದು , ಟೀಸರ್ ರೋಮಾಂಚನಕಾರಿಯಾಗಿದ್ದು ಜನರಿಂದ ಭರ್ಜರಿ ಮೆಚ್ಚುಗೆ , ಕಮೆಂಟ್ , ಲೈಕ್ಸ್ ವೀವ್ಸ್ ಗಳನ್ನ ಪಡೆಯುತ್ತಿದೆ..
ಅಂದ್ಹಾಗೆ ಉಪೇಂದ್ರ ವರು ರಾಜಕಾರಣದಲ್ಲೂ ತೊಡಗಿಸಿಕೊಂಡಿದ್ದಾಋಎ.. ಉತ್ತಮ ಪ್ರಜಾಕೀಯ ಪಕ್ಷದಲ್ಲಿ ತಮ್ಮದೇ ಆದ ಕೆಲ ಸೈದ್ಧಾಂತಿಕಗಳ ಮೂಲಕ ಹಲವು ಅಭಿಮಾನಿಗಳು , ಸಾವಿರಾರು ಅನುಯಾಯಿಗಳನ್ನೂ ಹೊಂದಿದ್ದಾರೆ.. ಸಿನಿಮಾ ವಿಚಾರಕ್ಕೆ ಬರುವುದಾದ್ರೆ ಉಪೇಂದ್ರ ಅವರ ಕಬ್ಜ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ.. ಮತ್ತೊಂದು ಅವರದ್ದೇ ನಿರ್ದೇಶನ ನಟನೆಯ ಸಿನಿಮಾವಾಗಿದೆ ( UI)
ಸ್ಯಾಂಡಲ್ ವುಡ್ ನಲ್ಲಿ ಒಂದು ಕಾಲದಲ್ಲಿ ಟಾಪ್ ನಟಿಯಾಗಿ ಮಿಂಚಿ ಈಗಲೂ ಬಣ್ಣದ ಜಗತ್ತಿನಲ್ಲಿ ಸಕ್ರಿಯರಾಗಿರುವ ೆವರ್ ಗ್ರೀನ್ ನಟಿ ಶ್ರುತಿ ಅವರಿಗೂ ಕೂಡ ಅಭಿಮಾನಿಗಳು ಶುಭಾಷಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ… ನಟಿ ಶೃತಿ ಸಿನಿಮಾಗಳಲ್ಲಿ ನಟಿಸುತ್ತಿರುವುದು ಕಡಿಮೆಯಾದ್ರೂ ರಿಯಾಲಿಟಿ ಶೋಗಳ ಮೂಲಕವೇ ಮಿಂಚುತ್ತಿದ್ದಾರೆ.. ಪ್ರಸ್ತುತ ಗಿಚ್ಚಿ ಗಿಲಿ ಗಿಲಿ ಶೋನ ಜಡ್ಜ್ ಆಗಿದ್ದಾರೆ..
ಶ್ಋಉತಿ ಅವರು ಬಿಗ್ ಬಾಸ್ ಮೂರನೇ ಸೀಸನ್ ನ ವಿನ್ನರ್ ಕೂಡ ಆಗಿದ್ದರು.. ಶೃತಿ ಅವರಿಗೆ ಆಪ್ತರು , ಅಭಿಮಾನಿಗಳೋಉ ಸೋಷಿಯಲ್ ಮೀಡಿಯಾ ಮೂಲಕ ಶುಭಾಷಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ..